ಭಾರತ- ಬಾಂಗ್ಲಾ ಗಡಿಯಲ್ಲಿ ಭೂಕಂಪನ

ನವದೆಹಲಿ, ಜೂನ್ 3, ಭಾರತ- ಬಾಂಗ್ಲಾದೇಶದ ಗಡಿ ಭಾಗದಲ್ಲಿ ಬುಧವಾರ ಮುಂಜಾನೆ  ಭೂಕಂಪನದ ಅನುಭವವಾಗಿದೆ.ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆ  4.3ರಷ್ಟು ಎಂದು ದಾಖಲಾಗಿದೆ. ಬುಧವಾರ ಬೆಳಗ್ಗೆ ಗಡಿ ಭಾಗದಲ್ಲಿ ಭೂಕಂಪವಾಗಿದ್ದು,  ದೆಹಲಿಯಲ್ಲಿರುವ ರಾಷ್ಟ್ರೀಯ ಭೂಕಂಪನ ಕೇಂದ್ರ ಇದನ್ನು ಖಚಿತಪಡಿಸಿದೆ.ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್ಸಿಎಸ್)ದಲ್ಲಿರುವ ರಿಕ್ಟರ್ ಮಾಪಕದಲ್ಲಿ 4.3 ತೀವ್ರತೆಯ ಕಂಪನ ದಾಖಲಾಗಿದೆ ಎಂದೂ ಹೇಳಲಾಗಿದೆ.