ಟೆಹರಾನ್, ಮೇ ೮, ಕೊರೊನಾ ವೈರಾಸ್ ಬಾಧೆಯಿಂದ ತೀವ್ರವಾಗಿ ನಲುಗಿರುವ ಇರಾನ್ ದೇಶದಲ್ಲಿ ಗುರುವಾರ ಮದ್ಯರಾತ್ರಿ ರಾತ್ರಿ ಭೂಕಂಪ ಸಂಭವಿಸಿರುವ ಬಗ್ಗೆ ವರದಿಯಾಗಿದೆ. ಉತ್ತರ ಇರಾನ್ ಪ್ರದೇಶದಲ್ಲಿ ಗುರುವಾರ ಮಧ್ಯರಾತ್ರಿ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ ೫.೧ರಷ್ಟು ದಾಖಲಾಗಿದೆ.ಭೂಕಂಪದಿಂದಾಗಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದು, ಇತರ ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಇರಾನ್ ಆರೋಗ್ಯ ಸಚಿವೆ ಕೈನೂಷ್ ಜಹಾನ್ ಪೂರ್ ಶುಕ್ರವಾರ ಮುಂಜಾನೆ ಟ್ವೀಟ್ ಮಾಡಿದ್ದಾರೆ ಟೆಹರಾನ್ ನಗರದ ಸಮೀಪದಲ್ಲಿರುವ ದಮಾವಂದ್ ಪ್ರಾಂತ್ಯದ ೧೦ ಕಿಲೋಮೀಟರ್ ದೂರದಲ್ಲಿ ಕಂಪನದ ಕೇಂದ್ರ ಬಿಂದು ಆವೃತ್ತಗೊಂಡಿದೆ ಇಜ್ಞಾನಿಗಳು ಹೇಳಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.