ಇಡುಕ್ಕಿ, ಫೆ 28 : ಕೇರಳದ ಇಡುಕ್ಕಿ ಜಿಲ್ಲೆಯ ಜಲಾಶಯದ ಬಳಿ ಎರಡು ಬಾರಿ ಲಘು ಭೂಕಂಪನ ಸಂಭವಿಸಿವೆ.
ಗುರುವಾರ ರಾತ್ರಿ 10.15ಕ್ಕೆ ಭೂಕಂಪ ಸಂಭವಿಸಿದ್ದು, 10.22ಕ್ಕೆ ಮತ್ತೊಮ್ಮೆ ಭೂಮಿ ಕಂಪಿಸಿದೆ ಎಂದು ಮೂಲಗಳು ತಿಳಿಸಿವೆ.
ಭೂಮಿ ಕಂಪನದಿಂದ ಹೆದರಿದ ಜನರು ಮನೆ, ಕಟ್ಟಡಗಳಿಂದ ಹೊರಗೆ ಓಡಿ ಬಂದಿದ್ದಾರೆ. ಹಾನಿಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.