ನವದೆಹಲಿ, ಮೇ 10, ದೇಶದ ರಾಜಧಾನಿ ದೆಹಲಿಯಲ್ಲಿ ಭಾನುವಾರ ಮಧ್ಯಾಹ್ನ 3.4 ಕಂಪನಾಂಕ ತೀವ್ರತೆಯ ಲಘು ಭೂಕಂಪ ಸಂಭವಿಸಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಅಧಿಕಾರಿಯೋರ್ವರ ಪ್ರಕಾರ, ಮಧ್ಯಾಹ್ನ 1.45ಕ್ಕೆ ಭೂಕಂಪದ ಅನುಭವವಾಗಿದೆ. ಉತ್ತರಪ್ರದೇಶದ ಗಾಜಿಯಾಬಾದ್ ನಗರದಲ್ಲಿ ಕಂಪನದ ಮೂಲ ಸ್ಥಾನ ಗುರುತಿಸಲಾಗಿದ್ದು, ಭೂಮಿಯಿಂದ 5 ಕಿಮೀ ಆಳದಲ್ಲಿತ್ತು. ಈ ಸ್ಥಳದ 77.2 ಡಿಗ್ರಿ ಅಕ್ಷಾಂಶ ಮತ್ತು 28.8 ಡಿಗ್ರಿ ರೇಖಾಂಶದವರೆಗೆ ಕಂಪನದ ಅನುಭವವಾಗಿತ್ತು ಎಂದು ಅವರು ತಿಳಿಸಿದ್ದಾರೆ.