ಹಿಮಾಚಲ ಪ್ರದೇಶದ ಚಾಂಬಾದಲ್ಲಿ ಲಘು ಭೂಕಂಪ

ಶಿಮ್ಲಾ, ಏ 9,ಹಿಮಾಚಲ ಪ್ರದೇಶದ ಚಾಂಬಾದಲ್ಲಿ ಗುರುವಾರ ಬೆಳಗಿನ ಜಾವ ಲಘು ಕಂಪನದ ಅನುಭವವಾಗಿದೆ.ರಾತ್ರಿ 1.54 ಕ್ಕೆ ಸಂಭವಿಸಿದ ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 2.2 ರಷ್ಟು ದಾಖಲಾಗಿತ್ತು ಎಂದು ಹವಾಮಾನ ಇಲಾಖೆ ಮುಖ್ಯಸ್ಥ ಮನ್ ಮೋಹನ್ ಸಿಂಗ್ ತಿಳಿಸಿದ್ದಾರೆ.ಚಾಂಬಾ ಜಿಲ್ಲೆಯ ಗುಡ್ಡಗಾಡುಗಳಲ್ಲಿ 32.7 ಡಿಗ್ರಿ ಉತ್ತರ ಅಕ್ಷಾಂಶದಲ್ಲಿ, 76.1 ಡಿಗ್ರಿ ಪೂರ್ವ ರೇಖಾಂಶದಲ್ಲಿ 2 ಕಿಲೋಮೀಟರ್ ಆಳದಲ್ಲಿ ಭೂಕಂಪದ ಕೇಂದ್ರ ಬಿಂದು ಇತ್ತು ಎಂದು ಅವರು ಹೇಳಿದ್ದಾರೆ.ಯಾವುದೇ ಸಾವು ನೋವಿನ ಕುರಿತು ವರದಿಯಾಗಿಲ್ಲ. ಇದೇ ಸ್ಥಳದಲ್ಲಿ ಏಪ್ರಿಲ್ 6 ರಂದು ಸಹ ಭೂಕಂಪವಾಗಿತ್ತು.