ನವದೆಹಲಿ, ಮೇ ೩೦,ಶುಕ್ರವಾರ ರಾತ್ರಿ ಕೇವಲ ಒಂದು ತಾಸು ಅವಧಿಯಲ್ಲಿ ಎರಡು ಬಾರಿ ಭೂಮಿ ಕಂಪಿಸಿದ ಘಟನೆ ಹರಿಯಾಣ ರಾಜ್ಯದ ರೋಹಟಕ್, ದೆಹಲಿ ಪ್ರದೇಶದಲ್ಲಿ ಕಂಡು ಬಂದಿದೆ.
ಹರಿಯಾಣದ ರೋಹಟಕ್ ಕೇಂದ್ರವಾಗಿ ದೆಹಲಿ ಪ್ರದೇಶದಲ್ಲಿ ಶುಕ್ರವಾರ ರಾತ್ರಿ ಎರಡು ಭಾರಿ ಭೂ ಕಂಪನ ಸಂಭವಿಸಿದೆ.ಹರಿಯಾಣ ರಾಜ್ಯದ ರೋಹಟಕ್ ನಗರ ಕೇಂದ್ರವಾಗಿ ಶುಕ್ರವಾರ ರಾತ್ರಿ ೯.೮ ಗಂಟೆಗೆ ಭೂಕಂಪನ ಸಂಭವಿಸಿದ್ದು ಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ ೪.೫ರಷ್ಟು ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪನ ಮಾಹಿತಿ ಕೇಂದ್ರ ತಿಳಿಸಿದೆ. ದೆಹಲಿಯ ಸುತ್ತಮುತ್ತ ೫೦ ಕಿ.ಮೀ ಪ್ರದೇಶದಲ್ಲಿ ಭೂಕಂಪನ ಸಂಭವಿಸಿದ್ದು, ಎರಡನೇ ಭೂಕಂಪನ ಶುಕ್ರವಾರ ರಾತ್ರಿ ೧೦ ಗಂಟೆಗೆ ಸಂಭವಿಸಿದೆ. ಎರಡನೇ ಬಾರಿಯ ಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ ೨.೬ ರಷ್ಟು ದಾಖಲಾಗಿದೆ ಎಂದು ನ್ಯಾಷನಲ್ ಸೆಂಟರ್ ಫಾರ್ ಸೆಸ್ಮಾಲಾಜಿ ತಿಳಿಸಿದೆ. ದೆಹಲಿಯಲ್ಲಿ ಈ ತಿಂಗಳು ನಾಲ್ಕು ಬಾರಿ ಭೂಮಿ ಕಂಪಿಸಿದೆ. ಫರೀದಾ ಬಾದ್ ಜಿಲ್ಲೆಯಲ್ಲಿ ಗುರುವಾರ ಭೂಮಿ ಕಂಪಿಸಿತ್ತು. ಮೇ ೧೫ ರಂದು ದೆಹಲಿಯಲ್ಲಿ ಕಂಪನ ಉಂಟಾಗಿತ್ತು. ಮೇ ೧೦ರಂದು ಸಹ ದೆಹಲಿ ಸುತ್ತಮುತ್ತ ಭೂಮಿ ಕಂಪಿಸಿದೆ. ಕೊರೊನಾ ಭಯದಿಂದ ನಲುಗಿರುವ ಜನರಿಗೆ ಭೂಕಂಪನದಿಂದಾಗಿ ಮನೆ ಬಿಟ್ಟು ಹೊರಗೆ ಓಡಿಬರುವಂತೆ ಮಾಡಿದೆ.