ಅರಣ್ಯ ಇಲಾಖೆಯಿಂದ ಅರ್ಲಿ ಪ್ಲಾಂಟೇಶನ್- ಹಸಿರು ಪ್ರಿಯರಿಗೆ ಸಂತಸ

ಹಾವೇರಿ೨೫:ರಸ್ತೆ ಬದಿಯ ಬರಡಾಗಿರುವ ಸ್ಥಳಗಳ, ಖಾಲಿ ಬಿದ್ದಿರುವ ಗೋಮಾಳ ಜಾಗ, ಸರಕಾರಿ ಭೂಮಿಗಳಲ್ಲಿ  ಮಳೆಗಾಲ ಪೂರ್ವದಲ್ಲಿ ಸಸಿ ನೆಡುವ ಮಹತ್ತರವಾದ ಯೋಜನೆ  ಕಾರ್ಯಕ್ರಮ ಜಿಲ್ಲೆಯಲ್ಲಿ ಯಶಸ್ವಿಯಾಗಿದೆ. ಸಸಿಗಳು ಬೆಳೆದು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿವೆ.

ಸಾಮಾಜಿ ಅರಣ್ಯ ವಿಭಾಗದ ವತಿಯಿಂದ ಕೈಗೊಂಡಿರುವ ಅರ್ಲಿ ಪ್ಲಾಂಟೆಶನ್ ಜಿಲ್ಲೆಯ ಎಲ್ಲ ಭಾಗಗಳಲ್ಲಿ ಯಶಸ್ವಿಯಾಗಿದೆ. ರಾಣೆಬೆನ್ನೂರ ಹಾಗೂ ಬ್ಯಾಡಗಿ ತಾಲೂಕಿನಲ್ಲಿ ಕಳೆದ ಎರಡು ವರ್ಷದಲ್ಲಿ ಮಾಡಿದ ನೇಡುತೋಪುಗಳು ಇಂದು ಪರಿಸರ ಪ್ರೇಮಿಗಳಲ್ಲಿ ಮಂದಹಾಸ ತಂದಿದೆ.

ಮಳೆಗಾಲ ಆರಂಭವಾಗುವ ಮುನ್ನ ಕಳೆದ ವರ್ಷದ ಎಪ್ರೀಲ್ ಹಾಗೂ ಮೇ ಮಾಹೆಯಲ್ಲಿ  ಗುಂಡಿ ತೆಗೆಸಿ ಖಾಲಿ ಗುಂಡಿಗಳಿಗೆ ಮೊದಲು ನೀರು ತುಂಬಿಸಿ ನಂತರ ಸಸಿ ನೆಟ್ಟು ನೀರುಣಿಸಿದ ಪರಿಣಾಮವಾಗಿ ನಾಟಿ ಮಾಡಿದ ಗಿಡಗಳಯ ಬತ್ತದೆ ಚಿಗುರೊಡೆದು ಜೂನ್ ತಿಂಗಳ ಮಳೆಗೆ  ಬಹು ಬೇಗ ಬೇರು ಬಿಟ್ಟು ರಸ್ತೆ ಬದಿಯಲ್ಲಿ ಹಸಿರಿನಿಂದ ಮೆರಗು ನೀಡುತ್ತಿವೆ.

ಅರ್ಲಿ ಪ್ಲಾಂಟೇಶನ್ ಕ್ರಮ: ಮಳೆಗಾಲ ಪೂರ್ವದಲ್ಲಿ ನೆಡುತೋಪು ಮಾಡಲು ಆಯ್ಕೆ ಮಾಡಿರುವ ಸ್ಥಳಗಳಲ್ಲಿ ಗುಂಡಿ ತೆಗೆಸಿ ಹಾಗೆ ಬಿಡಲಾಗುತ್ತದೆ. ಬಿಸಿಲಿನ ತಾಪಕ್ಕೆ ನೆಲ ಹೆಚ್ಚೂ ಕಾದಿರುತ್ತದೆ, ನೀರು ಹಾಕಿದ ಕೂಡಲೇ ಬಹು ಬೇಗ ಇಂಗಿಕೊಳ್ಳುತ್ತದೆ, ಅದೇ ಸಮಯದಲ್ಲಿ ಮೇ ಹಾಗೂ ಜೂನ್ ತಿಂಗಳಿನಲ್ಲಿ ಸಸಿಗಳು ಹಚ್ಚಲಾಗುತ್ತದೆ, ಒಂದು ವೇಳೆ ಮಳೆ ಬರದೇ ಹೋದರೆ ಟ್ಯಾಂಕರ್ ಮೂಲಕ ಸಸಿಗಳಿಗೆ ನೀರುಣಿಸಲಾಗುತ್ತದೆ. ಮಳೆಗಾಲ ಬೇಗ ಪ್ರಾರಂಭವಾದರೆ ಮಳೆನೀರಿನಿಂದ ಮತ್ತಷ್ಟು ಬೇಗ ಸಸಿಗಳು ಚಿಗುರೊಡೆದು ಉಲುಸಾಗಿ ಬೆಳೆಯುತ್ತದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ರಾಣೆಬೆನ್ನೂರ ತಾಲೂಕಿನ ದೇವರಗುಡ್ಡದಲ್ಲಿ 8 ಹೆಕ್ಟೇರ್ ಬ್ಲಾಕ್ ಮಾಡಲಾಗಿದೆ, ಕಜ್ಜರಿಯಿಂದ ಕೂನಬೇವು ಗ್ರಾಮದವರೆಗೆ 3 ಕಿ,ಮೀ ಸಸಿಗಳ ಅರ್ಲಿ ನೆಡುತೋಪು ಮಾಡಲಾಗಿದೆ. ಕಾಕೋಳದಿಂದ ಬುಡಪನಹಳ್ಳಿಯವರೆಗೆ 3ಕಿ,ಮೀ ರಸ್ತೆ ಬದಿಯಲ್ಲಿ ನೇರಳೆ, ಹೊಂಗೆ, ತಪಸಿ, ಬೇವು ಸಸಿಗಳನ್ನು ಹಾಕಲಾಗುತ್ತದೆ, ಬ್ಲಾಕ್ಗಳಲ್ಲಿ ಅತ್ತಿ, ಆಲ, ಅರಳಿ, ನೆರಳೆ ಸಸಿಗಳನ್ನು ಹಚ್ಚಲಾಗುತ್ತದೆ. ಸದ್ಯದಲ್ಲಿಯೇ ಮತ್ತೆ ಹೊಸ ರಸ್ತೆ ಮತ್ತು ಖಾಲಿ ಇರುವ ಬ್ಲಾಕ್ ಆಯ್ಕೆ ಮಾಡಿ ಗುಂಡಿ ತೆಗೆಸಲಾಗುತ್ತದೆ. ಇದೇ ರೀತಿಯಾಗಿ ಜಿಲ್ಲೆಯಲ್ಲಿ ರಸ್ತೆ ಬದಿ ಖಾಲಿಯಿರುವ ಸ್ಥಳಗಳಲ್ಲಿ ಸಸಿಗಳನ್ನು ಹಾಕುವ ಕೆಲಸ ಮಾಡಲಾಗುತ್ತಿದೆ.

ಅಂಕಿ ಅಂಶ: ರಾಣೆಬೆನ್ನೂರ ಹಾಗೂ ಬ್ಯಾಡಗಿ ತಾಲೂಕಿನಲ್ಲಿ ಸಾಮಾಜಿಕ ವಲಯದ ಮೂಲಕ ಮಳೆ ಪೂರ್ವ ಸುಮಾರು 21 ಕಿ,ಮೀ ರಸ್ತೆ ಬದಿಯಲ್ಲಿ ನೆಡುತೋಪು, 50 ಹೆಕ್ಟೇರ್ ಜಾಗದಲ್ಲಿ ಬ್ಲಾಕ್ಗಳ ನಿಮರ್ಾಣ ಮಾಡಿ ಸಸಿ ಹಚ್ಚಿ  ಯಶಸ್ವಿಯಾಗಿದೆ. ಕಳೆದ ವರ್ಷದಲ್ಲಿ 15 ಕಿ,ಮೀ ರಸ್ತೆ ಬದಿಯಲ್ಲಿ, 38 ಹೆಕ್ಟೇರ್ ಸ್ಥಳದಲ್ಲಿ ಬ್ಲಾಕ್ನಲ್ಲಿ ಸಸಿಗಳ ನೇಡುತೋಪು ಮಾಡಲಾಗುತ್ತಿದೆ. ಒಟ್ಟು ಜಿಲ್ಲೆಯಲ್ಲಿ ಕಳೆದ ವರ್ಷ 117ಕಿ.ಮಿ ನಲ್ಲಿ 75ಕಿ.ಮಿ ರಸ್ತೆ ಬದಿಯಲ್ಲಿ 22ಸಾವಿರ ನೇಡುತೋಪು ಹಾಕಲಾಗಿದೆ. 88 ಹೆಕ್ಟೇರ್ ಬ್ಲಾಕ್ ಮಾಡಲಾಗಿದೆ. 

ಪ್ರಸಕ್ತ ವರ್ಷದಲ್ಲಿ 63 ಕಿ.ಮಿ ರಸ್ತೆ ಬದಿಗೆ, 53 ಕಿ.ಮಿ ಬ್ಲಾಕ್ಗಳಿಗೆ, 13 ಹೆಕ್ಟೇರ್ ಶಾಲಾ ವನಗಳಿಗೆ  ನಾಟಿ ಮಾಡಲು ಸೇರಿದಂತೆ  1,11,600 ಸಸಿಗಳನ್ನು ರೈತರಿಗೆ ವಿತರಿಸಲು ಹಾಗೂ ವನಮಹೋತ್ಸವ ಕಾರ್ಯಕ್ರಮಕ್ಕಾಗಿ 4.41 ಲಕ್ಷ ಸಸಿಗಳನ್ನು ಬೆಳೆಸುವ ಕಾರ್ಯ ಪ್ರಗತಿಯಲ್ಲಿದೆ.

ಪ್ಯಾರಾಗೋಲಾ ನಿಮರ್ಾಣ: ಜಿಲ್ಲೆಯ ದೇವರಗುಡ್ಡದ ದೇವಸ್ಥಾನಕ್ಕೆ ಹೆಚ್ಚು ಭಕ್ತರು ಬರುವುದನ್ನು ಗಮನಿಸಿ  ಸಾರ್ವಜನಿಕರು ವಿಶ್ರಾಂತಿ ಪಡೆಯಲು ಸುಂದರವಾದ ಪ್ಯಾರಾಗೊಲ ನಿಮರ್ಿಸಿದೆ. ಅಷ್ಟೇ ಅಲ್ಲದೇ ಬರಡಾಗಿದ್ದ ಬೆಟ್ಟದ ಮೇಲೆ ಸಸಿಗಳನ್ನು  ಬೆಳೆಸಿರುವುದರಿಂದ ಹಸಿರಿನಿಂದ ಉದ್ಯಾನವನದಂತೆ ಕಂಗೊಳಿಸುತ್ತಿದೆ. 

ಕಾಕೋಳ ಸಸ್ಯಪಾಲನಾ ಕೇಂದ್ರದಿಂದ ಈಗಾಗಲೇ ಸುಮಾರು 3 ಸಾವಿರ ಸಸಿಗಳನ್ನು ರಸ್ತೆ ಬದಿಯಲ್ಲಿ ನೆಡಲಾಗಿದೆ. ರಸ್ತೆ ಬದಿ ನಾಟಿ ಹಾಗೂ ನೆಡುತೋಪು ನಾಟಿ ಹಾಗೂ ರೈತರಿಗೆ ವಿತರಿಸಲು 87 ಸಾವಿರ ಸಸಿಗಳನ್ನು  ಸಸ್ಯಪಾಲನಾ ಕೇಂದ್ರದಲ್ಲಿ ಬೆಳೆಸಲಾಗಿದೆ.  ನೆಟ್ಟ ಸಸಿಗಳ ರಕ್ಷಣೆಗೆ ಅಗತ್ಯ ಆರೈಕೆ ಮಾಡಲಾಗುತ್ತಿದೆ.  ಒಟ್ಟಾರೆ ಜಿಲ್ಲೆಯಲ್ಲಿ ಅರ್ಲಿ ಪ್ಲಾಂಟೇಶನ್ ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿರುವುದು ಪರಿಸರ ಪ್ರಿಯರಿಗೆ ಸಂತಸದ ತಂದಿದೆ.