ನವದೆಹಲಿ, ಏ 17, ಲಾಕ್ ಡೌನ್ ನಿಂದ ಸಂಕಷ್ಟಕ್ಕೊಳಗಾಗಿರುವ ಕಾರ್ಮಿಕರಿಗೆ ನೆರವಾಗುವ ಉದ್ದೇಶದಿಂದ ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ ಒ) ಇಂತಹವರಿಗೆ ವಿಶೇಷ ಮುಂಗಡ ಹಣ ನೀಡುವ ಸೌಲಭ್ಯವನ್ನು ಆರಂಭಿಸಿದೆ. ಯುಎನ್ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಪ್ರಾದೇಶಿಕ ಪಿಎಫ್ ಆಯುಕ್ತ ಅಲೋಕ್ ಯಾದವ್, ಸಂಸ್ಥೆಯ ಕಚೇರಿಗಳು ಭಾಗಶಃ ತೆರೆದಿದ್ದು, ಚಂದಾದಾರರಿಗೆ ತಮ್ಮ ಭವಿಷ್ಯ ನಿಧಿಯಿಂದ ಸ್ವಲ್ಪ ಹಣ ಹಿಂಪಡೆಯಲು ಅವಕಾಶ ಕಲ್ಪಿಸಿದೆ.ಇದರಿಂದ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ಬಡ ಜನರಿಗೆ ವೈದ್ಯಕೀಯ ಸೌಲಭ್ಯಗಳು ದೊರೆತಂತಾಗುತ್ತವೆ. ಸಹಜ ದಿನಗಳಲ್ಲಿ ಕೂಡ ಅತಿ ಹೆಚ್ಚು ಪಿಎಫ್ ಓ ಹಿಂಪಡೆಯಲು ನೆರವಾವ ಉದ್ಯೋಗಿ ಬಿಂದ್ರಾ ಎಂಬ ಉದ್ಯೋಗಿ ನೆರವಾಗುತ್ತಿದ್ದಾರೆ. ಕಷ್ಟದ ಕಾಲದಲ್ಲಿ ಬಡವರಿಗೆ ನೆರವಾಗಲು ಅವರು ಉತ್ಸಾಹ ತೋರಿದ್ದಾಋೆ. ಈ ಕುರಿತು ಆಯುಕ್ತರು ಕೂಡ ಹಲವು ಬಾರಿ ಉಲ್ಲೇಖ ನೀಡಿದ್ದಾರೆ.. ಈ ಕಚೇರಿಯಲ್ಲಿ ಅಂಜನಿ ಕುಮಾರ್, ಸುರೇಶ್ ಚಂದ್ರ, ವಿನೋದ್ ಕುಮಾರ್ ಮತ್ತು ಅಮಿತ್ ಕುಮಾರ್ ಮತ್ತಿತರರು ಪ್ರತಿನಿತ್ಯ 100ಕ್ಕೂ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಪಡಿಸುತ್ತಿದ್ದಾರೆ ಮಹಿಳಾ ಉದ್ಯೋಗಿಗಳಾದ ರೇಣು ಗುಪ್ತ ಮತ್ತು ಪರುಷಿ ಗುಪ್ತಾ ಅವರು ಕೂಡ ಬಡವರಿಗೆ ನೆರವಾಗುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಆಯುಕ್ತರ ಸಹಾಯಕ ಸಿಬ್ಬಂದಿ ಪಿಎಫ್ ಚಂದಾದಾರರ ಸಮಸ್ಯೆ ಬಗೆಹರಿಸುವಲ್ಲಿ ನಿರತರಾಗಿದ್ದಾರೆ.