ಜಲಾಮೃತ ಜಾಥಾ ಕಾರ್ಯಕ್ರಮಕ್ಕೆ ಇಓ ಚಾಲನೆ
ಹಾವೇರಿ: ಕನಕಾಪುರ ಗ್ರಾಮ ಪಂಚಾಯತಿಯ ಆವರಣದಲ್ಲಿ ಶ್ರಮದಾನ ಜಲಾಮೃತ ಮತ್ತು ಸ್ವಚ್ಛ ಮೇವ ಜಯತೇ ಆಂದೋಲನದ ಕಾರ್ಯಕ್ರಮಕ್ಕೆ ತಾಲೂಕ ಪಂಚಾಯತಿಯ ಕಾರ್ಯನಿರ್ಮಾಹಕ ಅಧಿಕಾರಿಗಳಾದ ಅನ್ನಪೂರ್ಣ ಮುದಕ್ಕಮ್ಮನವರ ಪಂಚಾಯತಿಯ ಆವರಣದಲ್ಲಿ ಚಾಲನೆ ನೀಡಿ ಮಾತನಾಡಿದ ಅವರು ಊರಿನ ಪ್ರಮುಖ ಬೀದಿಗಳಲ್ಲಿ ಶ್ರಮಧಾನ ಮಾಡಿ ಶೌಚಾಲಯ ಬಳಸಿ ರೋಗದಿಂದ ದೂರ ಇರಿ ಮತ್ತು ಜಲಾಮೃತ ಕಾರ್ಯಕ್ರಮದ ಬಗ್ಗೆ ತಿಳಿ ಹೇಳಿದರು.
ನಂತರ ಜಲದ ಬಗ್ಗೆ ತಿಳಿಯಿರಿ, ಜಲ ಸಂರಕ್ಷಣೆ, ಜಲ ಪ್ರಜ್ಞಾವಂತರಾಗಿ, ಹೆಚ್ಚು ಹೆಚ್ಚು ಮರಗಳನ್ನು ಬೆಳೆಸಿರಿ ಎಂದು ಶಾಲಾ ಮಕ್ಕಳ ಮುಖಾಂತರ ಊರಿನ ಬೀದಿಗಳಲ್ಲಿ ಘೋಷಣೆ ಹೇಳಲಾಯಿತು. ಮುಂದುವರೆದು ಸ್ವಚ್ಛ ಭಾರತ ಮಿಷನ್ ಅಡಿ "ಸ್ವಚ್ಛಮೇವ ಜಯತೆ" ಕಾರ್ಯಕ್ರಮವನ್ನು ಜೂ. 11 ರಿಂದ ಜುಲೈ 11ರ ವರೆಗೆ ತಾಲೂಕಿನಾದ್ಯಂದ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ತಾಲೂಕಿನ ಪ್ರತಿಯೊಂದು ಗ್ರಾಮಗಳಲ್ಲಿ ಸ್ವಚ್ಚ ವಾತಾವರಣ ನಿರ್ಮಾಣ ಮಾಡುವ ಹಿನ್ನೆಲೆಯಲ್ಲಿ ಬೀದಿ ನಾಟಕ, ಜಾನಪದ ಸಂಗೀತ ಕಾರ್ಯಕ್ರಮ, ಸ್ವಚ್ಚಥಾ ರಥ ಯಾತ್ರೆ, ಪ್ರಬಂದ, ಚೆರ್ಚೆ ಸ್ಪಧರ್ೆ, ಶ್ರಮದಾನ, ಜಾಗೃತಿ ಜಾಥಾ, ಗೋಡೆ ಬರಹ,ಕರಪತ್ರ, ಬ್ಯಾನರ ಅಭಿಯಾನದ ಜೊತೆಗೆ ಮತ್ತು ಸ್ವಚ್ಛ ಮೇವ ಜಯತೇ ವಾಹಿನಿಯಲ್ಲಿ ಪ್ರತಿ ಗ್ರಾಮಕ್ಕೆ ಭೇಟಿ ನಿಡುವುದರೊಂದಿಗೆ ಘನ ತ್ಯಾಜ್ಯ ನಿರ್ವಹಣೆ ವಿಧಾನಗಳು, ಹಸಿ ಕಸ, ಒಣ ಕಸ ವಿಂಗಡಣೆ, ಎರಡು ಶೌಚ ಗುಂಡಿಯ ,ನಿರ್ಮಾಣ ಉಪಯೋಗ ಮತ್ತು ಎಲ್.ಓ.ಬಿ.ಯಡಿ ಶೌಚಾಲಯ ನಿರ್ಮಾಣ ಮಾಡುವುದು, ಸ್ವಚ್ಛ ಭಾರತ ಮಿಷನ್(ಗ್ರಾಮೀಣ) ಯೋಜನೆಯಡಿ ವೈಯಕ್ತಿಕ ಶೌಚಾಲಯ, ಸಮುದಾಯ ಶೌಚಾಲಯ, ಬಳಕೆ, ಶಾಲಾ ಮತ್ತು ಅಂಗನವಾಡಿ ಶೌಚಾಲಯಗಳನ್ನು ಉಪಯೋಗ ಮಾಡಲು ವಿದ್ಯಾಥರ್ಿಗಳಲ್ಲಿ ಹಾಗೂ ಶಿಕ್ಷಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದೂ ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಲೂಕ ಪಂಚಾಯತಿಯ ಯೋಜನಾಧಿಕಾರಿಗಳಾದ ಶಿವಾನಂದ ಕುದರಿ ಸಹಾಯಕ ನಿದರ್ೇಶಕರು(ಗ್ರಾ) ಟಿ.ಆರ್. ಮಲ್ಲಾಡದ್ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಜಕುಮಾರ ಕಲ್ಲೇದೇವರ, ಗ್ರಾಮ ಪಂಚಾಯತ್ ಎಲ್ಲ ಸದಸ್ಯರು, ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ರಮೇಶ, ಕಾರ್ಯದಶರ್ಿಗಳಾದ ಮಂಜುಳಾ ತಾರಿಕೊಪ್ಪ, ಶಾಲಾ ಸಿಬ್ಬಂದಿವರ್ಗದವರು, ತಾಲೂಕ ಪಂಚಾಯತ ಸಿಬ್ಬಂದಿವರ್ಗದವರು, ಎಸ ಬಿ ಎಮ್ ನೋಡಲ್ ಅಧಿಕಾರಿ ಹನುಮಂತಪ್ಪ ಮೇಳ್ಳಿ ಸದರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ 