ನರೇಗಾ ಕಾಮಗಾರಿ ಸ್ಥಳದಲ್ಲಿ ರೋಜಗಾರ ದಿನಾಚರಣೆಯಲ್ಲಿ ಪಾಲ್ಗೊಂಡ ಇಓ -ಮಂಜುಳಾ ಹಾಕರಿ
EO-Manjula Hakari participated in the Workers' Day celebration at the NREGA work site
ಲಕ್ಷ್ಮೇಶ್ವರ 14 : ತಾಲೂಕಿನ ಸೂರಣಗಿ ಗ್ರಾಮ ಪಂಚಾಯತಿಯಿಂದ ಪ್ರಾರಂಭ ಗೊಂಡಿರುವ ನರೇಗಾ ಯೋಜನೆ ಕಾಮಗಾರಿ ಸ್ಥಳದಲ್ಲಿ ಎಲ್ಲಾ ಕೂಲಿ ಕಾರ್ಮಿಕರೊಂದಿಗೆ ರೋಜುಗಾರ ದಿನಾಚರಣೆಯನ್ನು ಆಚರಿಸಿದ ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಂಜುಳಾ ಹಾಕರಿ ಅವರು ಮಾತನಾಡಿ ಎಲ್ಲ ಕೂಲಿ ಕಾರ್ಮಿಕರಿಗೆ ನೆರೆಗಾ ಯೋಜನೆ ಅಡಿಯಲ್ಲಿ ಸಾಮೂಹಿಕ ಬದು ನಿರ್ಮಾಣ ಕಾಮಗಾರಿ ಪ್ರಾರಂಭವಾಗಿದ್ದು ನರೇಗಾ ಕೂಲಿಕಾರರು ಕಡ್ಡಾಯವಾಗಿ ಎರಡು ಬಾರಿ ಹಾಜರಾತಿ ನೀಡಬೇಕೆಂದು ಸಲಹೆ ನೀಡಿದರು.ಅವರುಎಲ್ಲಾ ಕೂಲಿ ಕಾರ್ಮಿಕರು ಅಳತೆಗೆ ತಕ್ಕ ಕೆಲಸವನ್ನು ಮಾಡಿ ಎರಡು ಬಾರಿ ಹಾಜರಾತಿ ಹಾಕಬೇಕು ಎರಡು ಬಾರಿ ಹಾಜರಾತಿ ಹಾಕದಿದ್ದರೆ ಕೂಲಿ ಹಣ ಪಾವತಿ ಆಗುವುದಿಲ್ಲ ಎಲ್ಲರೂ ಸರಿಯಾಗಿ ಕೆಲಸವನ್ನು ನಿರ್ವಹಿಸಿ 370 ರೂ ಕೂಲಿಯನ್ನ ಪಡೆದು ಕೊಳ್ಳಿ ಎಂದು ತಿಳಿಸಿದರು.
ತಾಲೂಕು ಪಂಚಾಯಿತಿಯ ಗ್ರಾಮೀಣ ಉದ್ಯೋಗ ಖಾತ್ರಿಯ ಸಹಾಯಕ ನಿರ್ದೇಶಕರಾದ ಕೃಷ್ಣಪ್ಪ ಧರ್ಮರ ಅವರು ಮಾತನಾಡಿ ಕೂಲಿಕಾರರು ಆರೋಗ್ಯವನ್ನು ಸರಿಯಾಗಿ ಇಟ್ಟುಕೊಳ್ಳಬೇಕು, ಮುಂಜಾನೆ ಬೇಗ ಬಂದು ಅಳತೆಗೆ ತಕ್ಕ ಕೆಲಸ ನೀಡಿ ಬೇಗ ಮುಗಿಸಿಕೊಂಡು ಹಾಜರಾತಿ ನೀಡಿ ಮನೆಗೆ ಹೋಗಬೇಕು, ಎರಡು ಬಾರಿ ಹಾಜರಾತಿ ನೀಡಿದವರಿಗೆ 370 ರೂ ಕೂಲಿ ತಮ್ಮ ಖಾತೆಗೆ ನೇರವಾಗಿ ವರ್ಗಾವಣೆಯಾಗುತ್ತದೆ ಅಲ್ಲದೆ ಸಾಮಾಜಿಕ ಭದ್ರತೆ ಯೋಜನೆ, ವಿಮಾ ಯೋಜನೆ, ನರೇಗಾ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಕಾಯಕ ಬಂಧುಗಳು ಕೂಲಿಕಾರರಿಗೆ ನೆರಳಿನ, ಕುಡಿಯುವ ನೀರಿನ, ವ್ಯವಸ್ಥೆಯನ್ನು ಮಾಡಬೇಕು ಅವರ ಹಾಜರಾತಿ ಕಡ್ಡಾಯವಾಗಿ ನಿರ್ವಹಿಸಬೇಕು ಎಂದು ಮಾರ್ಗದರ್ಶನಗಳನ್ನ ನೀಡಿದರು. ಈ ವೇಳೆ ಸೂರಣಗಿ ಪಂಚಾಯತಿಯ ಅಭಿವೃದ್ಧಿ ಅಧಿಕಾರಿ ಗೌರಮ್ಮ ರೋಣದ, ಟಿ ಐ ಇ ಸಿ ಮಂಜುನಾಥ್ ಸ್ವಾಮಿ ಹೆಚ್ ಎಂ, ಟಿ ಎಂ ಐ ಎಸ್ ಚಂದ್ರಶೇಖರ್ ಹಳ್ಳಿ, ತಾಂತ್ರಿಕ ಸಹಾಯಕ ಫಕೀರೇಶ ನಿಟ್ಟಾಲಿ, ಬಿ ಎಫ್ ಟಿ ಕಾಸಿಂ ಸಾಬ್ ನದಾಫ್, ಡಿ ಇ ಓ ಗುಡ್ಡದಪ್ಪ ಕಮತ, ಕಾಯಕ ಬಂಧುಗಳು, 450 ನರೇಗಾ ಕೂಲಿ ಕಾರ್ಮಿಕರು ಉಪಸ್ಥಿತರಿದ್ದರು.
24 ಗಂಟೆಯಲ್ಲಿ ಕಾರು ಕಳ್ಳತನ ಪ್ರಕರಣ ಭೇಧಿಸಿದ ಪೊಲೀಸರು : ಖದೀಮರ ಪತ್ತೆಗಾಗಿ ಶೋಧ
ಗಡಿ ಮರಾಠಿ ಶಾಲೆಗಳಲ್ಲಿ ಕನ್ನಡ ಕಹಳೆ: 7 ಕನ್ನಡ ಪ್ರಾಥಮಿಕ, 2 ಪ್ರೌಡ ಶಾಲೆಗಳಿಗೆ ರಾಜ್ಯ ಸರಕಾರ ಗ್ರಿನ್ ಸಿಗ್ನಲ್
ಅಂತರಾಜ್ಯ ಖದೀಮನ ಬಂಧನ : 45.56 ಲಕ್ಷ ಮೌಲ್ಯದ ಚಿನ್ನಾಭರಣ, ದ್ವಿಚಕ್ರ ವಾಹನ ವಶಕ್ಕೆ
ಹಿಡಕಲ್ ಹಿನ್ನೀರಿನಲ್ಲಿ ಮುಳುಗಿದ್ದ ಹುನ್ನೂರು ವಿಠಲ ಮಂದಿರ ಜಲದಿಗ್ಭಂಧನದಿಂದ ಮುಕ್ತಿ
2027ರ ಮೇ. 4ರಿಂದ ಸಂಕೇಶ್ವರ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವ ಪ್ರಾರಂಭ
48 ಗಂಟೆಯಲ್ಲಿ ಮನೆಗಳ್ಳರಿಬ್ಬರ ಬಂಧನ : 21,02 ಲಕ್ಷ ಮೌಲ್ಯದ 154.6 ಗ್ರಾಂ ಚಿನ್ನಾಭರಣ ವಶಕ್ಕೆ 