ಏಕ್ ಲವ್ ಯಾ’ ಟೀಸರ್ 1 ಗಂಟೆಯಲ್ಲಿ 37 ಸಾವಿರ ವೀಕ್ಷಣೆ

ಬೆಂಗಳೂರು, ಫೆ 15,ಪ್ರೇಮಿಗಳ ದಿನದಂದು ಬಿಡುಗಡೆಯಾದ, ಜೋಗಿ ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಚಿತ್ರ ಜಾಲತಾಣದಲ್ಲಿ ವೈರಲ್ ಆಗಿದ್ದು, ಟೀಸರ್ ಅನ್ನು ಕೇವಲ ಒಂದು ಗಂಟೆಯಲ್ಲಿ 37 ಸಾವಿರಕ್ಕೂ ಅಧಿಕ ಜನರು ವೀಕ್ಷಿಸಿದ್ದಾರೆ  ಪ್ರೇಮಿಗಳ ದಿನದ ಜತೆಗೆ ಪುಲ್ವಾಮಾ ಭಯೋತ್ಪಾದನಾ ದಾಳಿಯಲ್ಲಿ 40 ಯೋಧರು ಹುತಾತ್ಮರಾದ ದಿನವೂ ಆದ ಕಾರಣ ಟೀಸರ್ ನಲ್ಲಿ ಹುತಾತ್ಮ ಯೋಧರಿಗೆ ಗೌರವ ಅರ್ಪಿಸಲಾಗಿದೆ  

ರಚಿತಾ ರಾಮ್ ಸಖತ್ ಬೋಲ್ಡ್  ಏಕ್ ಲವ್ ಯಾ ಚಿತ್ರದಲ್ಲಿ ನಟಿ ರಚಿತಾ ರಾಮ್ ಸಖತ್ ಬೋಲ್ಡ್ ಅಂಡ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ  ಸಿಗರೇಟ್ ಸೇದುವ ದೃಶ್ಯದ ಜತೆಗೆ ನಾಯಕನಿಗೆ ಕಿಸ್ ಮಾಡುವ ಸನ್ನಿವೇಶವಿದೆ     ರಕ್ಷಿತಾ ಪ್ರೇಮ್  ಬಂಡವಾಳ ಹೂಡಿರುವ ಈ ಚಿತ್ರದಲ್ಲಿ ಅವರ ಸಹೋದರ ಅಭಿಷೇಕ್ ಅಭಿರಾಣಾ ಎಂಬ ಪಾತ್ರದಲ್ಲಿದ್ದಾರೆ  ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಸ್ಯಾಂಡಲ್ ವುಡ್ ಪ್ರೇಕ್ಷಕರು ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.