ಗುಳೇದಗುಡ್ಡ: ವಿದ್ಯುನ್ಮಾನ ತ್ಯಾಜ್ಯ ಉಪಕರಣಗಳನ್ನು ಎಲ್ಲೇಂದರಲ್ಲಿ ಬಿಸಾಕದೇ ಅವುಗಳನ್ನು ಮರುಬಳಕೆ ಮಾಡಿದರೆ ನೈಸಗರ್ಿಕ ಸಂಪನ್ಮೂಲಗಳನ್ನು ಉಳಿಸಬಹುದು ಹಾಗೂ ಜನರ ಆರೋಗ್ಯ ಸುಧಾರಣೆ ಮಾಡಬಹುದೆಂದು ಸ್ಥಳೀಯ ಪುರಸಭೆ ವ್ಯವಸ್ಥಾಪಕ ಯು.ಜಿ. ವರದಪ್ಪನವರ್ ಹೇಳಿದರು.
ಪಟ್ಟಣದ ಪಿಇ ಟ್ರಸ್ಟಿನ ರಾಠಿ ಮತ್ತು ಕಾವಡೆ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯುನ್ಮಾನ ತ್ಯಾಜ್ಯ ಉಪಕರಣಗಳ ಮರುಬಳಕೆ ವಿಷಯವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಇಂದು ವಿದ್ಯುನ್ಮಾನ ತ್ಯಾಜ್ಯ ವ್ಯಾಪಾರವು ಅಭಿವೃದ್ಧಿ ಹೊಂದಿದ ಪ್ರಪಂಚದ ಎಲ್ಲ ಕ್ಷೇತ್ರಗಳಲ್ಲಿಯೂ ಇವೆ. ಇದು ಇಂದು ದೊಡ್ಡ ಮತ್ತು ಅತ್ಯಂತ ವೇಗವಾಗಿ ಸಂಘಟಿಸುತ್ತಿರುವ ವ್ಯಾಪಾರ. ಈಚೀನ ವರ್ಷಗಳಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ವಿದ್ಯುನ್ಮಾನ ತ್ಯಾಜ್ಯ ಸಂಸ್ಕರಣಾ ವ್ಯವಸ್ಥೆಗಳು ಪಕ್ವವಾಗಿವೆ. ವ್ಯವಸ್ಥಿತವಾಗಿ ಸಂಸ್ಕರಣೆ ಮಾಡಿ ಮರುಬಳಸುವುದು ಉತ್ತಮ ವಿಧಾನವಾಗಿದೆ. ಭಾರತದಂತಹ ದೇಶದಲ್ಲಿ ಇದರ ಅಗತ್ಯವಿದೆ ಎಂದರು. ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರದಂತೆ ನಾವು ಇ-ತ್ಯಾಜ್ಯವನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವ ಅಗತ್ಯವಿದೆ. ಶಾಲಾ ಮಕ್ಕಳಿಗೆ ಪಟ್ಟಣದಲ್ಲಿ ಇ- ವೇಸ್ಟ್ ಮರುಬಳಕೆ ಬಗ್ಗೆ ಹಮ್ಮಿಕೊಂಡ ಪ್ರಥಮ ಅರಿವು ಕಾರ್ಯಕ್ರಮ ಇದಾಗಿದೆ ಎಂದು ಪುರಸಭೆ ಆರೋಗ್ಯ ಶಾಖೆಯ ರಮೇಶ ಪದಕಿ ಹೇಳಿದರು. ಶಾಲೆಯ ಚೇರಮನ್ ಅಶೋಕ ಹೆಗಡಿ, ಮುಖ್ಯೋಪಾಧ್ಯಾಯಿನಿ ಜೆ.ಜೆ.ಲೋಬೋ, ಶಿಕ್ಷಕಿ ಸುಜಾತಾ ಗುಡ್ಡದ ಉಪಸ್ಥಿತರಿದ್ದರು.ವಿದ್ಯಾಥರ್ಿಗಳಾದ ಅನುಷಾ ಸೂಡಿಮಠ, ದಿಕ್ಷಿತಾ ಪರಗಿ, ತರಾ ಕುಂಬಾರ, ಅಮೃತಾ ಮತ್ತು ಸಹನಾ ರಂಜನಗಿ, ವಿಜ್ಞಾನ ಶಿಕ್ಷಕರಾದ ಭಾರತಿ ಐಹೊಳ್ಳಿ, ಬಸವರಾಜ ಯಳಮೇಲಿ ಮಾತನಾಡಿದರು. ವೈಷ್ಣವಿ ಕುಲಕಣರ್ಿ ನಿರೂಪಿಸಿದರು. ನಿಸ್ಸೀಮ ಕಲೆಗಾರ ವಂದಿಸಿದರು.