ಮುದ್ದೇಬಿಹಾಳ ತಾಲೂಕಿನ ಶಿರೋಳ ಗ್ರಾಮದಲ್ಲಿ ನಡೆದ ದ್ಯಾಮಣ್ಣ ಮುತ್ಯಾರ ಜಾತ್ರಾ ಮಹೋತ್ಸವ

Dyamanna Muthyara Jatra Mahotsava held at Shirola Village of Muddebihala Taluk

ಮುದ್ದೇಬಿಹಾಳ ತಾಲೂಕಿನ ಶಿರೋಳ ಗ್ರಾಮದಲ್ಲಿ ನಡೆದ ದ್ಯಾಮಣ್ಣ ಮುತ್ಯಾರ ಜಾತ್ರಾ ಮಹೋತ್ಸವ

ಮುದ್ದೇಬಿಹಾಳ 08 : ತಾಯಿ-ತಂದೆ ತಮ್ಮ ಮಕ್ಕಳಿಗೆ ಬಾಲ್ಯದಿಂದಲೇ ಉತ್ತಮ ಸಂಸ್ಕಾರ ಕಲಿಸಿ ಸಮಾಜದ ಸಜ್ಜನರಾಗಿ, ಉತ್ತಮ ಚಾರಿತ್ರ್ಯವಂತರಾಗಿ ಮತ್ತು ಸಭ್ಯ-ಸುಸಂಸ್ಕ್ರತ ನಾಗರಿಕರನ್ನಾಗಿ ರೂಪಿಸುವ ಮೂಲಕ  ಮಾನವೀಯ ಮೈಲ್ಯಗಳುಳ ಉತ್ತಮ ಸಮಾಜ ನಿರ್ಮಾಣ ಮಾಡುವ ಗುರಿಯೊಂದಿಗೆ ಮುನ್ನಡೆಯಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಹೇಳಿದರು. 

 ತಾಲೂಕಿನ ಶಿರೋಳ ಗ್ರಾಮದಲ್ಲಿ ನಡೆದ ದ್ಯಾಮಣ್ಣ ಮುತ್ಯಾರ ಜಾತ್ರಾ ಮಹೋತ್ಸವಹಾಗೂ ಸರ್ವಧರ್ಮ ಉಚಿತ  ಸಾಮೂಹಿಕ ವಿವಾಹ ಸಮಾರಂಭವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು. 

 ಶ್ರೀಮಂತರು ತಾವು ಗಳಿಸಿದ ಹಣದಲ್ಲಿ ಒಂದು ಭಾಗ ಇಂತಹ ಸಾಮೂಹಿಕ ವಿವಾಹದಂತ ಧಾರ್ಮಿಕ ಸಾಮಾಜಿಕ ಚಿಂತನೆಯುಳ್ಳ ಸತ್ಕಾರ್ಯಗಳಿಗೆ  ದಾನ ಧರ್ಮ ಮಾಡುವ ಮೂಲಕ ಸಾಮಾಜಿಕ ಕಳಕಳಿ ಮೆರೆಯಬೇಕು ಇದರಿಂದ ಭಗವಂತನು ಕೃಪೆ ತೊರಿ ಮಾಡಿದ ಪಾಪ ಕರ್ಮಗಳು ಕಳಚಿ ಉತ್ತಮ ಮನಷ್ಯನಾಗಿ ಬಾಳಿ ಬದುಕಲು ಸಾಧ್ಯಸಧ್ಯ ಮುಖಂಡ ರಾಮಣ್ಣ ರಾಜನಾಳ ಅವರು ಗ್ರಾಮಸ್ಥರ ಸಹಕಾರದೊಂದಿಗೆ  ಹಲವು ವರ್ಷಗಳಿಂದ ಶರಣ ದ್ಯಾಮಣ್ಣ ಮುತ್ಯಾ ಅವರ ಜಾತ್ರಾ ಮಹೋತ್ಸವದ ನಿಮಿತ್ಯ  ಇಂತಹ ಸರಳ ಸಾಮೂಹಿಕ ವಿವಾಹಗಳನ್ನು ಹಮ್ಮಿಕೊಳ್ಳುವ ಬಡ ಕುಟುಂಭಗಳಿಗೆ ನೆರವು ನೀಡುತತ್ತಿರುವ ಕಾರ್ಯ ನಿಜಕ್ಕೂ ಶ್ಲಾಘನಿಯ. 

ಇಂದಿನ ದುಬಾರಿ ಕಾಲದಲ್ಲಿ ಬಡ ಕುಟುಂಭದವರಿಗೆ ಮಧ್ಯಮ ವರ್ಗದ ಜನರಿಗೆ ಸಾಮೂಹಿಕ ವಿವಾಹ ಅಂದರೆ ಸರಳ ವಿವಾಹ. ಸಾಮೂಹಿಕ ವಿವಾಹದಿಂದಾಗಿ ವರದಕ್ಷಿಣೆ ಪಿಡುಗು ಮತ್ತು ಮದುವೆಗಾಗುವ ದುಂದುವೆಚ್ಚ ಕಡಿಮೆ ಮಾಡಿಮೆ ಮಾಡಿದಂತಾಗುತ್ತದೆ ಜೊತೆಗೆ ಎಲ್ಲ ಪೂಜ್ಯರ ಗುರು ಹಿರಿಯರ ಆಶಿರ್ವಾದ ಲಭಿಸುತ್ತದೆ ಇದರಿಂದ ಅಣ್ಣ ಬಸವಣ್ಣವರ ಆಸೆಯದಂತೆ ಸಮಾನತೆ ಸಂದೇಶ ಸಾರಿದಂತಾಗುತ್ತದೆ. ಕಾರಣ ನವ ದಂಪತಿಗಳು ಸತ್ಸಂಗ ಮಾಡಿ ಸಂಸಾರವನ್ನು ಹೊಣೆಗಾರಿಕೆ ಮತ್ತು ಜವಾಬ್ದಾರಿಯಿಂದ ಅರ್ಥಪೂರ್ಣವಾಗಿ ನಿರ್ವಹಿಸಬೇಕು. ಮದುವೆಯ ಪಾವಿತ್ರ್ಯತೆಯನ್ನು ಕಾಪಾಡಿಕೊಂಡು ಸಂಸ್ಕಾರಯುತ ಜೀವನ ನಡೆಸಬೇಕು. ತಾಯಿ-ತಂದೆ ಮಾಡಿದ ದಾನ-ಧರ್ಮ, ಸತ್ಕಾರ್ಯದ ಪುಣ್ಯ ಅವರ ಮಕ್ಕಳಿಗೂ ಲಭಿಸುತ್ತದೆ. ಯಾವುದೇ ನೀತಿ, ಧರ್ಮ, ಸಂಸ್ಕಾರ ಕಲಿಯಲು ವಯಸ್ಸಿನ ಇತಿ-ಮಿತಿ ಇಲ್ಲ. ರಾಮಾಯಣ ಮತ್ತು ಮಹಾಭಾರತದಂತಹ ಪೌರಾಣಿಕ ಕೃತಿಗಳ ಅಧ್ಯಯನದೊಂದಿಗೆ ಜೀವನದಲ್ಲಿ ಎಲ್ಲರನ್ನು ಗೌರವದಿಂದ ಕಾಣುವ ಮೂಲಕ ಮಾದರಿಯ ಜೀವನ ನಡೆಸಬೇಕು ಎಂದರು.  

 ಸಾಮೂಹಿಕ ವಿವಾಹದಲ್ಲಿ 6 ಅಂತರ್ಜಾತಿಯ ಜೋಡಿ ಸೇರಿದಂತೆ ಒಟ್ಟು 12 ವಧುಹಿವರರು ಹೊಸ ದಾಂಪತ್ಯ ಜೀವನಕ್ಕೆ ಕಾಲಿಟ್ಟರು ಈ ವೇಳೆ ವೇದಮಂತ್ರದೊಂದಿಗೆನಡೆದಮದುವೆ ಕಾರ್ಯಕ್ರಮಕ್ಕೆನೂರಾರು ಜನರು ಸಾಕ್ಷಿಯಾದರು. ಪಡೇಕನೂರ ದಾಸೋಹ ಮಠದ ರುದ್ರಮುನಿ ಶಿವಾಚಾರ್ಯರು, ಕುಂಟೋಜಿ ಬೈವೈಕತೆ ಹಿರೇಮಠದ ಶ್ರೀ ಗುರು ಚನ್ನವೀರ ಶಿವಾಚಾರ್ಯರು ವಧುವಿಗೆ ಸೀರೆ, ರವಿಕೆ ಮತ್ತು ವರನಿಗೆ ಧೋತಿ, ಶಾಲು  ಜೊತೆಗೆ ದಂಪತಿ ಮಂಗಳ ಸೂತ್ರ ವಿತರಿಸಿದರು. ಆಯಾ ಜಾತಿ-ಮತ ಸಂಪ್ರದಾಯದಂತೆ ಧಾರ್ಮಿಕ ವಿಧಿಗಳನ್ನು ನಡೆಸಲಾಯಿತು.ಈ ವೇಳೆ ವನಕಿಹಾಳ ಬೆಕಿನಾಳ ಮಾತೇ ಮಾಹೇಶ್ವರಿ ದೇವಸ್ಥಾನದ  ಮಹೇಶ ಮುತ್ಯಾ, ಸರೂರು ಸಹದದೇವಯ್ಯ ಗುರುವಿನ, ಕವಡಿಮಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಕುಂತಲಾ ಚಂದಾಲಿಂಗ ಹಂಡರಗಲ್ಲ, ಗ್ರಾಪಂ ಉಪಾಧ್ಯಕ್ಷೆ ನೀಲಮ್ಮ ಚಲವಾದಿ, ಜಾತ್ರಾ ಮಹೋತ್ಸವದ ಮುಖ್ಯಸ್ಥ ರಾಮಣ್ಣ ರಾಜನಾಳ, ವಿವೇಕಾನಂದ ಶಿರೋಳಕರರ,  ಪುರಸಭೆ ಅಧ್ಯಕ್ಷ ಮೈಬೂಬ ಗೊಳಸಂಗಿ, ಗಿರಿಶ ಶಿರೋಳಕರ,  ಗುರುರಾಜ ಶಿರೋಳಕರ, ನಿರ್ಮಲಾ ಪಾಟೀಲ,ಮಲ್ಲನಗೌಡ ಕಟಗೂರ, ರಮೇಶ ಬಲವಂತ್ರಕಂಠಿ, ಶಾಂತೂ ನೇಬಗೇರಿ, ನಿಂಗನಗೌಡ ಬಿರಾದಾರ, ಹಣಮಂತ ಹುಲಗಬಾಳ, ಶಿವನಗೌಡ ಪಾಟೀಲ, ಶಂಕರಗೌಡ ಪಾಟೀಲ, ಲಾಲಸಾಬ ಮುದ್ನಾಳ ಹಣಮಂತ ನಾವದಗಿ ಸೇರಿದಂತಗೆ ಹಲವರು ಇದ್ದರು.