ಡಿವೈಎಸ್ಪಿ ವೆಂಕಟಪ್ಪ ನಾಯಕಗೆ ಸನ್ಮಾನ

ಲೋಕದರ್ಶನ ವರದಿ

ಕೊಪ್ಪಳ 25: ಕೊಪ್ಪಳ ಉಪವಿಭಾಗದ ನೂತನ ಡಿವೈಎಸ್ಪಿ ವೆಂಕಟಪ್ಪ ನಾಯಕ್ ಅವರು ಯಲಬುಗರ್ಾ ತಾಲೂಕು ಬೇವೂರು ಪೊಲೀಸ್ ಠಾಣೆಗೆ ಭೇಟಿ ನೀಡಿದಾಗ ಅವರನ್ನು ಸುತ್ತಮುತ್ತಲಿನ ಗ್ರಾಮಸ್ಥರು ಆಗಮಿಸಿ ಸನ್ಮಾನಿಸಿದರು.  ನೂತನ ಡಿವೈಎಸ್ಪಿ ವೆಂಕಟಪ್ಪ ನಾಯಕ್ ಅವರು ಬೇವೂರು ಪೊಲೀಸ್ ಠಾಣೆಯ ಆವರಣದಲ್ಲಿ ಗಿಡ ಮರಗಳಿಂದ ಉತ್ತಮ ಪರಿಸರವಿರುವುದನ್ನು ಕಂಡು ಮೆಚ್ಚಿಗೆ ವ್ಯಕ್ತಪಡಿಸಿದರು. ಯಲಬುಗರ್ಾ ಸಿಪಿಐ ರಮೇಶ ರೊಟ್ಟಿ, ಬೇವೂರು ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಆಂಜನಯ್ಯ, ಪೊಲೀಸ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.