ನಿವೃತ್ತಿಯಿಂದ ಯೂ ಟರ್ನ್‌ ಹೊಡೆದ ಡ್ವೇನ್ ಬ್ರಾವೊ

ನವದೆಹಲಿ, 13  ಬ್ಯಾಟಿಂಗ್‌, ಬೌಲಿಂಗ್‌ ಹಾಗೂ ಫೀಲ್ಡಿಂಗ್‌ನಲ್ಲಿ ರಂಜಿಸುತ್ತಿದ್ದವೆಸ್ಟ್‌ ಇಂಡೀಸ್‌ನ ಡ್ವೇನ್ ಬ್ರಾವೊ ತನ್ನ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ತಮ್ಮ ನಿವೃತ್ತಿಯನ್ನು ಹಿಂಪಡೆದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳುವುದಾಗಿ ಸ್ಪಷ್ಟಪಡಿಸಿದ್ದಾರೆ.ಕಳೆದ 2016 ರಿಂದ ವೆಸ್ಟ್ ಇಂಡೀಸ್‌ ತಂಡದಿಂದ ದೂರ ಉಳಿದಿದ್ದ ಡ್ವೇನ್‌ ಬ್ರಾವೊ 2018ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ್ದರು. 2016ರ ಸೆಪ್ಟೆಂಬರ್ ತಿಂಗಳಲ್ಲಿ ಪಾಕಿಸ್ತಾನದ ವಿರುದ್ಧ ಯುಎಇಯಲ್ಲಿ ಕೊನೆಯ ಟಿ-20 ಪಂದ್ಯವಾಡಿದ್ದರು. ಇದೀಗ ಅವರು ತಮ್ಮ ನಿವೃತ್ತಿ ನಿರ್ಧಾರದಲ್ಲಿ ಯೂ ಟರ್ನ್‌ ತೆಗೆದುಕೊಂಡಿದ್ದಾರೆ."ತಮ್ಮ ಅಭಿಮಾನಿಗಳು ಹಾಗೂ ಹಿತೈಷಿಗಳಿಗೋಸ್ಕರ ನ್ನನ ನಿವೃತ್ತಿ ನಿರ್ಧಾರವನ್ನು ಹಿಂಪಡೆದು ಮತ್ತೊಮ್ಮೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಗೆ ಮರಳುವುದಾಗಿ," ಬ್ರಾವೊ  ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆದರೆ, ವೆಸ್ಟ್‌ ಇಂಡೀಸ್ ಮಂಡಳಿ ಬ್ರಾವೊ ಅವರ ನಿರ್ಧಾರವನ್ನು  ಯಾವ ರೀತಿ ಪರಿಗಣಿಸುತ್ತದೆ ಎಂದು ಕಾದು ನೋಡಬೇಕಾಗಿದೆ."ಸ್ವಲ್ಪ ಸಮಯದವರೆಗೆ ನಾನು ಅಂತರರಾಷ್ಟ್ರೀಯ ಕ್ರಿಕೆಟ್ ಗೆ ಮರಳುವ ಬಗ್ಗೆ ಯೋಚಿಸುತ್ತಿದ್ದೇನೆ ಮತ್ತು ಈ ಸಕಾರಾತ್ಮಕ ಬದಲಾವಣೆಗಳಿಂದ ನನ್ನ ನಿರ್ಧಾರವು ಗಟ್ಟಿಯಾಗಿದೆ. ತರಬೇತುದಾರ ಫಿಲ್ ಸಿಮೋನ್ಸ್ ಮತ್ತು ನಾಯಕ ಕೀರೋನ್ ಪೊಲಾರ್ಡ್ ಅವರ ಪ್ರಸ್ತುತ ನಾಯಕತ್ವದೊಂದಿಗೆ ನಾನು  ಹಿಂತಿರುಗಿ ತಂಡದ ಯಾವುದಾದರೂ ಒಂದು ಭಾಗವಾಗಲು ಅವಕಾಶದ ಬಗ್ಗೆ ನಿಜವಾಗಿಯೂ ಉತ್ಸುಕನಾಗಿದ್ದೇನೆ ”ಎಂದು ಅವರು ಹೇಳಿದರು.ನವೆಂಬರ್‌ ಆರಂಭದಲ್ಲಿ ವೆಸ್ಟ್ ಇಂಡೀಸ್ ತಂಡ, ಅಫ್ಘಾನಿಸ್ತಾನ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಂಡಿತ್ತು. ಈ ವೇಳೆ ಬ್ರಾವೊ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದರು.ಬ್ರಾವೊ ವೆಸ್ಟ್ ಇಂಡೀಸ್ ಪರ 40 ಟೆಸ್ಟ್‌, 164 ಏಕದಿನ ಹಾಗೂ 66 ಟಿ-20 ಪಂದ್ಯಗಳಲ್ಲಿ ಆಡಿದ್ದಾರೆ. ಎಲ್ಲಾ ಮಾದರಿಯಲ್ಲೂ ಅವರು 6,301 ರನ್‌ ಹಾಗೂ 338 ವಿಕೆಟ್‌ ಕಬಳಿಸಿದ್ದಾರೆ. ಭಾರತದಲ್ಲಿ ಜರುಗುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂ್ನಿಯಲ್ಲೂ ಇಂದಿಗೂ ಬ್ರಾವೊ ಚೆನ್ನೈ ಸೂಪರ್‌ ಕಿಂಗ್ಸ್ ಪರ ಆಡುತ್ತಿದ್ದಾರೆ. ಬಿಬಿಎಲ್‌ನಲ್ಲಿ ಮೆಲ್ಬೋರ್ನ್‌ ರೆನೆಗೇಡ್ಸ್‌, ಸಿಪಿಎಲ್‌ನಲ್ಲಿ  ಟ್ರಿಂಬ್ಯಾಗೊ ನೈಟ್‌ ರೈಡರ್ಸ್ ಹಾಗೂ ಕೆನಡಾದಲ್ಲಿ ವಿನ್ನಿಪೆಗ್ ಹಾಕ್ಸ್ ಪರ ಆಡುತ್ತಿದ್ದಾರೆ.