ಪ್ರಚಾರದ ವೇಳೆ ಪ್ರಧಾನಿ ಮೋದಿ ಹತ್ಯೆಗೆ ಸಂಚು

ನವದೆಹಲಿ 13: ವಿಧಾನಸಭಾ ಚುನಾವಣೆಗಳ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡಲು ಈಶಾನ್ಯ ಭಾರತದ ಉಗ್ರಗಾಮಿ ಸಂಘಟನೆಗಳು ಸಜ್ಜಾಗಿರುವ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ.

                ವಿವಿಧ ರಾಜ್ಯಗಳಲ್ಲಿ ನವೆಂಬರ್ನಲ್ಲಿ ಮೋದಿ ಅವರು ಹಲವಾರು ಚುನಾವಣಾ ರ್ಯಾಲಿಗಳಲ್ಲಿ ಭಾಗವಹಿಸಲಿದ್ದು, ಇದೇ ಸಂದರ್ಭದಲ್ಲಿ ಅವರನ್ನು ಹತ್ಯೆ ಮಾಡುವ -ಮೇಲ್ ಸಂದೇಶ ರವಾನೆಯಾಗಿರುವ ಹಿನ್ನೆಲೆಯಲ್ಲಿ ಹೈ ಅಲಟರ್್ ಘೋಷಿಸಲಾಗಿದೆ. ದೆಹಲಿ ಪೊಲೀಸ್ ಆಯುಕ್ತರ ಕಚೇರಿಗೆ ಸಂಬಂಧ ಈಶಾನ್ಯ ಪ್ರಾಂತ್ಯದಿಂದ ದುಷ್ಕಮರ್ಿಯೊಬ್ಬನಿಂದ ಒಂದು ಸಾಲಿನ -ಮೇಲ್ ಸಂದೇಶ ಬಂದಿದೆ. ಸಂದೇಶದಿಂದ ಎಚ್ಚೆತ್ತುಕೊಂಡಿರುವ ದೆಹಲಿ ಪೊಲೀಸರು ಪ್ರಧಾನಿಯವರ ಭದ್ರತೆಗೆ ವಿಶೇಷ ಏಪರ್ಾಡುಗಳನ್ನು ಮಾಡಿದ್ದು, -ಮೇಲ್ ಕಳುಹಿಸಿದ ವ್ಯಕ್ತಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.

                ದೆಹಲಿ ಆಯುಕ್ತರಿಗೆ -ಮೇಲ್ ಸಂದೇಶ ಬಂದಿದ್ದು, ಹತ್ಯೆ ಮಾಡುವ ದಿನಾಂಕ, ತಿಂಗಳ ಬಗ್ಗೆ ಇದರಲ್ಲಿ ಮಾಹಿತಿ ಇವೆ ಎಂದು ಉನ್ನತ ಮೂಲಗಳು ತಿಳಿಸಿವೆ.

                ಮೋದಿ ಮುಂದಿನ ನವೆಂಬರ್ನಲ್ಲಿ ಹಲವಾರು ರ್ಯಾಲಿಗಳು ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಇದೇ ಸಂದರ್ಭವನ್ನು ದುರುಪಯೋಗಪಡಿಸಿಕೊಂಡು ಪ್ರಧಾನಿಯವರನ್ನು ಹತ್ಯೆ ಮಾಡಲು ದೊಡ್ಡಮಟ್ಟದ ಸಂಚು ನಡೆದಿದೆ ಎಂಬ ಸುಳಿವು ಗುಪ್ತಚರ ಮೂಲಗಳಿಂದ ತಿಳಿದುಬಂದಿದೆ. ಈಶಾನ್ಯ ಭಾರತದ ಸಪ್ತಸೋದರಿ ರಾಜ್ಯಗಳಲ್ಲಿ ಇತ್ತೀಚೆಗೆ ಕೇಂದ್ರ ಸಕರ್ಾರ ಡ್ರಗ್ಸ್ ಮಾಫಿಯಾಗೆ ವ್ಯವಸ್ಥಿತವಾಗಿ ಕಡಿವಾಣ ಹಾಕಿರುವ ಹಿನ್ನೆಲೆಯಲ್ಲಿ ಉಗ್ರಗಾಮಿಗಳ ಸಹಕಾರದೊಂದಿಗೆ ಮಾದಕ ಕಳ್ಳ ಸಾಗಣೆದಾರರು ಪ್ರಧಾನಿ ಹತ್ಯೆಗೆ ಕುತಂತ್ರ ರೂಪಿಸಿದ್ದಾರೆ ಎಂದು ಹೇಳಲಾಗುತ್ತಿದೆ.

                ಹಿನ್ನೆಲೆಯಲ್ಲಿ ಮೋದಿ ಅವರಿಗೆ ವಿಶೇಷ ಭದ್ರತೆ ಹಾಗೂ ಅವರು ಭಾಗವಹಿಸುವ ಸಭೆ-ಸಮಾರಂಭ ಮತ್ತು ಸಾರ್ವಜನಿಕ ರ್ಯಾಲಿಗಳಿಗೆ ಅಭೂತಪೂರ್ವ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.