ದೇವದಾಸಿ ಮಹಿಳೆಯರ ಬಾಕಿ ಮಾಶಸನ ಹಾಗು ವಿವಿಧ ಬೆಡಿಕೆಗೆ ಒತ್ತಾಯ

Dues of devadasi women forced to pay and fulfill various demands

ಕೊಪ್ಪಳ 04: ದೇವದಾಸಿ ಮಹಿಳೆಯರಿಗೆ ಕಳೆದ ಬಜೆಟ್‌ನಲ್ಲಿ ಹೆಚ್ಚಳ ಮಾಡಿದ 500 ರೂ ಸೇರಿದಂತೆ ಬಾಕಿ ಮಾಸಿಕ ಸಹಾಯಧನವು ಹಲವಾರು ತಿಂಗಳುಗಳಿಂದ ಬಾಕಿ ಉಳಿದಿದ್ದು ಈ ಕೂಡಲೆ ಮಾಸಿಕ ಸಹಾಯಧನ ( ಪೆನ್ಷನ್ ) ಬಾಕಿಯನ್ನು ಕೂಡಲೆ ಬಿಡುಗಡೆ ಮಾಡಬೇಕು. 

ನೂರಾರು ಮಹಿಳೆಯರಿಗೆ ಒಂದೆರಡು ಬಾರಿ ಮಾತ್ರವೇ ಮಾಸಿಕ ಸಹಾಯಧನ ಬಂದು ನಂತರ ನಿಂತು ಹೋಗಿದೆ. ಈ ಎಲ್ಲ ಮಹಿಳೆಯರ ಬಾಕಿ ಹಣ ದೊರೆಯುವಂತೆ ಸೂಕ್ತ ಕ್ರಮವಹಿಸಬೇಕು. ಅದೇ ರೀತಿ ಪ್ರತಿಬಾರಿಯೂ ಕೆಲವರಿಗೆ ಪೆನ್ಷನ್ ಹಣ ಜಮಾ ಆಗದಿರುವುದು ಕಂಡು ಬಂದಿದೆ. ಆದರೆ ಅಧಿಕಾರಿಗಳು ಹಣ ಹಾಕಲಾಗಿದೆ ಎಂದು ಉತ್ತರ ನೀಡುತ್ತಿದ್ದಾರೆ ಮತ್ತು ಬೇರೆ ಬ್ಯಾಂಕ್ ಖಾತೆಗೆ ಜಮಾ ಆಗಿರಬೇಕೆಂದು ಉತ್ತರಿಸುತ್ತಿದ್ದಾರೆ. ಅದಾಗಲೆ ಮಹಿಳೆಯರು ಕೊಟ್ಟ ಬ್ಯಾಂಕ್ ಖಾತೆಗೆ ಜಮಾ ಆಗುವ ಬದಲು ಬೇರೆ ಖಾತೆಗೆ ಜಮಾ ಆಗಿದೆಯೆಂದು ಹೇಳುವುದರ ಹಿಂದೆ ವಂಚನೆಯ ವಾಸನೆ ಇದೆ. ಈ ಕುರಿತು ತನಿಖೆ ನಡೆಸಬೇಕು ಮತ್ತು ಅಂತಹ ಮಹಿಳೆಯರಿಗೆ ಮತ್ತು ಅವರ ಕುಟುಂಬದ ಸದಸ್ಯರಿಗೆ ಹಿಂದಿನಿಂದ ಬಾಕಿ ವೇತನ ಒದಗಿಸಲು ಅಗತ್ಯ ಕ್ತಮವಹಿಸಬೇಕು.  

ದೇವದಾಸಿ ಮಹಿಳೆಯರ ಕುಟುಂಬದ ಸದಸ್ಯರ ಗಣತಿ; ಅದಾಗಲೆ ನಡೆಸಲಾದ ಎರಡು ಬಾರಿಯ ಗಣತಿಯಲ್ಲಿ ಸಾವಿರಾರು ಕುಟುಂಬಗಳು ಗಣತಿಪಟ್ಟಿಯಲ್ಲಿಲ್ಲ, ಅವರುಗಳಲ್ಲದೆ ದೇವದಾಸಿ ಮಹಿಳೆಯರ ಪರಿತ್ಯಕ್ತ ಹೆಣ್ಣು ಮಕ್ಕಳು ಸೇರಿದಂತೆ ಕುಟುಂಬದ ಸದಸ್ಯರ ಗಣತಿಗೆ ಕ್ರಮವಹಿಸಬೇಕು. 

ಈ ಎಲ್ಲರಿಗೂ ಪುನರ್ವಸತಿ ಕೈಗೊಳ್ಳಬೇಕು. 

ಸಾಲದ ಸಹಾಯಧನ: 2021-22 ರ ಸಾಲಿನಲ್ಲಿ ಫಲಾನುಭವಿಗಳೆಂದು ಗುರುತಿಸಲಾದ ಮಹಿಳೆಯರಿಗೆ ಸಹಾಯಧನ ಇದುವರೆಗು ಬಿಡುಗಡೆ ಮಾಡಿಲ್ಲ. ಈ ಕೂಡಲೆ ಬಿಡುಗಡೆ ಮಾಡಬೇಕು. 

ಭೂ ಸ್ವಾಧೀನದ ಮೂಲಕ ಭೂಮಿ ಒದಗಿಸಿ: ದೇವದಾಸಿ ಮಹಿಳೆಯರು ಹಾಗು ಅವರ ಕುಟುಂಬದ ಸದಸ್ಯರಿಗೆ ವಸತಿಗಾಗಿ ಮತ್ತು ಕೃಷಿಗಾಗಿ ತಲಾ ಐದು ಎಕರೆ ನೀರಾವರಿ ಜಮೀನನ್ನು  ಭೂ ಸ್ವಾಧೀನ ಕಾಯ್ದೆಯಂತೆ ಭೂಮಿ ಸ್ವಾಧೀನ ಮಾಡಿ ಒದಗಿಸಲು ಕ್ರಮವಹಿಸಬೇಕು. 

 ದೌರ್ಜನ್ಯದ ದೇವದಾಸಿ ಪದ್ಧತಿ ನಿಷೇದ ಕಾಯ್ದೆಗೆ ತಿದ್ದುಪಡಿ ಮಾಡಿ, ಈ ಪದ್ದತಿಯ ಫಲಾನುಭವಿಗೆ ಆ ಕುಟುಂಬದ ಹೊಣೆಗಾರಿಕೆ ನಿಗದಿಸಬೇಕು ಮತ್ತು ಅವರ ಆಸ್ತಿಗಳಲ್ಲಿ ಮಕ್ಕಳಿಗೆ ಪಾಲು ಸಿಗುವಂತೆ ಕ್ರಮವಹಿಸಬೇಕು.  

ಇನ್ನು ಮುಂದೆ ದೇವದಾಸಿ ಪದ್ಧತಿಗೆ ಪ್ರಚೋದನೆ ಮಾಡುವ ಫಲಾನುಭವಿಗಳನ್ನು ಬಂದಿಸಿ, ಪರಿಶಿಷ್ಢ ಜಾತಿ ಹಾಗೂ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯನ್ವಯ ಕಾನೂನು ಕ್ರಮ ವಹಿಸಲು ಅಗತ್ಯ ಕ್ರಮಗಳಾಗಬೇಕು.   

 ಫಲಾನುಭವಿ ಆಯ್ಕೆಗಾಗಿ ಪ್ರತಿ ವರ್ಷ ಅರ್ಜಿ ಕರೆಯುವುದು ತಡೆಯಬೇಕು. ಫಲಾನುಭವಿಗಳ ಪಟ್ಟಿಯು ಸರಕಾರದ ಸ್ವಾಧೀನದಲ್ಲಿರುವಾಗ ಪುನರ್ವಸತಿ ಕ್ರಮಗಳಿಗಾಗಿ ಪ್ರತಿವರ್ಷವು ಅರ್ಜಿಗಳನ್ನು ಪಡೆಯುವುದು, ಆಯ್ಕೆಯ ಸಂದರ್ಭದಲ್ಲಿ ನಡೆಯುವ ಭ್ರಷ್ಠಾಚಾರಕ್ಕೆ ತುತ್ತಾಗುವುದು ಎಲ್ಲವು ಮಹಿಳೆಯರ ಆರ್ಥಿಕ ಶೋವಣೆಗೆ ಕಾರಣವಾಗಿದೆ. ಆದ್ದರಿಂದ, ಫಲಾನುಭವಿಗಳನ್ನು ಗುರುತಿಸುವಾಗ ಫಲಾನುಭವಿಗಳ ಹಿರಿತನದ ಆಧಾರದಲ್ಲಿ ಸೌಲಭ್ಯ ಒದಗಿಸಬೇಕು. ಆಯ್ಕೆಯು ಪಾರದರ್ಶಕವಾಗಿರಬೇಕು. 

ಪುನರ್ವಸತಿ ಯೋಜನಾಧಿಕಾರಿಗಳ ಭ್ರಷ್ಠತೆ ತಡೆಯಲು ಅವರನ್ನು ಪ್ರತಿವರ್ಷವು ಹೊಸ ಹೊಸ ತಾಲೂಕುಗಳಿಗೆ ವರ್ಗಾಯಿಸಬೇಕು. ಯೋಜನೆಗೆ ಸಂಬಂಧಿಸಿದ ವಿಷಯಗಳನ್ನು ಎನ್ ಜಿ ಓ ಗಳ ಮೂಲಕ ಕ್ರಮವಹಿಸುವುದನ್ನು ನಿಲ್ಲಿಸಬೇಕು ಎಂದು ಒತ್ತಾಯ.