ಸೊಸೈಟಿ ಬೆಳವಣಿಗೆಗೆ ರೈತರ ಸಹಕಾರ ಕಾರಣ: ಹೆಗಡೆ


ಸಿದ್ದಾಪುರ; ತೋಟಗಾರ್ಸ್ ಕೋ-ಆಪರೇಟೀವ್ ಸೇಲ್ ಸೊಸೈಟಿಯು ಹೆಚ್ಚು ಹೆಚ್ಚು ಬೆಳೆಯಲು  ಸಂಸ್ಥೆಯಲ್ಲಿ ವ್ಯವಹಾರ ಮಾಡುವ ರೈತರು ಹಾಗೂ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ ಉದ್ಯೋಗಿಗಳು ಕಾರಣ ಎಂದು ಟಿ.ಎಸ್.ಎಸ್ ಅಧ್ಯಕ್ಷ ಶಾಂತರಾಮ ಹೆಗಡೆ ಹೇಳಿದರು. ಅವರು ಟಿ.ಎಸ್.ಎಸ್ ಸಭಾಂಗಣದಲ್ಲಿ ನಡೆದ ಸಹಕಾರಿ ಸಭೆಯಲ್ಲಿ ಮಾತನಾಡುತ್ತಿದ್ದರು.  

ಅಡಿಕೆಯನ್ನು ಶೀಲ್ಕು ಇಡುವುದಕ್ಕಿಂತ  ಆಗಾಗೇ ಮಾರಾಟ ಮಾಡುವುದು ಉತ್ತಮ. ಮಾಧ್ಯಮಿಕ ಹಾಗೂ ಧೀಘರ್ಾವಧಿ ಸಾಲ  ನೀಡಲು ಪ್ರಯತ್ನಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನೂ ಅನೇಕ ವಸ್ತುಗಳನ್ನು ಒದಗಿಸುತ್ತೇವೆ. ಆರೋಗ್ಯ ಮತ್ತು ಅವಘಡ ನಿಧಿಗಳನ್ನು ನೀಡುತ್ತದ್ದೇವೆ.  ಸಂಸ್ಥೆಯು ಸಂಸ್ಥೆಯು ನೂರು ವರ್ಷದತ್ತ ಪಾದಾರ್ಪಣೆ ಮಾಡುತ್ತಿದೆ. ಶತಮಾನೋತ್ಸವದ ಸಂದರ್ಭದಲ್ಲಿ ಗ್ರಾಹಕರಿಗೆ ಅನೇಕ ಕೊಡುಗೆಗಳನ್ನು ನೀಡುತ್ತಿದ್ದೇವೆ. ನೀವು ಅವುಗಳ ಪ್ರಯೋಜನ ಪಡೆದುಕೊಳ್ಳಬೇಕು. ನಿಮ್ಮೇಲ್ಲರ ಸಹಕಾರದಿಂದ ಸಂಸ್ಥೆಯ ದಿನದಂದ ದಿನಕ್ಕೆ ಬೆಳೆಯುತ್ತಿದೆ ಎಂದು ಸಂಸ್ಥೆಯ ಸದಸ್ಯರ ಸಹಕಾರವನ್ನು ಸ್ಮರಿಸಿಕೊಂಡರು.

ಇದೇ ಸಂಧರ್ಬದಲ್ಲಿ ಸಂಸ್ಥೆಯಲ್ಲಿ ವ್ಯವಹರಿಸುತ್ತಿರುವ ಹಿರಿಯ ಸದಸ್ಯರಾದ ಮಹಾಬಲೇಶ್ವರ ಎನ್ ಹೆಗಡೆ ಮತ್ತಿಗಾರ, ತಿಮ್ಮಪ್ಪ ಎಂ ಹೆಗಡೆ ಮಣ್ಣಿಕೊಪ್ಪ, ಗೋವಿಂದ ವಿ ಹೆಗಡೆ ಕಲಾವನ, ಮುರಿಗೆಯ್ಯ ಎಂ ಗೌಡ ಕೋಲಸಿಸರ್ಿ, ತುಂಗಭದ್ರ ಎಲ್ ಹೆಗಡೆ ಗುಂಜಗೋಡ, ದೇವೇಂದ್ರ ಆರ್ ಹೆಗಡೆ ಮಲವಳ್ಳಿ, ನರಸಿಂಹ ಎಂ ಹೆಗಡೆ ಹೊನ್ನೆಹದ್ದ, ಶೇಷಗಿರಿ ಜಿ ಹೆಗಡೆ ಮುಗ್ದೂರ, ಗಜಾನನ ಜೀ ಹೆಗಡೆ ಮಘೇಗಾರು, ಮಹಾಬಲೇಶ್ವರ ಎಸ್ ಹೆಗಡೆ ಉಪ್ಪಡಿಕೆ, ಶಿವರಾಮ ಎನ್ ಹೆಗಡೆ ಹುಟ್ಲೆ ರವರುಗಳನ್ನು ಸನ್ಮಾನಿಸಲಾಯಿತು. 

ಸನ್ಮಾನಿತರ ಪರವಾಗಿ ಮಾತನಾಡಿದ ತಿಮ್ಮಪ್ಪ ಹೆಗಡೆ ಮಾತನಾಡಿ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು ಒಂದೇ ರೀತಿಯ ಮನೋಭಾವ ಹೊಂದಿರುವುದರಿಂದ ಸಂಸ್ಥೆಯು ಅತೀ ವೇಗವಾಗಿ ಬೆಳೆಯುತ್ತಿದೆ. ಸಂಸ್ಥೆಯ ವತಿಯಿಂದ ಇಂಜಿನಿಯರ್ ಅಥವಾ ಮೇಡಿಕಲ್ ಕಾಲೇಜ್ ಸ್ಥಾಪಿಸಿ ವಿದ್ಯಾಥರ್ಿಗಳಿಗೆ ಅನೂಕುಲ ಮಾಡಿಕೊಡಬೇಕೆಂದು ತಮ್ಮ ಬೇಡಿಕೆ ಇಟ್ಟರು.

ಆಡಳಿತ ಮಂಡಳಿಯ ಸದಸ್ಯರಾದ ವಿಶ್ವನಾತ ಹೆಗಡೆ, ರಾಮಕೃಷ್ಣ ಹೆಗಡೆ, ರವಿಂದ್ರ ಹೆಗಡೆ, ಚಂದ್ರಶೇಖರ ಹೆಗಡೆ, ಸೀತಾರಾಮ ಹೆಗಡೆ, ಗಣಪತಿ ಹೆಗಡೆ, ಕೃಷ್ಣ ಹೆಗಡೆ, ವಿನಾಯಕ ಭಟ್, ನರಸಿಂಹ ಜೋಶಿ, ಅಣ್ಣಪ್ಪ ಗೌಡ, ಶಾರದಾ ಹೆಗಡೆ, ಪ್ರಧಾನ ವ್ಯವಸ್ಥಾಪಕ ರವೀಶ ಹೆಗಡೆ, ಸಿದ್ದಾಪುರ ಶಾಖೆಯ ಸಲಹಾ ಸಮಿತಿಯ ಸದಸ್ಯರಾದ ಈರಾ ನಾಯ್ಕ, ಗಣಪತಿ ಹೆಗಡೆ, ಮಂಜುನಾಥ ಹೆಗಡೆ, ಶಿವಾನಂದ ಹೆಗಡೆ,ಸಿದ್ದಾಪು ಶಾಕಾ ವ್ಯವಸ್ಥಾಪಕ ಗಜಾನನ ಹೆಗಡೆ ಉಪಸ್ಥಿತರಿದ್ದರು.

ರಾಮಕೃಷ್ಣ ಹೆಗಡೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ರವಿಂದ್ರ ಹೆಗಡೆ ವಂದಿಸಿದರು.