ವಿಶ್ವಕಪ್ ಕ್ರಿಕೆಟ್ ಮಹಾಸಮರಕ್ಕೆ ದಿನಗಣನೆ ಐಸಿಸಿಯಿಂದ ಭರ್ಜರಿ ಪ್ರಮೋಷನ್


ದುಬೈ 08: ಮುಂದಿನ ವರ್ಷ ಮೇ ತಿಂಗಳಲ್ಲಿ ಕ್ರಿಕೆಟ್ ವಿಶ್ವಕಪ್ ಮಹಾಸಮರ ನಡೆಯಲಿದೆ. ಇದಕ್ಕಾಗಿ ಎಲ್ಲ ಸಿದ್ಧತೆಗಳನ್ನ ಐಸಿಸಿ ಮಾಡಿಕೊಳ್ಳುತ್ತಿದ್ದು, ಈಗಿನಿಂದಲೇ ವಿಶ್ವಕಪ್ ಪ್ರಮೋಷನ್ ಮಾಡಲು ಅಣಿಯಾಗಿದೆ. 

ಕ್ರಿಕೆಟ್ ವಿಶ್ವಕಪ್ ಜಾತ್ರೆಗಾಗಿ ಐಸಿಸಿ ವಿಶೇಷ ಪ್ರಮೋಷನ್ ವಿಡಿಯೋ ತಯಾರಿಸಿದ್ದು, ಅದನ್ನ ತನ್ನ ಅಧಿಕೃತ ಟ್ವಿಟ್ಟರ್ ಅಕೌಂಟ್ನಲ್ಲಿ ಹಾಕಿಕೊಂಡಿದೆ.  ಇದಕ್ಕಾಗಿ ವಿಶೇಷ ಸಾಂಗ್ ತಯಾರಿಸಿದ್ದು, ಇಂಗ್ಲೆಂಡ್ನ ಆಟಗಾರ ಫ್ಲಿಂಟಾಪ್ ಹಾಗೂ  ಕ್ರಿಕೆಟ್ ಅಭಿಮಾನಿಗಳನ್ನ ಬಳಿಸಿಕೊಂಡು ಈ ಸಾಂಗ್ ಪ್ರೋಮೋ ತಯಾರಿಸಲಾಗಿದೆ.   

ಫ್ಲಿಂಟಾಪ್ ಜತೆಗೆ ಈ ವಿಡಿಯೋದಲ್ಲಿ ಮಾಜಿ ಕ್ರಿಕೆಟಿಗರಾದ ಕುಮಾರ ಸಂಗಕ್ಕರ, ಫಿಲ್ ತುಫ್ನೆಲ್ ಮತ್ತು ಮಹಿಳಾ ಕ್ರಿಕೆಟ ಪಟು ಚಾಲರ್ೊಟ್ ಎಡ್ವಡ್ರ್ಸ ಕಾಣಿಸಿಕೊಂಡಿದ್ದಾರೆ. 2019 ರ ಮೇ 30ರಿಂದ ಜೂನ್ 14 ರವರೆಗೆ ಇಂಗ್ಲೆಂಡ್ನಲ್ಲಿ ವಿಶ್ವಕಪ್ ಮಹಾಜಾತ್ರೆ ನಡೆಯಲಿದ್ದು,  10 ರಾಷ್ಟ್ರಗಳು ಈ ಟೂನರ್ಿಯಲ್ಲಿ ಭಾಗವಹಿಸಲಿವೆ.