ಬೆಳಗಾವಿ: ಕಳಸಾ-ಬಂಡೂರಿ ಕಾಮಗಾರಿಗೆ ಸುಪ್ರೀಂ ಕೋಟರ್್ 17-8-2017 ರಂದು ನೀಡಿರುವ ತಡೆಯಾಜ್ಞೆ ತೆರವುಗೊಳಿಸಿ ಮಹದಾಯಿ ನ್ಯಾಯಾಧೀಕರಣ ಹಂಚಿಕೆ ಮಾಡಿರುವ ನೀರನ್ನು ಬಳಕೆ ಮಾಡಿಕೊಳ್ಳುವುದು ಸಕರ್ಾರದ ಆದ್ಯತೆಯಾಗಿದೆ ಎಂದು ಜಲಸಂಪನ್ಮೂಲ ಇಲಾಖೆ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.
ಬುಧವಾರ ನಗರದ ಹೊರವಲಯದ ಖಾನಾಪುರ ತಾಲ್ಲೂಕಿನ ಕಣಕುಂಬಿ ಬಳಿ ಸೆ.26 ಕಳಸಾ-ಬಂಡೂರಿ ಕಾಮಗಾರಿ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ತನ್ನ ಪಾಲಿನ ಒಟ್ಟಾರೆ 13.42 ಟಿಎಂಸಿ ನೀರು ಬಳಕೆಗೆ ಅಗತ್ಯವಿರುವ ಕಾಮಗಾರಿ ಕೈಗೊಳ್ಳಲು ಸುಪ್ರೀಂ ಕೋಟರ್್ ತಡೆಯಾಜ್ಞೆ ತೆರವು, ಗೇಜೆಟ ನೋಟಿಪಿಕೇಶನ್ ಹಾಗೂ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಯ ಅನುಮತಿ ಪಡೆದುಕೊಳ್ಳಲು ರಾಜ್ಯ ಸಕರ್ಾರ ಇಗಾಗಲೇ ಸಿದ್ಧತೆ ನಡೆಸಿದೆ.
ತಡೆಯಾಜ್ಞೆ ತೆರವು ಬಳಿಕ ತಕ್ಷಣವೇ ಅಗತ್ಯ ಕಾಮಗಾರಿಗಳನ್ನು ಪೂರ್ಣಗೊಳಿಸಿ ರಾಜ್ಯದ ಪಾಲಿಗೆ ಬರುವಂತ ನೀರನ್ನು ಬಳಕೆ ಮಾಡಿಕೊಳ್ಳಲಾಗುವುದು. ಈ ಬಗ್ಗೆ ಈಗಾಗಲೇ ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದೆ. ಈಗಾಗಲೇ 250 ಕೋಟಿ ಖಚರ್ು ಮಾಡಲಾಗಿದೆ ಇನ್ನುಮುಂದೆ ಮತ್ತಷ್ಟು ಹಣ ಖಚರ್ಾದರೂ ಸರಿ ಸಕರ್ಾರದ ಸಹಾಯದಿಂದ ಕಾಮಗಾರಿ ಪೂರ್ಣಗೊಳಿಸುತ್ತೆವೆ ಎಂದರು. ನಾವು ಕೂಡ ಪರಿಸರಪ್ರೇಮಿಗಳಾಗಿದ್ದು, ಪರಿಸರಕ್ಕೆ ಧಕ್ಕೆಯಾಗದ ರೀತಿಯಲ್ಲಿ ಯೋಜನೆ ಕೈಗೊಳ್ಳುತ್ತೇವಎಂದರು. ಕಳಸಾ-ಬಂಡೂರಿ ಕಾಮಗಾರಿಗೆ 499 ಹೆಕ್ಟೇರ್ ಅರಣ್ಯಭೂಮಿ ಹಾಗೂ 191 ಖಾಸಗಿ ಜಮೀನು ಅಗತ್ಯವಿದೆ. ಭೂಸ್ವಾಧೀನಕ್ಕೆ ಸಕರ್ಾರ ಸಿದ್ಧವಿದೆ ಎಂದರು.
ಸಮುದ್ರಕ್ಕೆ ವ್ಯರ್ಥವಾಗಿ ಹರಿಯುತ್ತಿರುವ 140 ಟಿಎಂಸಿ ನೀರನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂಬುದು ನಮ್ಮ ಮುಖ್ಯ ಉದ್ದೇಶವಾಗಿದೆ. ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳು ಕೂಡ ತಮ್ಮ ಪಾಲಿನ ನೀರನ್ನು ಬಳಕೆ ಮಾಡಿಕೊಳ್ಳಲಿ ಅದಕ್ಕೆ ನಮ್ಮಿಂದ ಯಾವುದೇ ವಿರೋಧವಿಲ್ಲ. ಇದನ್ನು ಅರಿತು ಸಹಕರಿಸಬೇಕು ಎಂದರು.