ದುಡಿಯೋಣ ಬಾ ಅಭಿಯಾನ ಚಾಲನೆ ನೀಡಿದ: ಶ್ರೀಕಾಂತ ಕನಮಡಿ

Dudiyonu Baara Campaign Launched: Srikanth Kanamadi

ಇಂಡಿ 19: ಬೇಸಿಗೆ ಅವಧಿಯಲ್ಲಿ ನರೇಗಾ ಕೂಲಿಕಾರರಿಗೆ ನಿರಂತರ ಕೆಲಸ ಒದಗಿಸಲಾಗುವುದು. ಕೆಲಸದ ಬೇಡಿಕೆ ಅರ್ಜಿ ಸಲ್ಲಿಸಿದ ಪ್ರತಿಯೊಬ್ಬರಿಗೂ ಸಮುದಾಯ ಆಧಾರಿತ ಕಾಮಗಾರಿಯಲ್ಲಿ ಓಒಖ ತೆಗೆಯಲಾಗುವುದು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕೆಲಸಕ್ಕೆ ಬನ್ನಿ ಎಂದು ಬಳ್ಳೊಳ್ಳಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಕಾಂತ ಕನಮಡಿ ಅವರು ತಿಳಿಸಿದರು.ತಾಲೂಕಿನ ಬಳ್ಳೋಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೋಮಣ್ಣ ಸಂಗೋಗಿ ಇವರ ಹೊಲದ ಹತ್ತಿರ ಹಮ್ಮಿಕೊಳ್ಳಲಾಗಿದ್ದ ಕೆರೆ ಹೂಳು ಎತ್ತುವ ಕಾಮಗಾರಿ ಸ್ಥಳದಲ್ಲಿ ದುಡಿಯೋಣ ಬಾ ಅಭಿಯಾನ ಸಂದರ್ಭದಲ್ಲಿ ಅವರು ಮಾತನಾಡಿದರು.   

ಏಪ್ರಿಲ್ 1ರಿಂದ ಕೂಲಿ ಕಾರ್ಮಿಕರಿಗೆ ದಿನಗುಲಿಯನ್ನು  349 ರಿಂದ 370 ಕ್ಕೆ ಹೆಚ್ಚಾಗಿರುವ ಕುರಿತು ಮಾಹಿತಿ ನೀಡಿದರು. ಪ್ರಸುತ್ತ  ಆರ್ಥಿಕ ವರ್ಷದಲ್ಲಿ 100ದಿನ ಪೂರೈಸಿದರೆ ಒಟ್ಟು 37000 ರೂ.ಗಳನ್ನು  ಪಡೆಯುವುದರ ಮೂಲಕ ಆರ್ಥಿಕವಾಗಿ ಸ್ವಾವಲಂಬನೆಯ ಜೀವನ ಮಾಡಬಹುದು ಎಂದು ಹೇಳಿದರು. ಸರಿಯಾಗಿ ಅಳತೆಗೆ ತಕ್ಕಂತೆ ಕೆಲಸ ಮಾಡಿ ಪೂರ್ಣ ಮೊತ್ತದ ಕೂಲಿ ಪಡೆಯಿರಿ ಎಂದು ತಿಳಿಸಿದರು. ಕಾಮಗಾರಿ ಸ್ಥಳದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ನೆರಳಿನ ವ್ಯವ್ಯಸ್ಥೆ ಹಾಗೂ ಪ್ರಥಮ ಚಿಕಿತ್ಸೆ ಪೆಟ್ಟಿಗೆ ಇಡಲಾಗುವುದು. ಶಿಶು ಪಾಲನಾ ಕೇಂದ್ರ ಗ್ರಾಮ ಪಂಚಾಯಿತಿಯಲ್ಲಿ ಸ್ಥಾಪಿಸಲಾಗಿದ್ದು 6 ತಿಂಗಳ ದಿಂದ 3 ವರ್ಷ ಒಳಗಿನ ಮಕ್ಕಳನ್ನು ಆರೈಕೆ ಮಾಡಲಾಗುವುದು ಇದರ ಸದುಪಯೋಗ ಪಡೆದುಕೊಳ್ಳಿ ಎಂದು ತಿಳಿಸಿದರು.ಮಾಹಿತಿ ಶಿಕ್ಷಣ ಹಾಗೂ ಸಂವಹನ ಐ ಇ ಸಿ ಸಂಯೋಜಕರು ರಾಮಗೌಡ ಸರಬಡಗಿ, ಗ್ರಾ.ಪಂ ಸದಸ್ಯರು, ತಾಂತ್ರಿಕ ಸಹಾಯಕರು ಶಿವರಾಜ ಬಿರಾದಾರ, ಗಣಕಯಂತ್ರ ಸಹಾಯಕರು ಭೀಮಾಶಂಕರ ನಾವಿ, ಗ್ರಾಮ ಕಾಯಕ ಮಿತ್ರ ಪೂಜಾ ನಾಯ್ಕೊಡಿ, ಗ್ರಾ.ಪಂ. ಸಿಬ್ಬಂದಿಗಳು ಇದ್ದರು.