ಕೊರೊನಾ ವೈರಸ್ ಕಾರಣ ಡಬ್ಲಿನ್ ಮ್ಯಾರಥಾನ್ ರದ್ದು

ನವದೆಹಲಿ, ಮೇ 19,ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಕಾರಣ ಈ ವರ್ಷದ ಡಬ್ಲಿನ್ ಮ್ಯಾರಥಾನ್ ಅನ್ನು ರದ್ದುಪಡಿಸಲಾಗಿದೆ. ಬಹಳ ವಿಷಾದದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮ್ಯಾರಥಾನ್ ಸಂಘಟಕರು ಹೇಳಿದ್ದಾರೆ. ಈ ಕೂಟದೊಂದಿಗೆಯೇ ನಡೆಯಬೇಕಿದ್ದ 2020ರ ರಾಷ್ಟ್ರೀಯ ಮ್ಯಾರಥಾನ್ ಚಾಂಪಿಯನ್ ಷಿಪ್ ಅನ್ನು ಸಹ ರದ್ದುಪಡಿಸಲಾಗಿದೆ. 2020ರ ಕೆಬಿಸಿ ಡಬ್ಲಿನ್ ಮ್ಯಾರಥಾನ್ ಮತ್ತು ರೇಸ್ ಸೀರೀಸ್ ಗೆ ಪಡೆದಿದ್ದ ಎಲ್ಲ ಪ್ರವೇಶಗಳು 2021ರ ರೇಸ್ ಗಳಿಗೆ ಅನ್ವಯವಾಗಲಿದೆ. ಒಂದು ವೇಳೆ ಯಾರು ಈ ರೇಸ್ ಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುವುದಿಲ್ಲವೋ ಅಂಥವರ ಶುಲ್ಕವನ್ನು ಪೂರ್ಣವಾಗಿ ಹಿಂತಿರಿಸಲಾಗುತ್ತದೆ ಎಂದು ಆಯೋಜಕರು ಹೇಳಿದ್ದಾರೆ."ಕೆಬಿಸಿ ಡಬ್ಲಿನ್ ಮ್ಯಾರಥಾನ್ ಮತ್ತು ರೇಸ್ ಸರಣಿಯನ್ನು ಸೂಕ್ತ ಸಾಮಾಜಿಕ ಅಂತರದೊಂದಿಗೆ ಆಯೋಜಿಸಲು ಅನೇಕ ಪರ್ಯಾಯ ಮಾರ್ಗಗಳನ್ನು ಪರಿಗಣಿಸಲಾಗಿದೆ," ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.