ಡ್ರೋನ್‌ ಪ್ರತಾಪ್‌ಗೆ 10 ದಿನಗಳ ಕಾಲ ನ್ಯಾಯಾಂಗ ಬಂಧನ

Drone Pratap remanded in judicial custody for 10 days

ತುಮಕೂರು: ಬಿಗ್‌ ಬಾಸ್‌ ಬಳಿಕ ಒಂದಲ್ಲ ಒಂದು ಕಾರಣದಿಂದ ಸುದ್ದಿಯಲ್ಲಿರುವ ಡ್ರೋನ್‌ ಪ್ರತಾಪ್‌ರನ್ನು ಇತ್ತೀಚೆಗೆ ಪೊಲೀಸರು ಬಂಧಿಸಿದ್ದಾರೆ.

ತಮ್ಮ ಯೂಟ್ಯೂವ್‌ ಚಾನೆಲ್‌ಗೆ ವಿಡಿಯೋ ಹಾಕುವ ನಿಟ್ಟಿನಲ್ಲಿ ಪ್ರತಾಪ್‌ ಕೃಷಿ ಹೊಂಡಕ್ಕೆ (ಸೋಡಿಯಂ ಮೆಟಲ್ ಸ್ಪೋಟ ಪ್ರಕರಣದಲ್ಲಿ) ಸ್ಫೋಟಕ ವಸ್ತುವನ್ನು ಎಸೆದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಪೊಲೀಸ್‌ ಕಸ್ಟಡಿಯಲ್ಲಿ ಮೂರು ದಿನ ಕಳೆದ ಪ್ರತಾಪ್‌ ಅವರನ್ನು ಡಿ.16 ರಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು.

 

ವಿಚಾರಣೆ ನಡೆಸಿದ ನ್ಯಾಯಾಲಯ 10 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಮಧುಗಿರಿ ಜೆಎಂಎಫ್‌ಸಿ ಕೋರ್ಟ್ ಆದೇಶ ನೀಡಿದೆ.

ಪ್ರಕರಣ ಸಂಬಂಧ  ಕ್ಯಾಮೇರಾ ಮ್ಯಾನ್ ವಿನಯ್, ಸೋಡಿಯೋಂ ಕೊಡಿಸಿದ್ದ ಪ್ರಜ್ವಲ್ ಅವರನ್ನು ಸಹ ಪೊಲೀಸರು ಬಂಧಿಸಿದ್ದು, ಜಮೀನಿನ ಮಾಲೀಕ ಜಿತೇಂದ್ರಜೈನ್ ಮೇಲೂ ಎಫ್ಐಆರ್ ಆಗಿದೆ. ಆದರೆ ಅವರನ್ನು ಇನ್ನು ಬಂಧಿಸಿಲ್ಲ. ಸದ್ಯ ಪೊಲೀಸರು ಅವರ ಬಂಧನಕ್ಕೆ ಬಲೆ ಬೀಸಿದ್ದಾರೆ.


ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ ಸಂಬಂಧ ಡ್ರೋನ್​ ಪ್ರತಾಪ್​ ಅವರ ವಿರುದ್ಧ ಮಿಡಿಗೇಶಿ ಠಾಣೆ ಪೊಲೀಸರು BNS ಸೆಕ್ಷನ್ 288 ಮತ್ತು ಸ್ಫೋಟ ವಸ್ತು ನಿಯಂತ್ರಣ ಕಾಯ್ದೆ 3ರ ಅಡಿ ಪ್ರಕರಣ ದಾಖಲಿಸಿದ್ದರು.