ನವದೆಹಲಿ, ಡಿಸೆಂಬರ್ 21 ಉತ್ತರ ಭಾರತದಲ್ಲಿ ಮೈ ಕೊರೆಯುವ ಚಳಿ, ಹಿಮಪಾತ, ದಟ್ಟ ಮಂಜಿನ ವಾತವರಣದಿಂದ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿದೆ. ರಾಷ್ಠ್ರ ರಾಜಧಾನಿಯಲ್ಲಿ ದಟ್ಟ ಮಂಜಿನಿಂದಾಗಿ 760 ವಿಮಾನಗಳ ಆಗಮನ ವಿಳಂಬವಾಗಿದ್ದು, 19 ವಿಮಾನಗಳ ಸಂಚಾರ ರದ್ದುಪಡಿಸಲಾಗಿದೆ. 100ಕ್ಕೂ ಹೆಚ್ಚು ರೈಲುಗಳು ಸಂಚಾರ ಸಹ ಏರುಪೇರಾಗಿದೆ. ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶಗಳಲ್ಲಿ
ವ್ಯಾಪಕ ಹಿಮಪಾತವಾಗುತ್ತಿದೆ. ಎನ್ಸಿಆರ್ ಪ್ರದೇಶದಲ್ಲಿ ಕನಿಷ್ಠ ತಾಪಮಾನ 6.4 ಡಿಗ್ರಿ ಸೆಲ್ಷಿಯಸ್ಗೆ
ಇಳಿದಿದೆ. ಶನಿವಾರ ಕೂಡಾ ತೀವ್ರ ಚಳಿ ಪರಿಸ್ಥಿತಿ
ಮುಂದುವರಿಯಲಿದ್ದು, ಹಗುರ ಮಳೆಯಾಗುವ ನಿರೀಕ್ಷೆ ಇದೆ
ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಿಮಾಚಲ ಪ್ರದೇಶದ ಕಿಲಾಂಗ್ ನಲ್ಲಿ ಕನಿಷ್ಠ ತಾಪಮಾನ ಮೈನಸ್
6 ಡಿಗ್ರಿ ತಲುಪಿದೆ. ಪ್ರಸಿದ್ದ ಪ್ರವಾಸಿ ತಾಣ ಮನಾಲಿಯಲ್ಲಿ 2 ಡಿಗ್ರಿಗೆ ಇಳಿದಿದೆಪ್ರತಿಕೂಲ ಹವಾಮಾನ
ಕಾರಣ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ
ವಾಹನ ಸಂಚಾರ ರದ್ದುಪಡಿಸಲಾಗಿದೆ.