ಪ್ರಶಾಸಕಿಯ ಕಟ್ಟಡದ ಕಾಮಗಾರಿಗೆ ಚಾಲನೆ

ಲೋಕದರ್ಶನ ವರದಿ

ಮಾಂಜರಿ:  ಸಹಕಾರಿ ರಂಗದ ಜೊತೆಗೆ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಸುಮಾರು 35 ಶಾಖೆಗಳ ಮುಖಾಂತರ ಕಾರ್ಯ ನಿರ್ವಹಿಸುತ್ತಿರುವ ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಡಾ. ಪ್ರಭಕರ ಕೋರೆ ಕ್ರೇಡಿಟ್ ಸೌಹಾರ್ದ ಸಂಸ್ಥೆಯು ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ನಿಮರ್ಿಸುತ್ತಿರುವ ಸಂಸ್ಥೆಯ ಪ್ರಶಾಸಕಿಯ ಕಟ್ಟಡದ ಕಾಮಗಾರಿಯ ಪ್ರಾರಂಭವನ್ನು ಅಂಕಲಿ ಗ್ರಾಮದಲ್ಲಿ ಸಂಸ್ಥೆಯ ಸಂಸ್ಥಾಪಕ ಸಂಸದ ಡಾ. ಪ್ರಭಾಕರ ಕೋರೆ ಇವರ ಪ್ರಮುಖ ಉಪಸ್ಥಿತಿಯಲ್ಲಿ ವಿಧಾನ ಪರಿಷತ್ತಿನ ಸದಸ್ಯ ಹಾಗೂ ವಿಧಾನ ಪರಿಷತ್ತಿನ ವಿರೋಧಿ ಪಕ್ಷ ಮುಖ್ಯ ಸಚೆತಕರಾದ ಮಹಾಂತೇಶ ಕವಟಗಿಮಠ ಇವರ ಹಸ್ತದಿಂದ ಸೋಮವಾರದಂದು ಮುಂಜಾನೆ ಮಾಡಲಾಯಿತು.

ಈ ವೇಳೆ ಸಂಸದ ಪ್ರಭಾಕರ ಕೋರೆ ಮಾತನಾಡಿ ಗ್ರಾಮೀಣ ಭಾಗದ ಆಥರ್ಿಕ ಸಬಲತೆಗಾಗಿ ಸಹಕಾರಿ ಸಂಸ್ಥೆಗಳ ಕಾರ್ಯ ಮುಖ್ಯವಾಗಿದ್ದು ಸಹಕಾರಿ ಸಂಸ್ತೆಗಳ ಮುಖಾಂತರ ಸರ್ವಸಾಮಾನ್ಯರ ಬದುಕು ಸುಲಭವಾಗಿದೆ ಆಥರ್ಿಕ ಸಂಸ್ಥೆಗಳ ಸ್ಪಧರ್ೆಯಲ್ಲಿ ಸಹಕಾರಿ ರಂಗದ ಗ್ರಾಮೀಣ ಭಾಗದ ಸಹಕಾರಿ ಸಂಸ್ಥೆಗಳ ಪ್ರಾಮಾಣಿಕತೆಯಿಂದ ಉತ್ತರ ಕನರ್ಾಟಕದಲ್ಲಿರುವ ಅನೆಕ ಸಹಕಾರಿ ಸಂಸ್ಥೆಗಳು ಪ್ರಗತಿಯನ್ನು ಸಾಧಿಸಿದೆ ಎಂದು ಅವರು ಹೇಳಿದರು.

ಮೊದಲು ಸಂಸ್ಥೆಯ ಅಧ್ಯಕ್ಷರಾದ ಮಹಾಂತೇಶ ಪಾಟೀಲ ದಾಂಪತ್ಯ ಜೊತೆಗೆ ಪೂಜಾ ವಿಧಿಯನ್ನು ನೆರವೆರಿಸಿ ಸಂಸದ ಪ್ರಭಾಕರ ಕೋರೆ ಮಹಾಂತೇಶ ಕವಟಗಿಮಠ ಹಾಗೂ ಇನ್ನುಳಿದ ಗಣ್ಯರ ಹಸ್ತದಿಂದ ಕಟ್ಟಡ ಕಾಮಗಾರಿಯನ್ನು ಪ್ರಾರಂಭಿಸಲಾಯಿತು ಈ ವೇಳೆ ಸಂಸ್ಥೆಯ ಉಪಾಧ್ಯಕ್ಷರಾದ ಶೋಭಾ ಜಕಾತೆ, ನಿದರ್ೆಶಕರಾದ ಮಲ್ಲಿಕಾಜರ್ುನ ಕೋರೆ, ಸಿದಗೌಡಾ ಮಗದುಮ್ಮ, ಅಣ್ಣಾಸಾಹೇಬ ಸಂಕೇಶ್ವರಿ, ಪಿಂಟು ಹಿರೆಕುರಬರ, ಮಹಾದೇವ ಪೋಳ, ಶೈಲಜಾ ಪಾಟೀಲ, ಬಸನಗೌಡಾ ಆಸಂಗಿ, ಡಾ|| ಸುಕುಮಾರ ಚೌಗಲೆ, ಲಿಂಬಾಜಿ ನಾಗರಾಳೆ, ಕಾಡಪ್ಪಾ ಸಂಗೋಟಿ, ಜ್ಯೋತಿಗೌಡಾ ಪಾಟೀಲ, ಸಚೀನ ಕುಠೋಳೆ, ಗಣಪತಿ ಕಮತೆ, ಪ್ರಸಾದ ಮೆದಾರ, ನಾಗೇಶ ಧರನಾಯಿಕ, ನೆಹರು ಚಿಕಲಿ, ಧೂಧಗಂಗಾ ಕೃಷ್ಣಾ ಸಹಕಾರಿ ಸಕ್ಕರೆ ಕಾಖರ್ಾನೆಯ ನಿದರ್ೆಶಕರಾದ ಅಜೀತರಾವ ದೇಸಾಯಿ, ಭರತೇಶ ಬನವಣೆ, ಚೇತನ ಪಾಟೀಲ, ಅಣ್ಣಾಸಾಹೇಬ ಪಾಟೀಲ, ಮಲ್ಲಪ್ಪಾ ಮೈಶಾಳೆ, ತಾತ್ಯಾಸಾಹೇಬ ಕಾಟೆ, ಗ್ರಾ. ಪಂ. ಸದಸ್ಯ ಪ್ರಭಾಕರ ಶಿಂಧೆ, ತುಕಾರಾಮ ಪಾಟೀಲ, ಯುವರಾಜ ಪಾಟೀಲ ಹಾಗೂ ಸಂಸ್ಥೆಯ ಸದಸ್ಯರು ಗ್ರಾಮಸ್ಥರು ಹಾಜರಿದ್ದರು ಪ್ರಧಾನ ವ್ಯವಸ್ಥಾಪಕ ದೇವೆಂದ್ರ ಕರೋಶಿ ಸ್ವಾಗತಿಸಿ ಸೌ ಸುನಂದಾ ಮಗದುಮ್ಮ ವಂದಿಸಿದರು.