ನೂತನವಾಗಿ ಖರೀದಿಸಿದ ಬೊಲೆರೋ ವಾಹನ ಚಾಲನೆ

ನೂತನವಾಗಿ ಖರೀದಿಸಿದ ಬೊಲೆರೋ ವಾಹನ ಚಾಲನೆ Driving a newly purchased Bolero vehicle

ಲೋಕದರ್ಶನ ವರದಿ 

      ಸಿಂದಗಿ 09: ಶಾಸಕರು ಈ ಒಂದು ವಾಹನ ಖರೀದಿಸಲು ಹಲವು ಅಡಚಣೆಗಳು ಇದ್ದವು ಮೇಲಾಧಿಕಾರಿಗಳ ಜೊತೆ ಸಮನ್ವಯ ಸಾಧಿಸಿ ಸುಗಮ ಆಡಳಿತ ಹಿತದೃಷ್ಟಿಯಿಂದ ಬೇಗ ವಾಹನ ಬರುವಂತೆ ಕ್ರಮ ವಹಿಸಲಾಯಿತು ಎಂದು ಶಾಸಕ  ಅಶೋಕ ಮನಗೂಳಿ ಹೇಳಿದರು. 

      ನಗರದ ತಾಲೂಕು ಪಂಚಾಯತ್ ಆವರಣದಲ್ಲಿ ನೂತನವಾಗಿ ಖರೀದಿಸಿದ ಬೊಲೆರೋ ವಾಹನ ವನ್ನು ವಾಹನ ಚಾಲನೆ ಮಾಡುವದರ ಮೂಲಕ ಚಾಲನೆ ನೀಡಿ, ಬಡ ಕೂಲಿ ಕಾರ್ಮಿಕರು ಆರ್ಥಿಕವಾಗಿ ಮುಂದೆ ತಮ್ಮ ಜೀವನವನ್ನು ರೂಪಿಸಿಕೊಳ್ಳಲು ಸ್ವಂತ ಉದ್ಯಮ ಮಾಡಿದರೆ ಮಾತ್ರ ಸಾಧ್ಯ ಎನ್ನುವುದನ್ನು ಅರಿತು ಸರಕಾರ ವಿವಿಧ ಯೋಜನೆಯಡಿ ನೀಡಲಾಗುತ್ತಿರುವ ಸ್ವಾವಲಂಬಿ ಸಾರಥಿ ಯೋಜನೆಯಡಿ ವಾಹನ ಖರೀದಿಸಲಾಗಿದ್ದು ಇದರಿಂದ ಆರ್ಥಿಕವಾಗಿ ಮುಂದೆ ಬರಬೇಕು ಎಂದರು. 

 ಜನರ ಅಭಿಪ್ರಾಯ; ಕಾರ್ಯನಿರ್ವಾಹಕ ಅಧಿಕಾರಿಗಳು ಈ ವಾಹನ ಖರೀದಿಸಲು ಮಾನ್ಯ ಶಾಸಕರು ಬಹಳ ಮುತುವರ್ಜಿ ವಹಿಸಿರುವದರಿಂದ ದಶಕಗಳಿಂದ ವಾಹನವಿರದೆ ಬಾಡಗಿ ವಾಹನ ಮೂಲಕ ಕಾರ್ಯನಿರ್ವಾಹಿಸಲಾಗುತ್ತಿತ್ತು ಆದರೆ ಇನ್ನುಮುಂದೆ ಮಾನ್ಯ ಶಾಸಕರ ಒಂದು ಶ್ರಮದಿಂದ ಸ್ವಂತ ವಾಹನ ತೆಗೆದುಕೊಳ್ಳಲು ಸಾಧ್ಯವಾಯಿತು ಎಂದು ಜನರು ಅಭಿಮತ ವ್ಯಕ್ತ ಪಡಿಸಿದರು.  

      ಈ ಸಂದರ್ಭದಲ್ಲಿ ಪುರಸಭೆ ಮಾಜಿ ಉಪಾದ್ಯಕ್ಷ ಸಂದೀಪ ಚೌರ, ತಾಪಂ ಎಇಇ ರಾಮು ಅಗ್ನಿ,  ಎ ಎ ದುರ್ಗದ ಸಹಾಯಕ ನಿರ್ದೇಶಕರು ಪಂಚಾಯತ್ ರಾಜ್, ಮಹೇಶ ಡೊನೂರ ಸಹಾಯಕ ನಿರ್ದೇಶಕರು ಬಿಸಿಯೂಟ, ಎ ಹೆಚ್ ಯಾಳಗಿ ಕಚೇರಿ ವ್ಯವಸ್ಥಾಪಕರು ಹಾಗೂ ಸಿಬ್ಬಂದಿಗಳು ಹಾಜರಿದ್ದರು. ನಗರದ ತಾಲೂಕು ಪಂಚಾಯತ್ ಆವರಣದಲ್ಲಿ ನೂತನವಾಗಿ ಖರೀದಿಸಿದ ಬೊಲೆರೋ ವಾಹನ ವನ್ನು ವಾಹನ ಚಾಲನೆ ಮಾಡುವದರ ಮೂಲಕ ಚಾಲನೆ ನೀಡಿದರು,