ಆರೋಗ್ಯ ಕೇಂದ್ರದ ಆವರಣ ಸ್ವಚ್ಛತೆ ಕಾಮಗಾರಿಗೆ ಚಾಲನೆ

ಲೋಕದರ್ಶನ ವರದಿ

ಗೋಕಾಕ 05:  ಗ್ರಾಮದ ಗ್ರಾಮ ಪಂಚಾಯತ ಅನುದಾನದಡಿಯಲ್ಲಿ ಇಲ್ಲಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣ ಸ್ವಚ್ಛತೆ ಕಾಮಗಾರಿಗೆ ಬುಧವಾರ ದಿ.4ರಂದು ಚಾಲನೆ ನೀಡುವ ಕಾರ್ಯ ನಡೆಯಿತು.

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗದರ್ಶನದಂತೆ ಗ್ರಾಮದಲ್ಲಿ ಈಗಾಗಲೇ ಸಾಕಷ್ಟು ಅಭಿವೃದ್ಧಿ ಕೆಲಸ ಕೈಗೊಳ್ಳಲಾಗಿದೆ. ಗ್ರಾಮದ ಸಮಗ್ರ ಅಭಿವೃದ್ಧಿ ಹಿತದೃಷ್ಠಿಯಿಂದ ಸ್ಥಳೀಯರ ಸಹಕಾರ ಅಗತ್ಯವಾಗಿದೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಗ್ರಾಮ ಪಂಚಾಯ್ತಿ ಅಧ್ಯಕ್ಷ ಈಶ್ವರ ಬಳಿಗಾರ ಹೇಳಿದರು.

    ಗ್ರಾಮದಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಸಾರ್ವಜನಿಕರ ಅವಶ್ಯಕ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನಿಸಲಾಗುವುದು ಎಂದು ಗ್ರಾಪಂ ಪಿಡಿಒ ಎಚ್.ಎನ್.ಬಾವಿಕಟ್ಟಿ ತಿಳಿಸಿದರು.

ಗ್ರಾಮದ ಅಭಿವೃದ್ಧಿ ಹಿತದೃಷ್ಠಿಯಿಂದ ಗ್ರಾಮಸ್ಥರು ಮನೆ, ಅಂಗಡಿ, ಮತ್ತು ಮತ್ತಿತರ ಕರಗಳನ್ನು ಗ್ರಾಪಂ ಸಿಬ್ಬಂದಿಯವರಲ್ಲಿ ಕೊಡಲೇ ಪಾವತಿಸಿಕೊಳ್ಳಬೇಕೆಂದು ಸ್ಥಳೀಯರಲ್ಲಿ ಗ್ರಾಪಂ ಕರ ವಸೂಲಿಗಾರ ಸುರೇಶ ಬಾಣಸಿ ಮನವಿ ಮಾಡಿಕೊಂಡಿದ್ದಾರೆ.  

ಸ್ಥಳೀಯರ ಶ್ಲಾಘನೆ: ಗೋಕಾಕ ತಾಪಂ ಇಒ ಬಸವರಾಜ ಹೆಗ್ಗನಾಯಿಕ ಹಾಗೂ ಗ್ರಾಮದ ಗ್ರಾಪಂ ಸದಸ್ಯರ, ಹಿರಿಯ ನಾಗರಿಕರ ಮಾರ್ಗದರ್ಶನದಲ್ಲಿ ಸ್ಥಳೀಯ ಗ್ರಾಪಂ ಸಹಯೋಗದಲ್ಲಿ ಪಿಡಿಒ ಎಚ್.ಎನ್.ಭಾವಿಕಟ್ಟಿ, ಗ್ರಾಪಂ ಅಧ್ಯಕ್ಷ ಈಶ್ವರ ಬಳಿಗಾರ, ಗ್ರಾಪಂ ಸದಸ್ಯರು, ಸಿಬ್ಬಂದಿಯವರ ಕ್ರೀಯಾಶೀಲ ವ್ಯಕ್ತಿತ್ವದ ಪಾರದರ್ಶಕ ಆಡಳಿತದಿಂದ ಇಂದು ಇಲ್ಲಿಯ ನಾಗರಿಕರ ಹಲವಾರು ಮೂಲಭೂತ ಸೌಲಭ್ಯಗಳು ದೂರಕುತ್ತಿರುವ ಹಾಗೂ ಗ್ರಾಮದ ಸಮಗ್ರ ಅಭಿವೃದ್ಧಿ, ಮಾದರಿ ಗ್ರಾಮವನ್ನಾಗಿಸುವಲ್ಲಿ ಪ್ರಯತ್ನಿಸುತ್ತಿರುವ ಗ್ರಾಪಂದವರ ಕಾರ್ಯವನ್ನು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿ ಶ್ಲಾಘಿಸಿದ್ದಾರೆ.

       ಈ ವೇಳೆ ಗ್ರಾಪಂ ಕಾರ್ಯದಶರ್ಿ ಪರಶುರಾಮ ಇಟಗೌಡರ, ಗೌಡಪ್ಪ ಮಾಳೇದ, ವಿಠಲ ಚಂದರಗಿ, ಗ್ರಾಪಂ ಸದಸ್ಯರು ಸೇರಿದಂತೆ ಗ್ರಾಮಸ್ಥರು, ಇತರರು ಇದ್ದರು.