ಕೆನಾಲ್ ಹೂಳೆತ್ತುವ ಕಾಮಗಾರಿಗೆ ಚಾಲನೆ

ಲೋಕದರ್ಶನ ವರದಿ

ಚಿಕ್ಕೋಡಿ 9: ಬಡವರ ಜೀವನೋಪಾಯದ ಸಂಪನ್ಮೂಲಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಜಾರಿಗೆ ತಂದಿದ್ದು, ಕೂಲಿಕಾಮರ್ಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ರವಿ ಸಣದಿ ಹೇಳಿದರು. 

ತಾಲೂಕಿನ ನಣದಿ ಗ್ರಾಮದಲ್ಲಿ ಗುರುವಾರ ಉದ್ಯೋಗ ಖಾತ್ರಿ ಯೋಜನೆಯಡಿ ಕೆನಾಲ್ ಹೂಳೆತ್ತುವ ಕಾಮಗ್ರಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. 

ಈ ಯೋಜನೆಯಡಿ ಆಥರ್ಿಕ ವರ್ಷದಲ್ಲಿ ಪ್ರತಿ ಕುಟುಂಬಕ್ಕೆ 100 ಉದ್ಯೋಗ ನೀಡಲಾಗುತ್ತದೆ. ದಿನಕ್ಕೆ ರೂ. 249 ಕೂಲಿ ಹಣ ವೈಯಕ್ತಿಕ ಖಾತೆಗಳಿಗೆ ಜಮಾ ಮಾಡುವ ವ್ಯವಸ್ಥೆ ಮಾಡಲಾಗಿದೆ. ಗ್ರಾಮಸ್ಥರು ಯಾವುದೇ ಕಾರಣಕ್ಕೂ ಕೆಲಸ ಅರಸಿ ಬೇರೆ ಊರುಗಳಿಗೆ ವಲಸಿ ಹೋಗಬಾರದೆಂದು ತಿಳಿಸಿದರು. 

ಐಇಸಿ ಸಂಯೋಜಕ ರಂಜೀತ ಕಾಂಬಳೆ ಮಾತನಾಡಿ, ಕಾಮಗಾರಿಗಾರಿ ಸ್ಥಳದಲ್ಲಿ ಶುದ್ಧ ಕುಡಿಯುವ ನೀರಿನ ಸೌಲಭ್ಯ, ನೆರಳಿನ ವ್ಯವಸ್ಥೆ, ಪ್ರಥಮ ಚಿಕಿತ್ಸೆ, ಶಿಶು ಪಾಲನಾ ವ್ಯಸಸ್ಥೆಯನ್ನು ಮಾಡಲಾಗುತ್ತದೆ. 

ರೇಷ್ಮೆ ಇಲಾಖೆ, ತೋಟಗಾರಿಕೆ ಇಲಾಖೆ, ಅರಣ್ಯ ಇಲಾಖೆ, ಕೃಷಿ ಇಲಾಖೆಗಳಿಂದ ಕಾಮಗಾರಿಗಳನ್ನು ಮಾಡಿಕೊಳ್ಳಬಹುದು. ಈ ಯೋಜನೆಯು ರೈತರು ಅನುಕೂಲವಾಗುತ್ತದೆ. 

ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಸ್ವಸಹಾಯ ಸಂಘಗಳಿಗೆ, ಸ್ತ್ರೀ ಶಕ್ತಿ ಸಂಘಗಳಿಗೆ ರೋಜಗಾರ ದಿವಸ ಆಚರಣೆ ಮಾಡುವುದರ ಮೂಲಕ ಯೋಜನೆಯ ಮಾಹಿತಿ ನೀಡಲಾಗುತ್ತದೆ ಎಂದರು. 

ತಾಂತ್ರಿಕ ಸಂಯೋಜಕ ಅಜೀತ ಚಿಕ್ಕೂಡ, ಅರ್ಚನಾ ವಂಜೀರೆ, ಗ್ರಾ.ಪಂ ಕಾರ್ಯದಶರ್ಿ ಎ.ಎನ್.ಮೋಪಗಾರ, ನಾವನಾಥ ಚಿಕ್ಕೂಡ, ಮುತ್ತೆಪ್ಪಾ ಯಾದಗೂಡೆ, ಸದಾಶಿವ ವಂಜೀರೆ ಮುಂತಾದವರು ಉಪಸ್ಥಿತರಿದ್ದರು.