ಲೋಕದರ್ಶನ ವರದಿ
ಶೇಡಬಾಳ 17: ಶೇಡಬಾಳ ಗ್ರಾಮ ಪಂಚಾಯತಿಯಿಂದ ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೇರಿದ ನಂತರ ಅಭಿವೃದ್ಧಿ ಕಾಮಗಾರಿಗಳು ಯುದ್ಯೊಪಾದಿಯಲ್ಲಿ ಸಾಗುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದು ಕಾಗವಾಡ ಯುವ ಮುಖಂಡ ರಮೇಶ ಭರಮು ಚೌಗಲೆ ಹೇಳಿದರು.
ಅವರು ಬುಧವಾರ ದಿ. 15 ರಂದು ಶೇಡಬಾಳ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿನ ವಾರ್ಡ ನಂ. 10 ರಲ್ಲಿ ಎಸ್.ಎಫ್.ಸಿ. ಯೋಜನೆಯಡಿ 6 ಲಕ್ಷ ರೂ. ವೆಚ್ಚದ ಅಂಬೇಡಕರ ಸ್ವಾಗತ ಕಮಾನ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡುತ್ತಿದ್ದರು. ಶೇಡಬಾಳ ಪಟ್ಟಣ ಪಂಚಾಯತಿಯ ಪ್ರತಿ ವಾರ್ಡಗಳಲ್ಲಿ ರಸ್ತೆ, ಫ್ಲವರ್ ಬ್ಲಾಕ್ ಅಳವಡಿಕೆ, ಚರಂಡಿ, ಶೌಚಾಲಯ, ಸಮುದಾಯ ಭವನ ನಿರ್ಮಾಣ ಕಾಮಗಾರಿಗಳಿಂದ ಸಾರ್ವಜನಿಕರ ಮೂಲಭೂತ ಬೇಡಿಕೆಗಳಿಗೆ ಸ್ಪಂದಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಇದೇ ರೀತಿ ಇನ್ನು ಹೆಚ್ಚಿನ ಪ್ರಮಾಣದಲ್ಲಿ ಪಟ್ಟಣ ಪಂಚಾಯತಿ ಅಭಿವೃದ್ಧಿ ಹೊಂದಲಿ ಎಂದು ಶುಭ ಹಾರೈಸಿದರು.
ಈ ಸಮಯದಲ್ಲಿ ಕುಮಾರ ಬರಗಾಲೆ, ಭರತೇಶ ನಾಂದ್ರೆ, ಪ್ರಕಾಶ ಚೌಗಲೆ, ಉತ್ಕರ್ಷ ಪಾಟೀಲ, ಅಣ್ಣಾ ಅರವಾಡೆ, ಪಪಂ ಸದಸ್ಯರಾದ ವೃಷಭ ಚೌಗಲೆ, ಆಕಾಸನಿ ಶ್ರೀನಿವಾಸ ಕಾಂಬಳೆ, ಪ್ರಕಾಶ ಮಾಳಿ, ಶಾಂತಿನಾಥ ಮಾಲಗಾಂವೆ, ಶ್ರೀನಿವಾಸ ಕಾಂಬಳೆ, ಮೋಹನ ಘೋರ್ಪಡೆ, ಸಂಜು ಕಾಂಬಳೆ, ಅರವಿಂದ ಪಾಯಪ್ರಪ, ವಿಜಯ ಕಾಂಬಳೆ, ಶಾಂತಿನಾಥ ಮಾಳಗೆ, ಮಹಿಪತಿ ಢಾಲೆ, ಅನಿಲ ಢಾಲೆ ಸೇರಿದಂತೆ ಅನೇಕರು ಇದ್ದರು.