ಮಹಾಲಿಂಗಪುರ 22: ನಿಗದಿಯಂತೆ ಫೆಬ್ರುವರಿ 22 ರಂದು ಶನಿವಾರ ಮುಂಜಾನೆ 11-30 ಕ್ಕೆ ಮುಧೋಳ ತಾಲೂಕಿನ ರನ್ನ ಬೆಳಗಲಿ ಪಟ್ಟಣದಲ್ಲಿ ಸರ್ಕಾರಿ ಪ್ರಾಯೋಜಿತ ಕವಿ ರಾಜಶೇಖರ ರನ್ನ ವೈಭವ ಕಾರ್ಯಕ್ರಮಕ್ಕೆ ಉಸ್ತುವಾರಿ ಸಚಿವ ಆರ್ ಬಿ. ತಿಮ್ಮಾಪುರ ಕವಿ ರನ್ನ ಮಹಾಶಯರಿಗೆ ಹೂಮಾಲೆ ಹಾಕುವ ಮೂಲಕ ಚಾಲನೆ ನೀಡಿದರು.
ಒಂದೇ ತರಹದ ಹಸಿರು ಸೀರೆ ಉಟ್ಟು ಕುಂಭ ಹೊತ್ತ ಮಹಿಳೆಯರು ರನ್ನ ವೈಭವ ಮೆರವಣಿಗೆಯ ಅಂದ ಚೆಂದ ಹೆಚ್ಚಿಸಿದರೆ, ಶಾಲಾ, ಕಾಲೇಜು ವಿದ್ಯಾರ್ಥಿಗಳು ಹಾಗೂ ರನ್ನ ಅಭಿಮಾನಿಗಳು ರನ್ನನ ಗದಾಯುದ್ಧ ಕಾವ್ಯದಲ್ಲಿ ವರ್ಣಿತ ಛತ್ರ, ಚಾಮರ, ಗದೆ ಹಾಗೂ ಯುದ್ಧಭೂಮಿಯಲ್ಲಿ ಕಂಡು ಬರುವ ಸ್ವಸ್ತಿಕ ಧ್ವಜ ಇತ್ಯಾದಿ ವಸ್ತುಗಳು ಸಾರ್ವಜನಿಕರ ಗಮನ ಸೆಳೆದವು.
ಮೆರವಣಿಗೆ ಸಾಗುವ ಮಾರ್ಗದಲ್ಲಿ ಬಿಸಿಲಿನ ತಾಪಕ್ಕೆ ಯಾರಿಗಾದರೂ ಆರೋಗ್ಯದಲ್ಲಿ ಏರುಪೇರಾದರೆ ಅಂತಹವರಿಗೆ ಪ್ರಾಥಮಿಕ ಹಂತದ ತುರ್ತು ಸೇವೆ ಒದಗಿಸುವ ನಿಟ್ಟಿನಲ್ಲಿ ಪಟ್ಟಣದ ಅಲ್ಲಲ್ಲಿ ಶುಧ್ಧ ಕುಡಿಯುವ ನೀರು, ಶಕ್ತಿ ವರ್ಧಕ ಗ್ಲುಕೋಸ್ (ಓಆ???ಸ್) ಪ್ಯಾಕ್ ಗಳನ್ನು ಇಡಲಾಗಿತ್ತು ಮತ್ತು ಆರೋಗ್ಯ ಸಮುದಾಯ ಕೇಂದ್ರದ ವೈದ್ಯರು ಹಾಗೂ ಸಹಾಯಕರು ಉಪಸ್ಥಿತವಿರುವ ಸಕಲ ಸಿದ್ಧತೆಯ ಎಂಬ್ಯೂಲನ್ಸ ವಾಹನ ಹಲವಾರು ಬಾರಿ ಬೆಳಗಲಿ ಪಟ್ಟಣವನ್ನು ಸುತ್ತು ಹಾಕಿ ಜನತೆಯ ಆರೋಗ್ಯ ಕಾಳಜಿ ಮೆರೆಯಿತು.
ಅಭಿಮಾನಿಗೆ ಶಹಬ್ಬಾಸ್ ಗಿರಿ: ಬೆಳಗಲಿ ಪಟ್ಟಣದ ಶಿವಪ್ಪ ಪಾಟೀಲ್ ಎಂಬ ಯುವಕ ರನ್ನ ಉತ್ಸವಕ್ಕೆ ಮಾರು ಹೋಗಿ ತನ್ನ ಕೇಶ ಮುಂಡನದಲ್ಲಿ ' ರನ್ನ ' ಅಕ್ಷರಗಳನ್ನು ಮೂಡಿಸಿಕ್ಕೊಂಡು ಸಚಿವ ತಿಮ್ಮಾಪುರ ಎದುರಿಗೆ ಆಗಮಿಸಿ ಅವರಿಂದ ಶಹಬ್ಬಾಸ್ ಗಿರಿ ಪಡೆದುಕೊಂಡಿದ್ದಲ್ಲದೆ ಆ ಯುವಕನನ್ನು ಸಚಿವರು ಜೊತೆಯಲ್ಲಿಯೇ ತೆಗೆದುಕ್ಕೊಂಡು ಮೆರವಣಿಗೆಯಲ್ಲಿ ಸಾಗಿದರು.
ಈ ಸಂದರ್ಭದಲ್ಲಿ ಸಚಿವರಾದ ಆರ್ ಬಿ. ತಿಮ್ಮಾಪುರ, ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಜಮಖಂಡಿ ಉಪ ವಿಭಾಗಾಧಿಕಾರಿ ಶ್ವೇತಾ ಮೋಹನ್ ಬೀಡಿಕರ, ತಹಶೀಲ್ದಾರ್ ಗೀರೀಶ್ ಸ್ವಾದಿ, ಮುಧೋಳ ತಹಶೀಲ್ದಾರ್ ಮಹಾದೇವ ಸನ್ಮೂರಿ, ಜಿಲ್ಲಾ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಡಾ.ಪುಣೀತ, ಭೀಮಪ್ಪ ತಳವಾರ, ಸಿದ್ಧರಾಮ ಶ್ರೀಗಳು ಮತ್ತು ರನ್ನ ಪ್ರತಿಷ್ಠಾನ ಪದಾಧಿಕಾರಿಗಳು ಹಾಗೂ ಸದಸ್ಯರು, ಪಟ್ಟಣ ಪಂಚಾಯತ್ ಅಧ್ಯಕ್ಷೆ ರೂಪಾ ಸದಾಶಿವ ಹೊಸಟ್ಟಿ, ಉಪಾಧ್ಯಕ್ಷೆ ಸಹನಾ ಸಿದ್ದು ಸಾಂಗ್ಲಿಕರ,ಊರಿನ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಗುರು ಹಿರಿಯರು, ರಾಜಕೀಯ ಧುರೀಣರು, ವಿಧ್ಯಾರ್ಥಿಗಳು, ಪಾಲಕರು, ಶಿಕ್ಷಕ ವೃಂದ, ಎಲ್ಲ ಕಲಾವಿದರು ಅಲ್ಲದೆ ಇನ್ನೂ ಮುಂತಾದವರು ಉಪಸ್ಥಿತರಿದ್ದರು.