ಭೂತರಾಮನಹಟ್ಟಿಯ ಮುಕ್ತಿಮಠದ ಜಾತ್ರಾ ಮಹೋತ್ಸವಕ್ಕೆ ಚಾಲನೆ

ಲೋಕದರ್ಶನ ವರದಿ

ಬೆಳಗಾವಿ, 14: ಶಿವಸಿದ್ದ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಮುಕ್ತಿಮಠದ ಕ್ಷೇತ್ರಕ್ಕೆ ಕಾಯಕಲ್ಪವಾಗಿ ನಿಂತಿದ್ದಾರೆ ಎಂದು ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಸೋಮವಾರ ನಗರದ ಹೊರವಲಯದಲ್ಲಿರುವ ಭೂತರಾಮನಹಟ್ಟಿಯ ಮುಕ್ತಿಮಠದಲ್ಲಿ ಜ.14ರಿಂದ 18ರವರೆಗೆ ನಡೆಯುವ ಜಾತ್ರಾಮಹೋತ್ಸವಕ್ಕೆ ಇಂದು ಚಾಲನೆ ನೀಡಿ ಮಾತನಾಡಿದರು. ಶಿವಸಿದ್ದ ಸೋಮೇಶ್ವರ ಸ್ವಾಮೀಜಿ ಶ್ರೀಮಠಕ್ಕೆ ಸಂಸ್ಥಾಪಕರಾಗಿ ಕ್ಷೇತ್ರದಲ್ಲಿ ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದಾರೆ. ಇಡೀ ರಾಜ್ಯ ಹೊರ ರಾಜ್ಯಗಳಿಂದ ಭಕ್ತ ಸಮೂಹ ಮಠಕ್ಕೆ ಆಗಮಿಸುವ ಮೂಲಕ ಇಲ್ಲಿಯ ಮುಕ್ತಾಂಭಾ ದರ್ಶನ ಹಾಗೂ ಜಗದ್ಗುರು ಪಂಚಪೀಠಾಧೀಶರರ ವಿಶೇಷವಾಗಿರುವ ಮೂತರ್ಿಗಳು ದ್ವಾದಶ ಜೋತರ್ಿಲಿಂಗ ಸೇರಿದಂತೆ ಅನೇಕ ದೇವಾನು ದೇವಾನು ದೇವತೆಗಳು ನೆಲೆಸಿರುವುದರಿಂದ ಇದು ಭೂ ಕೈಲಾಸವಾಗಿ ಹೊರ ಹೊಮ್ಮುತ್ತಿರುವುದು ಅಭಿಮಾನದ ಸಂಗತಿ ಎಂದರು.

ಇತ್ತೀಚಿನ ದಿನಮಾನಗಳಲ್ಲಿ ಮೊಬೈಲ್ ಬಂದ ನಂತರ ನಮ್ಮ ಸಮಾಜದ ಯುವಕರು ಹಿರಿಯರ ಸಂಪ್ರದಾಯವನ್ನು ಮರೆಯುತ್ತಿದ್ದಾರೆ. ಮೊದಲು ಸಂಕ್ರಾಂತಿಯ ಸಡಗರಿಂದ ಎಲ್ಲರೂ ಮನೆ-ಮನೆಗೆ ತೆರಳಿ ಯಳ್ಳು-ಬೆಲ್ಲ ಪರಸ್ಪರ ವಿನಿಮಯ ಮಾಡಿಕೊಳ್ಳುತ್ತಿದ್ದರು. ಆದರೆ ಆಧುನಿಕ ದಿನದಲ್ಲಿ ಮೊಬೈಲ್ನಲ್ಲಿ ವಾಟ್ಸಪ್, ಫೇಸ್ಬುಕ್ಗಳಲ್ಲಿ ಶುಭಾಷಯ ಕೊರುವ ಪದ್ದತಿ ನಿಲ್ಲಬೇಕೆಂದರು.

ಶಿವಸಿದ್ದ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಭಕ್ತರ ಸಹಾಯ ಸಹಕಾರದಿಂದ ಕ್ಷೇತ್ರ ಬೆಳೆಯುತ್ತಿದೆ. ಇಲ್ಲಿ ಸರ್ವಜನಾಂಗದವರು ಕೂಡ ವಿಶೇಷ ಸೇವೆ ಸಲ್ಲಿಸುತ್ತಿರುವುದು ನಾವು ಗಮನಿಸಬಹುದು ಎಂದರು.

ಹಿರೇಮುನವಳ್ಳಿಯ ಶ್ರೀ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ ಧ್ವಜಾರೋಹಣವನ್ನು ನೆರೆವೆರಿಸಿ ಮಾತನಾಡಿ, ಪಂಚಾಚಾರ್ಯ ಧ್ವಜಾರೋಹಣವನ್ನು ನಾವು ಇಂದು ನೆರವೆರಿಸಿದ್ದೇವೆ. ರಂಭಾಪುರಿ, ಉಜ್ಜಯಿಣಿ, ಕಾಶಿ,ಕೇದಾರ, ಶ್ರೀಶೈಲ ಮಹಾಪೀಠಗಳ ಪ್ರತಿಕವಾಗಿರುವ ಧ್ವಜಾರೋಹಣ ಮಾಡುವುದರ ಮೂಲಕ ಪಂಚತತ್ವದ ಪೂಜೆಯನ್ನು ಇಲ್ಲಿ ನೆರವೆರಿಸಲಾಯಿತು ಎಂದರು.

ಗುಂಡಸಾಗರದ  ಚಂದ್ರಶೇಖರ ಶಾಸ್ತ್ರೀಗಳು ವಿಶೇಷ ವೈದೀಕತ್ವದ ಪೂಜಾ ಕಾರ್ಯಗಳನ್ನು ನೆರವೆರಿಸಿದರು. ಈ ಸಂದರ್ಭದಲ್ಲಿ ಸಾವಿರಾರು ಭಕ್ತರು ಉಪಸ್ಥಿತರಿದ್ದರು.