ಕೊಪ್ಪಳ 09 : ಆನೆಗೊಂದಿಯ ದುಗರ್ಾದೇವಿ ದೇವಸ್ಥಾನದಿಂದ ವಿವಿಧ ಕಲಾ ತಂಡಗಳ ಭವ್ಯ ಮೆರವಣಿಗೆ ಮೂಲಕ ಆನೆಗೊಂದಿ ಉತ್ಸವ-2020ಕ್ಕೆ ಚಾಲನೆ ನೀಡಲಾಯಿತು.
ಕೊಪ್ಪಳ ಜಿಲ್ಲೆಯ ಐತಿಹಾಸಿಕ ಕ್ಷೇತ್ರವಾದ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಉತ್ಸವ-2020ರ ನಿಮಿತ್ತ ಇಂದು (ಜ.9) ಬೆಳಿಗ್ಗೆ ವಿವಿಧ ಕಲಾ ತಂಡಗಳ ಭವ್ಯ ಮೆರವಣಿಗೆ ಆದಿಶಕ್ತಿ ದುರ್ಗಾ ದೇವಿಗೆ ಪೂಜೆ ಸಲ್ಲಿಸಿ, ಡೊಳ್ಳು ಬಾರಿಸುವುದರ ಮೂಲಕ ಗಂಗಾವತಿ ಶಾಸಕ ಪರಣ್ಣ ಈಶ್ವರಪ್ಪ ಮುನವಳ್ಳಿ ಅವರು ಚಾಲನೆ ನೀಡುವರು.
ರಾಜವಂಶಸ್ಥರಾದ ಶ್ರೀ ಕೃಷ್ಣದೇವರಾಯ, ಲಲಿತಾರಾಣಿ, ಕೊಪ್ಪಳ ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಚ್. ವಿಶ್ವನಾಥರೆಡ್ಡಿ, ಗಂಗಾವತಿ ತಾಲ್ಲೂಕು ಪಂಚಾಯತ್ ಅಧ್ಯಕ್ಷ ಮಲ್ಲಿಕಾರ್ಜುನಗೌಡ ಪೊ. ಪಾಟೀಲ್, ಉಪವಿಭಾಗಾಧಿಕಾರಿ ಸಿ.ಡಿ.ಗೀತಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಸಿದ್ದಲಿಂಗೇಶ ಕೆ. ರಂಗಣ್ಣನವರ್, ಗಂಗಾವತಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಡಾ. ಡಿ.ಮೋಹನ, ತಹಶೀಲ್ದಾರರಾದ ಗಂಗಾವತಿಯ ಎಲ್.ಡಿ. ಚಂದ್ರಕಾಂತ, ಕನಕಗಿರಿಯ ರವಿ ಅಂಗಡಿ, ಕಾರಟಗಿಯ ಕವಿತಾ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಮೆರವಣಿಗೆಯಲ್ಲಿ 40 ಕ್ಕೂ ಹೆಚ್ಚು ಕಲಾತಂಡಗಳು, ವಿದ್ಯಾಥರ್ಿಗಳು ಭಾಗವಹಿಸಿ ಮೆರವಣಿಗೆಯನ್ನು ಆಕರ್ಷಕಗೊಳಿಸಿದರು.