ಲೋಕದರ್ಶನ ವರದಿ
ಹೊನ್ನಾವರ: ಅರಣ್ಯ ಇಲಾಖೆ ಹೊನ್ನಾವರ ವಿಭಾಗ,ಉಪವಿಭಾಗ ಹೊನ್ನಾವರ ವಲಯ ಇವರ ಸಂಯುಕ್ತ ಆಶ್ರಯದಲ್ಲಿ ಹಸಿರು ಕರ್ನಾಟಕ ಆಂದೋಲನ ಬಿಜದುಂಡೆ ಅಭಿಯಾನ ಇಲ್ಲಿನ ಕಾಸರಕೋಡ ಕೇಂದ್ರಿಯ ಸಸ್ಯಪಾಲನಾಲಯದಲ್ಲಿ ನಡೆಯಿತು.
ಬಿಜದುಂಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಹೊನ್ನಾವರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ.ಬಿ ಮಾತನಾಡಿ ಹಸಿರು ಕರ್ನಾಟಕ ಎನ್ನುವುದು ರಾಜ್ಯದ ಅತಿಮುಖ್ಯವಾದ ಹಸಿರುಕರಣ ಕಾರ್ಯಕ್ರಮವಾಗಿದೆ. ಇದರಡಿಯಲ್ಲಿ ಬೀಜದುಂಡೆ ಅಭಿಯನ ಹಮ್ಮಿಕೊಂಡಿದ್ದೇವೆ. ಹೊನ್ನಾವರದ ಮಾರ್ ಥೋಮ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 250 ವಿದ್ಯಾಥರ್ಿಗಳು ಈ ಕಾರ್ಯಕ್ರಮದಲ್ಲಿ ಉತ್ಸುಕತೆಯಿಂದ ಪಾಲ್ಗೊಂಡಿದ್ದಾರೆ. ಜನಪ್ರತಿನಿಧಿಗಳು, ಶಾಲಾ-ಕಾಲೇಜು ಆಡಳಿತ ಮಂಡಳಿಯವರು,ಸಾರ್ವಜನಿಕರ ಸಹಭಾಗಿತ್ವದಲ್ಲಿ ಶಾಲಾ-ಕಾಲೇಜುಗಳಲ್ಲಿ ,ರಸ್ತೆ ಬದಿಗಳಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದೇವೆ. 7 ನರ್ಸರಿಗಳಿಂದ ಒಟ್ಟು 15ಲಕ್ಷಕ್ಕಿಂತ ಹೆಚ್ಚು ವಿವಿಧ ಜಾತಿಯ ಸಸ್ಯಗಳು ಲಭ್ಯವಿದೆ ಎಂದರು.
ಮಾರ್ ಥೋಮ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಶೈಕ್ಷಣಿಕ ನಿದರ್ೇಶಕ ಎಚ್.ಎನ್ ಪೈ ಮಾತನಾಡಿ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳಿಗೆ ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟ ಅರಣ್ಯ ಇಲಾಖೆಗೆ ಧನ್ಯವಾದ ಅಪರ್ಿಸುತ್ತೇನೆ ಎಂದರು.
ಮಾರ್ ಥೋಮ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಅಕ್ಷಯ್ ಹೆಗಡೆ, ವಿನಯ್ ಮಾತನಾಡಿ ಅರಣ್ಯ ಸಂಪತ್ತು ರಕ್ಷಿಸುವ ಉಳಿಸಿ-ಬೆಳೆಸುವ ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಖುಷಿ ಎನಿಸುತ್ತದೆ. ಇದು ನಮಗೆ ಹೊಸ ಅನುಭವ ನೀಡಿದೆ. ಇಂತಹ ಕಾರ್ಯಕ್ರಮಗಳು ಅರಣ್ಯ ಇಲಾಖೆಯಿಂದ ಇನ್ನು ಹೆಚ್ಚಾಗಿ ನಡೆಯಲಿ ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಈ ಸಂಧರ್ಬದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನಂದೀಶ ಎಲ್, ವಲಯ ಅರಣ್ಯ ಅಧಿಕಾರಿ ಅಜಯ ಕುಮಾರ, ಉಪವಲಯ ಅರಣ್ಯಾಧಿಕಾರಿ ಹರಿಶ್ಚಂದ್ರ ಪಟಗಾರ, ಮಾರ್ ಥೋಮ ಶಾಲೆಯ ಆಡಳಿತ ಮಂಡಳಿ, ಪ್ರಾಂಶುಪಾಲ ರೆ||ಜೋನ ಉಮ್ಮನ್, ಖಜಾಂಚಿ ಕೆ ಸಿ ವಗರ್ೀಸ್ ಮತ್ತಿತರರು ಉಪಸ್ಥಿತರಿದ್ದರು.