ಲೋಕದರ್ಶನ ವರದಿ
ವಿಜಯಪುರ 14:ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಜಿಲ್ಲೆಯಾದ್ಯಂತ ಜ.14 ರಿಂದ 31ರವರೆಗೆ ಹಮ್ಮಿಕೊಂಡಿರುವ ಪಾಪು ಗಾಂಧಿ ಬಾಪು ಆದ ಕಥೆ ರಂಗರೂಪ ಪ್ರದರ್ಶನಕ್ಕೆ ಸೋಮವಾರ ಬಬಲೇಶ್ವರದಲ್ಲಿ ಚಾಲನೆ ದೊರೆಯಿತು.
ಬಬಲೇಶ್ವರದಲ್ಲಿಂದು ಬಸವೇಶ್ವರ ಶಿಕ್ಷಣ ಸಂಸ್ಥೆ ಬಾಪೂಜಿ ಪ್ರಾಥಮಿಕ ಮತ್ತು ಫ್ರೌಢಶಾಲೆ, ಹಾಗೂ ಶ್ರೀ ಶಾರದ ಪ್ರಾಥಮಿಕ ಮತ್ತು ಫ್ರೌಢಶಾಲೆ ಇವರ ಸಹಯೋಗದೊಮದಿಗೆ ಹಮ್ಮಿಕೊಂಡಿದ್ದ ರಂಗರೂಪಕ ಪ್ರದರ್ಶನಕ್ಕೆ ಇಂದು ಬಬಲೇಶ್ವರ ತಹಶೀಲ್ದಾರರಾದ ಎಂ.ಎಸ್.ಅರಕೇರಿ ಅವರು ಚಾಲನೆ ನೀಡಿ, ಗಾಂಧೀಜಿಯವರ ಜೀವನ ಆದರ್ಶನಿಯವಾಗಿದ್ದು. ಅವರ ತತ್ವ ಸಿದ್ದಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಜೀವನ ನಮ್ಮದಾಗಿಸಿಕೊಳ್ಳೋಣ ಎಂದು ಹೇಳಿದರು. ಮಹಾತ್ಮಾ ಗಾಂಧೀಜಿಯವರ 150ನೇ ಜನ್ಮ ವಷರ್ಾಚರಣೆ ಅಂಗವಾಗಿ ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಜ 14 ರಿಂದ 31 ರವರೆಗೆ ಜಿಲ್ಲೆಯಾದ್ಯಂತ ಮಹಾತ್ಮಾ ಗಾಂಧೀಜಿಯವರ ಕುರಿತಾದ 'ಪಾಪು ಗಾಂಧಿ ಬಾಪು ಆದ ಕಥೆ " ರಂಗರೂಪಕ(ನಾಟಕ) ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.
ಮಹಾತ್ಮಾ ಗಾಂಧೀಜಿಯವರ ಕುರಿತಾದ ಈ ರಂಗ ಪಯಣದಲ್ಲಿ ಯುವ ಸಮುದಾಯ ನಮ್ಮ ಜೊತೆ ಜೊತೆಗೆ ಹೆಜ್ಜೆ ಹಾಕಬೇಕು. ಗಾಂಧೀಜಿಯವರು ಪ್ರತಿಪಾದಿಸಿರುವ ಸತ್ಯ, ಶಾಂತಿ ಮತ್ತು ಅಹಿಂಸೆ, ಕೋಮು ಸೌಹಾರ್ದತೆ ಒಪ್ಪಿಕೊಳ್ಳುವದರ ಜೊತೆಗೆ ಮಹಿಳೆಯರನ್ನು ಗೌರವಿಸಬೇಕು. ಗ್ರಾಮೀಣ ಸಮುದಾಯವನ್ನು ಪ್ರೀತಿಸಬೇಕು ಎನ್ನುವುದೇ ಈ ರಂಗ ಪಯಣದ ಉದ್ದೇಶವಾಗಿದೆ. ಜ 15 ರಂದು ಬೆಳಿಗ್ಗೆ 10-30ಕ್ಕೆ ಬಬಲೇಶ್ವರದ ಬಸವೇಶ್ವರ ಶಿಕ್ಷಣ ಸಂಸ್ಥೆಯ ಬಾಪೂಜಿ ಪ್ರಾಥಮಿಕ ಮತ್ತು ಪ್ರೌಢಶಾಲೆ, ಮಧ್ಯಾಹ್ನ 2 ಗಂಟೆಗೆ ಶಾರದಾ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಪ್ರದರ್ಶನಗಳು ಜರುಗಲಿವೆ.
ಜ 16ರಂದು ಬೆಳಿಗ್ಗೆ 11 ಗಂಟೆಗೆ ಸಾರವಾಡದ ಸ್ವಾಮಿ ವಿವೇಕಾನಂದ ಪ್ರೌಢಶಾಲೆ, ಮಧ್ಯಾಹ್ನ 2-30ಕ್ಕೆ ಸಾರವಾಡದ ಬಿ.ಕೆ.ಗುಡದಿನ್ನಿ ಪದವಿಪೂರ್ವ ಕಾಲೇಜ್, ಜ 17 ರಂದು ಬೆಳಿಗ್ಗೆ 10-30ಕ್ಕೆ ಕಾರಜೋಳದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಸಂಜೆ 6-30ಕ್ಕೆ ಕೊಲ್ಹಾರದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಜ.18ರಂದು ಬೆಳಿಗ್ಗೆ 10-30ಕ್ಕೆ ನಿಡಗುಂದಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಸಂಜೆ 5-30ಕ್ಕೆ ಮುದ್ದೇಬಿಹಾಳದ ಜ್ಞಾನ ಭಾರತಿ ವಿದ್ಯಾಮಂದಿರ ಪ್ರಾಥಮಿಕ ಮತ್ತು ಪ್ರೌಢ ಹಾಗೂ ಪಿಯು ಕಾಲೇಜ್, ಜ 19 ರಂದು ಬೆಳಿಗ್ಗೆ 10-30ಕ್ಕೆ ತಮದಡ್ಡಿ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆ, ಸಂಜೆ 6 ಗಂಟೆಗೆ ಗೊಟಖಂಡಕಿ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆ, ಜ 21 ರಂದು ಬೆಳಿಗ್ಗೆ 10-30ಕ್ಕೆ ನಾಲತವಾಡ ಮೊರಾಜರ್ಿ ದೇಸಾಯಿ ವಸತಿ ಶಾಲೆ, ಸಂಜೆ 6-30 ಗಂಟೆಗೆ ಜಮ್ಮಲದಿನ್ನಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಜ 22 ರಂದು ಬೆಳಿಗ್ಗೆ 10-30ಕ್ಕೆ ಬಸವನಬಾಗೇವಾಡಿ ಸರಕಾರಿ ಪ್ರಥಮ ದಜರ್ೆ ಪ.ಪೂ. ಕಾಲೇಜ್, ಮಧ್ಯಾಹ್ನ 2-30ಕ್ಕೆ ಬಸವನ ಬಾಗೇವಾಡಿಯ ಬಾಲಕಿಯರ ಸಕರ್ಾರಿ ಪ್ರೌಢಶಾಲೆ ಮತ್ತು ಪ.ಪೂ.ಕಾಲೇಜ್ನಲ್ಲಿ ಪ್ರದರ್ಶನ ಜರುಗಲಿದೆ. ಅದರಂತೆ ಜ 23 ರಂದು ಬೆಳಿಗ್ಗೆ 10-30ಕ್ಕೆ ದೇವರಹಿಪ್ಪರಗಿ ಎ.ಬಿ.ಸಾಲಕ್ಕಿ ಪ.ಪೂ.ಕಾಲೇಜ್, ಮಧ್ಯಾಹ್ನ 2-30ಕ್ಕೆ ದೇವರಹಿಪ್ಪರಿಗಯ ಎ.ಬಿ.ಸಾಲಕ್ಕಿ ಪ್ರೌಢಶಾಲೆ, ಜ 24 ರಂದು ಬೆಳಿಗ್ಗೆ 10-30ಕ್ಕೆ ದೇವರಹಿಪ್ಪರಗಿ ಮೊರಾಜರ್ಿ ದೇಸಾಯಿ ವಸತಿ ಶಾಲೆ, ಮಧ್ಯಾಹ್ನ 2-30ಕ್ಕೆ ಕಗ್ಗೋಡದ ಸರಕಾರಿ ಆದರ್ಶ ವಿದ್ಯಾಲಯ, ಜ 25 ರಂದು ಬೆಳಿಗ್ಗೆ 10-30ಕ್ಕೆ ಕಗ್ಗೋಡ ಸರಕಾರಿ ಪ್ರೌಢಶಾಲೆ, ಮಧ್ಯಾಹ್ನ 2-30ಕ್ಕೆ ಕಗ್ಗೋಡ ಸರಕಾರಿ ಪದವಿಪೂರ್ವ ಕಾಲೇಜ್, ಜನವರಿ 26 ರಂದು ಬೆಳಿಗ್ಗೆ 10-30ಕ್ಕೆ ಹೊನ್ನುಟಗಿಯ ಸರಕಾರಿ ಪ್ರೌಢಶಾಲೆ, ಮಧ್ಯಾಹ್ನ 2-30ಕ್ಕೆ ಹೊನ್ನುಟಗಿ ಸರಕಾರಿ ಪ.ಪೂ.ಕಾಲೇಜ್, ಈ ಸಂದರ್ಭದಲ್ಲಿ ಬಾಪೂಜಿ ಸ್ಕೂಲ್ನ ಅಧ್ಯಕ್ಷರು. ಶ್ರೀಶೈಲಗೌಢ ಬಿರಾದಾರ, ಕೆ.ಎಂ.ಎಫ್.ನ ನಿದರ್ೇಶಕರು ಡಿ.ಎಸ್. ಅಲಗೊಂಡ, ಜಿಲ್ಲಾ ಸಂಚಾಲಕ ಮೌನೇಶ್. ಗ್ರಾಮ ಪಂಚಾಯಿತಿ ಸದಸ್ಯೆ ಶಿವಲೀಲಾ ಜಂಗಮ ಶಟ್ಟಿ, ಕಲಾ ತಂಡದ ನಾಯಕ ಗಣೇಶ್ ಎಂ. ಶಾಲಾ ಮಕ್ಕಳು ಶಿಕ್ಷಕ ವೃಂದದವರು ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.