ಲೋಕದರ್ಶನ ವರದಿ
ಬೆಳಗಾವಿ 03:ದಿ. 03ರಂದು ವಿಶ್ವ ಅಂಗವಿಕಲ ದಿನಾಚರಣೆಯು ಡಿಸೆಂಬರ್ 3 ರಂದು ಜಗತ್ತಿನಾದ್ಯಂತ ಆಚರಿಸಲಾಗುತ್ತಿದ್ದು, ಅದರ ಅಂಗವಾಗಿ ಇಂದು ಬೆಳಗಾವಿಯ ಜೆ.ಎನ್.ಎಮ್.ಸಿ ಕ್ರೀಡಾ ಆವರಣದಲ್ಲಿ ಬೆಳಗಾವಿ ಜಿಲ್ಲಾ ಆಡಳಿತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಅಂಗವಿಕಲ ಕಲ್ಯಾಣ ಇಲಾಖೆ ಹಾಗೂ ಇನ್ನಿತರ ಸ್ವಯಂ ಸೇವಾ ಸಂಘಟನೆಗಳಿಂದ ದಿವ್ಯಾಂಗ ಮಕ್ಕಳಿಗಾಗಿ ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು.
ಈ ಕ್ರೀಡಾಕೂಟದ ಉದ್ಘಾಟನೆ ಯನ್ನು ದ್ವಜಾರೋಹಣ ನೇರವೇರಿಸಿ, ಕ್ರೀಡಾಜ್ಯೋತಿಯನ್ನು ಹಸ್ತಾಂತರಿಸಿ ವಿವಿಧ ಬಣ್ಣಗಳ ಬಲೂನಗಳನ್ನು ಹಾರಿಸುವ ಮೂಲಕ ಮತ್ತು ಸಾಂಕೇತವಾಗಿ ಶಾಟಪುಟ್ ಎಸೆಯುವುದರ ಮೂಲಕ ಶಾಸಕ ಅನಿಲ ಬೆನಕೆ ಈ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕರು ಮಾತನಾಡಿ ಅಂಗವಿಕಲ ಮಕ್ಕಳು ವಿಶೇಷ ಅಲ್ಲ ಅತೀ ವಿಶೇಷರಾಗಿದ್ದು, ಆದ್ದರಿಂದ ನಮ್ಮ ನೆಚ್ಚಿನ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿರವರು ನೀವು ಅಂಗವಿಕಲರು ಅಲ್ಲ ದೇವರ ಒಂದು ಅಂಗ ಹೀಗಾಗಿ ನಿಮಗೆ ದಿವ್ಯಾಂಗ ಅಂತಾ ಕರೆಯಬೇಕೆಂದು ಸೂಚನೆ ನೀಡಿದರು. ಅದೇ ರೀತಿ ನಾನು ಕೂಡಾ ನಿಮಗೆ ದಿವ್ಯಾಂಗ ಎನ್ನಬೇಕು ಎಂದು ಎಲ್ಲ ಅಧಿಕಾರಿಗಳಿಗೆ ಹಾಗೂ ಸಾರ್ವಜನಿಕರಲ್ಲಿ ವಿನಂತಿಸಿದರು. ಈ ಸಂದರ್ಭದಲ್ಲಿ ಶಾಸಕ ಅನಿಲ ಬೆನಕೆರವರು ಈ ಮಕ್ಕಳಿನ ಏಳಿಗೆಗಾಗಿ ನನ್ನಿಂದಾಗಲಿ ಅಥವಾ ನಮ್ಮ ಸಕರ್ಾರದಿಂದಾಗಲಿ ಎಲ್ಲ ರೀತಿಯ ಸಹಕಾರವನ್ನು ನೀಡುವ ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಶಾಸಕರೊಂದಿಗೆ ಮಹಾನಗರ ಪಾಲಿಕೆ ಆಯುಕ್ತರಾದ ಕೆ.ಎಚ್. ಜಗದೀಶ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಂಟಿ ನಿರ್ದೇ ಶಕರು, ವಿವಿಧ ಶಾಲೆಗಳ ಪ್ರಚಾರ್ಯರು, ಶಿಕ್ಷಕ ವೃಂದ, ಸಾರ್ವಜನಿಕರು ಹಾಗೂ ಮಕ್ಕಳು ಉಪಸ್ಥಿತರಿದ್ದರು.