ಲೋಕದರ್ಶನ ವರದಿ
ಚಿಕ್ಕೋಡಿ 10: ಅಭಿವೃದ್ಧಿ ವಿಷಯದಲ್ಲಿ ರಾಯಬಾಗ ಕ್ಷೇತ್ರ ಮುಂದಿದೆ. ರಾಯಬಾಗ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಚಿಕ್ಕೋಡಿ ತಾಲೂಕಿನ ಹಳ್ಳಿಗಳಲ್ಲಿ ಸಾಕಷ್ಟು ಅಭಿವೃದ್ಧಿ ಕೈಗೆತ್ತಿಕೊಳ್ಳಲಾಗಿದೆ. ಕಬ್ಬೂರ, ನಾಗರಮುನ್ನೋಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ 2 ಕೋಟಿ ಮಂಜೂರಾಗಿದೆ ಎಂದು ಶಾಸಕ ದುಯರ್ೋಧನ ಐಹೊಳೆ ಹೇಳಿದರು.
ಶುಕ್ರವಾರ ತಾಲೂಕಿನ ಕಬ್ಬೂರ, ನಾಗರಮುನ್ನೋಳ್ಳಿ ಗ್ರಾಮದ ವಿವಿಧ ಅಭಿವೃದ್ಧಿ ಕಾಮಗಾರಿ ನೇರವೇರಿಸಿ ಮಾತನಾಡಿದ ಅವರು, ಕಬ್ಬೂರ ಪಟ್ಟಣದಿಂದ ಜಾಗನೂರ ರಸ್ತೆ ಡಾಂಬರೀಕರಣಕ್ಕೆ 60 ಲಕ್ಷ ರೂ, ಕಬ್ಬೂರ ಪಟ್ಟಣದ ಕೆರಲಕೋಡಿ ತೋಟಪಟ್ಟಿ ಪ್ರದೇಶದಲ್ಲಿ ರಸ್ತೆ ನಿಮರ್ಾಣಕ್ಕೆ 40 ಲಕ್ಷ ರೂ, ಚಿಮ್ಮಡ ತೋಟದ ಶಾಲೆಗಳ ಕೊಠಡಿ ನಿಮರ್ಾಣಕ್ಕೆ 11 ಲಕ್ಷ ರೂ, ನಾಗರಮುನ್ನೋಳ್ಳಿ ಬೆಳಗಲಿ ಗ್ರಾಮ ವ್ಯಾಪ್ತಿಯ ಪರಿಶಿಷ್ಟ ಜಾತಿ ಕಾಲೋನಿಗಳಲ್ಲಿ ಪೇವರ ನಿಮರ್ಾಣಕ್ಕೆ 27 ಲಕ್ಷ ರೂ, ಕಲ್ಮಾಡ ತೋಟದ ಶಾಲಾ ಕೊಠಡಿ ನಿಮರ್ಾಣಕ್ಕೆ 11 ಲಕ್ಷ ರೂ ಮಂಜೂರಾಗಿದೆ ಎಂದರು.
ಕ್ಷೇತ್ರದ ಜನರ ಆಶೋತ್ತರಗಳಿಗೆ ಸ್ಪಂಧಿಸುವ ಮೂಲಕ ಲಾಕಡೌನ್ ದಲ್ಲಿ ನೆನೆಗುದಿಗೆ ಬಿದ್ದಿರುವ ಕಾಮಗಾರಿಗೆ ಈಗ ಚಾಲನೆ ನೀಡಲಾಗುತ್ತದೆ. ಬರುವ ಒಂದು ತಿಂಗಳ ಒಳಗಾಗಿ ಹದಗೆಟ್ಟಿರುವ ಎಲ್ಲ ರಸ್ತೆಗಳನ್ನು ದುರಸ್ಥೆಗೊಳಿಸಲಾಗುತ್ತದೆ ಎಂದರು.
ದೇಶ ಹಾಗೂ ರಾಜ್ಯದ ವಿವಿಧ ಜಿಲ್ಲೆಯಲ್ಲಿ ಕೊರೊನಾ ರೋಗ ಹೆಚ್ಚಾಗುತ್ತಿದೆ. ಹೀಗಾಗಿ ರಾಯಬಾಗ ಕ್ಷೇತ್ರದ ಜನರು ಸುರಕ್ಷಿತವಾಗಿ ಜೀವನ ನಡೆಸುವ ಮೂಲಕ ರೋಗ ಬರದಂತೆ ಮುಂಜಾಗೃತ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ದುಯರ್ೋಧನ ಐಹೊಳೆ ಹೇಳಿದರು.
ಜಿಲ್ಲೆಯ ವಿವಿಧ ಕಡೆಗಳಲ್ಲಿ ಮಾರಕ ರೋಗ ಕೊರೊನಾ ಹರಡಿಕೊಂಡಿದ್ದು, ಕ್ಷೇತ್ರದ ಜನರು ಸಾಮಾಜಿಕ ಅಂತರ ಕಾಯ್ದುಕೊಂಡು ಜನರಿದ್ದ ಕಡೆಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸವಚ್ಚವಾಗಿ ಕೈತೊಳೆದುಕೊಂಡು ರೋಗ ಬರದಂತೆ ನೋಡಿಕೊಳ್ಳಬೇಕು ಎಂದು ಶಾಸಕ ಐಹೊಳೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ದುರೀಣ ಸುರೇಶ ಬೆಲ್ಲದ, ನ್ಯಾಯವಾದಿ ವಿರೂಪಾಕ್ಷಿ ಈಟಿ, ದಾನಪ್ಪ ಕೊಟಬಾಗಿ, ನಿಜಾಮ ಪೇಂಡಾರಿ, ಡಾ, ರುಣ ಮರ್ಯಾಯಿ, ಮಹಾದೇವ ಚೌಗಲಾ, ಮಹಾದೇವ ಜಿವಣಿ, ಲಕ್ಷ್ಮಣ ಹುದ್ದಾರ ಮುಂತಾದವರು ಇದ್ದರು.