ಶಾಲೆಯ ಕಂಪೌಂಡ ಕಾಮಗಾರಿಗೆ ಚಾಲನೆ

ಲೋಕದರ್ಶನ ವರದಿ

ಮುಗಳಖೋಡ:  ಪಟ್ಟಣದ ವಾರ್ಡ ನಂ 16ರಲ್ಲಿ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ದಾಸರತೋಟದ ಶಾಲೆಯ ಕಂಪೌಂಡ ಕಾಮಗಾರಿಗಾಗಿ ಪುರಸಭೆ 2018-19ರ ಸಾಲಿನ ಎಸ್.ಇ.ಪಿ-ಟಿ,ಎಸ್,ಪಿ ಯೋಜನೆಯ ಅಡಿಯಲ್ಲಿ 28.91 ಲಕ್ಷ ರೂ.ಗಳ ಕಾಮಗಾರಿಗೆ ಪುರಸಭೆಯ ಅಧ್ಯಕ್ಷ ಮಾಂತೇಶ ಗೋಳಸಂಗಿ ಇವರು ಕಾಮಗಾರಿಗೆ ಚಾಲನೆ ನೀಡಿದರು.

               ಈ ಸಂದರ್ಭದಲ್ಲಿ ಪುರಸಭೆಯ ಮುಖ್ಯಾಧಿಕಾರಿ ಮಹಾವೀರ ಬೋರಣ್ಣವರ ಹೊಸದಾಗಿ ಆದ 2018-2019 ರ ಸಾಲಿನ ಪುರಸಭೆಗೆ ಅತೀ ಹೆಚ್ಚು ಅನುದಾನ 14 ನೇ ಹಣಕಾಸು ಎಸ್.ಎಫ್.ಸಿ ಯೋಜನೆಯ ವಿವಿಧ ಕಾಮಗಾರಿಗಳಿಗಾಗಿ ಒಟ್ಟು 577.91 ಲಕ್ಷ ರೂ.ಗಳು ಮಂಜುರಾಗಿವೆ ಎಂದು ತಿಳಿಸಿದರು. 

                 ಈ ಸಂದರ್ಭದಲ್ಲಿ ಶಾಸಕ ಪಿ.ರಾಜು ಹಾಗೂ ಎಸ್.ಡಿ.ಎಮ್.ಸಿ ಅಧ್ಯಕ್ಷ ಸತ್ಪಾಲ ಗೋಳಸಂಗಿ, ಪುರಸಭೆ ಸದಸ್ಯ ಗೌಡಪ್ಪ  ಖೇತಗೌಡರ, ಭೂ-ದಾನಿ ಪಾರಿಸ್ ಹಿಪ್ಪರಗಿ (ಅಂಭೋಜಿ) ರಾಮು ಹುಲ್ಲೋಳಿ, ಗಂಗಪ್ಪ ಗೋಳಸಂಗಿ, ಸಂಜು ಬಾಬಣ್ಣವರ, ಅನ್ನಪೂಣರ್ಾ ಎರಡತ್ತಿ, ಮಲ್ಲಯ್ಯ ಮಠಪತಿ, ತಮ್ಮಣ್ಣ ಗೋಳಸಂಗಿ, ಶ್ರೀಮಂತ ಶಿರಹಟ್ಟಿ, ಮಾಂತೇಶ ಎರಡತ್ತಿ, ಶಿವಚಂದ್ರ ತುಳಸಿಗೇರಿ, ಗುಳಪ್ಪ ಉಗಾರ, ಬಿ.ವಾಯ್.ಜಾಗನೂರ, ಶಿವು ಗೋಲಭಾಂವಿ, ಪುರಸಭೆಯ ಸಹಾಯಕ ಅಭಿಯಂತರರು ಎಸ್.ಆರ್. ಚೌಗಲಾ, ಕೆಂಚಪ್ಪ ಹಳಿಂಗಳಿ, ಗುತ್ತಿಗೆದಾರ ಕುಮಾರ ಶೇಡಶಾಳ ಮುಂತಾದವರು ಉಪಸ್ಥಿತರಿದ್ದರು.