ಲೋಕದರ್ಶನ ವರದಿ
ರಾಯಬಾಗ 17: ಗ್ರಾಮೀಣ ಭಾಗದ ಎಲ್ಲ ರಸ್ತೆಗಳನ್ನು ಡಾಂಬರೀಕರಣಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುತ್ತಿದೆ. ಎಲ್ಲ ಗ್ರಾಮಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಕ್ಷೇತ್ರವನ್ನು ಅಭಿವೃದ್ಧಿ ಮಾಡಲಾಗುವುದು ಎಂದು ಶಾಸಕ ಡಿ.ಎಮ್.ಐಹೊಳೆ ಹೇಳಿದರು.
ಮಂಗಳವಾರ ತಾಲೂಕಿನ ಮಾವಿನಹೊಂಡ ಗ್ರಾಮದಲ್ಲಿ ಜಿಲ್ಲಾ ಪಂಚಾಯತ ಇಲಾಖೆ ವಿಶೇಷ ಅನುದಾನದಲ್ಲಿ ಮಂಜೂರಾದ 20 ಲಕ್ಷರೂ. ವೆಚ್ಚದಲ್ಲಿ ಮಾವಿನಹೊಂಡದಿಂದ ನಡಹಟ್ಟಿತೋಟದ ವರೆಗೆ ಒಂದು ಕಿ.ಮೀ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಜಿ.ಪಂ.ಸದಸ್ಯ ನಿಂಗಪ್ಪ ಪಕಾಂಡಿ, ನ್ಯಾಯವಾದಿ ವಸಂತ ಪೂಜಾರಿ, ಜಿ.ಪಂ.ಅಧಿಕಾರಿ ರಾಜೇಶ ಡಂಗ, ಸುರೇಶ ಚೌಗಲಾ, ಬೀರಪ್ಪ ಪಾಟೀಲ, ಕಲ್ಲಪ್ಪ ಕಗ್ಗುಡೆ, ರೇವಪ್ಪ ಪೂಜಾರಿ, ಮಹಾದೇವ ಲಕ್ಷ್ಮೇಶ್ವರ, ಸದಾಶಿವ ಹುಜ್ಯಾಂಗೋಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.