ಇಂದು ನೂತನ ಕಟ್ಟಡಗಳಿಗೆ ಚಾಲನೆ

ಲೋಕದರ್ಶನ ವರದಿ

ಬೆಟಗೇರಿ 27: ಸಮೀಪದ ಬಗರನಾಳ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ಕೆಎಮ್ಎಫ್ ಕಟ್ಟಡ, ಸಾಂಸ್ಕೃತಿಕ ಭವನ, ಬಾಬು ಜಗಜೀವನರಾಮ ಭವನ ಉದ್ಘಾಟನೆ ಮತ್ತು ಬಗರನಾಳ ಗ್ರಾಮದ ಸಾಧಕರ ಸತ್ಕಾರ, ಗುರುವಂದನಾ ಸಮಾರಂಭ ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ಆವರಣದಲ್ಲಿ ಶುಕ್ರವಾರ ಫೆ.28 ರಂದು ಮಧ್ಯಾಹ್ನ 2 ಗಂಟೆಗೆ ಜರುಗಲಿದೆ. ಗೋಕಾಕ ಶೂನ್ಯ ಸಂಪಾದನಮಠದ ಮುರುಘರಾಜೇಂದ್ರ ಸ್ವಾಮಿಜಿ ದಿವ್ಯ ಸಾನಿಧ್ಯ, ಸುಣಧೋಳಿ ಜಡಿಸಿದ್ಧೇಶ್ವರ ಮಠದ ಅಭಿನವ ಶಿವಾನಂದ ಸ್ವಾಮಿಜಿ, ಗದಗ ತಿರುಂಜಿ ಕ್ಷೇತ್ರದ ಆಧ್ಯಾತ್ಮಿಕ ಪ್ರವಚನಕಾರ ಬಸವ ಸಮರ್ಥ ಸ್ವಾಮಿಜಿ ಸಾನಿಧ್ಯ, ಬೆಂಗಳೂರು ಕೆಎಮ್ಎಫ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ಅಧ್ಯಕ್ಷತೆ ವಹಿಸಲಿದ್ದಾರೆ. 

      ಕೇಂದ್ರ ರೈಲ್ವೆ ರಾಜ್ಯ ಸಚಿವ, ಸಂಸದ ಸುರೇಶ ಅಂಗಡಿ, ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ, ಶಿಕ್ಷಣಪ್ರೇಮಿ ರಾಮಪ್ಪ ತಳವಾರ, ಗೋಸಬಾಳ ಗ್ರಾಪಂ ಅಧ್ಯಕ್ಷ ಶಿವಲಿಂಗಪ್ಪ ಬಳಿಗಾರ ಉದ್ಘಾಟಕರಾಗಿ, ಧಾರವಾಡ ಕೃಷಿ ವಿಶ್ವವಿದ್ಯಾಲಯ ವ್ಯವಸ್ಥಾಪನಾ ಮಂಡಳಿ ನಿರ್ದೇಶಕ ಡಾ.ರಾಜೇಂದ್ರ ಸಣ್ಣಕ್ಕಿ, ಮೆಳವಂಕಿ ಜಿಪಂ ಸದಸ್ಯೆ ಶಶಿಕಲಾ ಸಣ್ಣಕ್ಕಿ, ಬೆಳಗಾವಿ ಜಿಪಂ ಮಾಜಿ ಅಧ್ಯಕ್ಷ ಈರಣ್ಣ ಕಡಾಡಿ, ಕೆಮ್ಮನಕೋಲ ತಾಪಂ ಸದಸ್ಯೆ ನೀಲವ್ವ ಬಳಿಗಾರ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

     ಗೋಕಾಕ ತಾಲೂಕು ಸೇರಿದಂತೆ ಹಲವಡೆ ಕಾರ್ಯನಿರ್ವಹಿಸುತ್ತಿರುವ ವಿವಿಧ ಇಲಾಖೆ ಮೇಲಾಧಿಕಾರಿಗಳು, ಅಧಿಕಾರಿಗಳು, ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಗ್ರಾಮ ಪಂಚಾಯ್ತಿ ಮತ್ತು ವಿವಿಧ ಸಂಘ-ಸಂಸ್ಥೆಗಳ ಅಧ್ಯಕ್ಷರು, ಸದಸ್ಯರು, ಶಿಕ್ಷಣಪ್ರೇಮಿಗಳು, ಗಣ್ಯರು ಅತಿಥಿಗಳಾಗಿ, ಸತ್ಕಾರ ಮೂರ್ತಿಗಳಾಗಿ, ವಿಶೇಷ ಆಹ್ವಾನಿತರಾಗಿ ಸಮಾರಂಭಕ್ಕೆ ಆಗಮಿಸಲಿದ್ದಾರೆ ಎಂದು ಸಮಾರಂಭದ ಸಂಘಟಕ ಮತ್ತು ಆಯೋಜಕ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.