ಬಾಗಲಕೋಟೆ03: ನಟರಂಗ ಹಾಗೂ ಆನ್ಟೋಸ್ ಡಾನ್ಸ ಅಕಾಡೆಮಿ, ನಾಟ್ಯಮಯೂರಿ ನೃತ್ಯ ನಿಕೇತನ ಸಂಘ, ಸಿರಿ ಸಾಂಸ್ಕೃತಿಕ ಮತ್ತು ಮಹಿಳಾ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಮೂರು ದಿನಗಳ ಕಾಲ ನವನಗರದ ಡಾ.ಅಂಬೇಡ್ಕರ ಭವನದಲ್ಲಿ ಹಮ್ಮಿಕೊಂಡಿರುವ ಶಿವಮೊಗ್ಗ ರಂಗಾಯಣದ ರಂಗತೇರು ತಂಡದ ರಂಗೋತ್ಸವ ನಾಟಕ ಪ್ರದರ್ಶನಕ್ಕೆ ನಾಟಕಕಾರ ಎಚ್.ಎನ್.ಶೇಬಣ್ಣವರ ಚಾಲನೆ ನೀಡಿದರು.
ರಂಗೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಜಿಲ್ಲೆಯ ಕಲಾವಿದರಿಗಾಗಿ ನಿಮರ್ಾಣಗೊಂಡಿರುವುದು ಕಲಾ ಭವನ. ಆದರೆ, ಇಂದು ಬಡ ಕಲಾವಿದರು ಅದರ ಬಳಕೆಗೆ ಆಥರ್ಿಕ ಹೊರೆಯಾಗುತ್ತಿದೆ. ಕಲಾ ಭವನವನ್ನು ಕಲಾವಿದರಿಗೆ ಮೀಸಲಿಡಲು ಜಿಲ್ಲಾಡಳಿತ ಮುಂದಾಗಬೇಕು ಎಂದು ಯುವ ರಂಗಕಮರ್ಿ, ನಾಟಕಕಾರ ಎಚ್.ಎನ್. ಶೇಬಣ್ಣವರ ಒತ್ತಾಯಿಸಿದರು.
ಕಲಾವಿದರಿಗಾಗಿಯೇ ಇರುವ ಕಲಾ ಭವನದ ಬಾಡಿಗೆ, ನಿರ್ವಹಣೆಗಾಗಿ ಲಕ್ಷಾಂತರ ರೂ. ಖಚರ್ು ಮಾಡುವ ಪರಿಸ್ಥಿತಿ ಇದೆ. ಮೊದಲು ಯುಕೆಪಿ ಕಚೇರಿ ಅದೀನದಲ್ಲಿ ಇರುವ ಕಲಾ ಭವನವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಹಸ್ತಾಂತರಿಸಬೇಕು. ಕಲಾವಿದರಿಗೆ ರಿಯಾಯಿತಿ ದರದ ಶುಲ್ಕ ನಿಗದಿ ಮಾಡಬೇಕು. ಆಗ ಕಲಾ ಭವನ ನಿತ್ಯ ಬಳಕೆಯಾಗುವ ಜತೆಗೆ ಜಿಲ್ಲೆಯ ಕಲಾವಿದರಿಗೆ ನೆರವಾಗಲಿದೆ. ಎಂದು ಹೇಳಿದರು.
ತೋಟಗಾರಿಕೆ ವಿವಿಯ ಕುಲಪತಿ ಡಾ. ಕೆ.ಎಂ. ಇಂದಿರೇಶ ಮಾತನಾಡಿ, ಟಿವಿ, ದೃಶ್ಯ ಮಾಧ್ಯಮಗಳಿಂದ ರಂಗಭೂಮಿಗೆ ಆದ್ಯತೆ ಕಡಿಮೆಯಾಗುತ್ತಿದೆ. ನಶಿಸಿ ಹೋಗುತ್ತಿರುವ ಈ ಕಲೆಯನ್ನು ಪ್ರತಿಯೊಬ್ಬರು ಉಳಿಸಿ, ಬೆಳೆಸಬೇಕಿದೆ. ಕಲೆಗೆ ಹೆಚ್ಚು ಪ್ರೋತ್ಸಾಹ ನೀಡುವ ಪರಂಪರೆ ಮುಂದುವರೆಯಬೇಕು ಎಂದು ಹೇಳಿದರು.
ಇನ್ನರ್ವಿಲ್ ಕ್ಲಬ್ ಅಧ್ಯಕ್ಷೆ ಮೋಹಿನಿ ಗಾಂವಕರ ಮಾತನಾಡಿ, ವೃತ್ತಿ ರಂಗಭೂಮಿ ಕಲೆಯ ಬಗ್ಗೆ ಇಂದಿನ ಮಕ್ಕಳಿಗೆ ಮಾಹಿತಿ ಕೊಡುವ ಅಗತ್ಯವಿದೆ.
ಮೊಬೈಲ್ ಅತಿಯಾದ ಬಳಕೆಯಿಂದ ಚಿಕ್ಕ ಮಕ್ಕಳಿಂದ ಹಿರಿಯರ ವರೆಗೂ ಹಾಳಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಪತ್ರಕರ್ತ ಶ್ರೀಶೈಲ ಬಿರಾದಾರ ಮಾತನಾಡಿ, ವೃತ್ತಿ ರಂಗಭೂಮಿ ಕಲೆ ಜೀವಂತ ಕಲೆಯಾಗಿದೆ. ಮಿಕ್ಸ ಮಾಡಿ, ಡಬ್ ಮಾಡುವ ಕಲೆ ಇದಲ್ಲ. ಉದ್ಯೋಗಕ್ಕಾಗಿ ನಗರಕ್ಕೆ ಹೋಗುತ್ತದ್ದ ಪದವೀಧರರು, ಇಂದು ಹಳ್ಳಿಗೆ ಹೋಗಿ ಕೃಷಿ ಮಾಡುತ್ತಿದ್ದಾರೆ. ಹಾಗೆಯೇ ವೃತ್ತಿ ರಂಗಭೂಮಿ ಕಲೆಗೆ ಪುನಃ ತನ್ನ ಗತ ವೈಭವ ಬರಲಿದೆ ಎಂದರು.
ಬಾಗಲಕೋಟೆ ಜಿಲ್ಲೆ, ಕಲೆ, ಸಂಸ್ಕೃತಿ, ಪರಂಪರೆಯನ್ನು ತನ್ನ ಒಡಲಾಳದಲ್ಲಿ ಇಟ್ಟುಕೊಂಡಿದೆ. ನೀರಾವರಿ ಯೋಜನೆಗಾಗಿ ಲಕ್ಷಾಂತರ ಎಕರೆ ಭೂಮಿ ಕಳೆದುಕೊಂಡಿದ್ದಾರೆ. ಇಲ್ಲಿನ ಸಂತ್ರಸ್ತರ ಬದುಕು, ಬವಣೆ ನಾಟಕದ ಕಥಾ ವಸ್ತುಗಳಾಗಬೇಕಿದೆ.
ಆ ಮೂಲಕ ಸಂತ್ರಸ್ತರ ನೈಜ ಬದುಕು, ಸಮಾಜ ಹಾಗೂ ಸಕರ್ಾರಕ್ಕೆ ತಿಳಿಸುವ ಕೆಲಸ ನಾಟಕಗಳಿಂದಲೂ ನಡೆಯಲಿದೆ ಎಂದು ಹಾರೈಸಿದರು.
ತೋಟಗಾರಿಕೆ ವಿವಿಯ ಕುಲಸಚಿವ ಡಾ|ಟಿ.ಬಿ. ಅಳ್ಳೊಳ್ಳಿ, ಕಾರ್ಯಕ್ರಮದ ಸಂಘಟಕರಾದ ಶ್ರೀಕಾಂತ ಬಡಿಗೇರ, ಪ್ರಕಾಶ ರಾಠೋಡ, ಶಿಲ್ಪಾ ಯರಾಶಿ, ಜಯಶೀಲಾ ದೇಸಾಯಿಪಟ್ಟಿ ಮುಂತಾದವರು ಪಾಲ್ಗೊಂಡಿದ್ದರು. ಹಷರ್ಿತಾ, ಚಂದನ ಮತ್ತು ಪವನ ಪ್ರಾಥರ್ಿಸಿದರು.
ಶ್ರೀಕಾಂತ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪದ್ಮಾವತಿ ಬಂದಿಕೇರಿ ಕಾರ್ಯಕ್ರಮ ನಿರೂಪಿಸಿದರು. ಶಿಲ್ಪಾ ಯರಾಶಿ ವಂದಿಸಿದರು. ಮೊದಲ ದಿನ ಗೌಮರ್ೆಂಟ್ ಬ್ರಾಹ್ಮಣ ನಾಟಕ ಪ್ರದರ್ಶನಗೊಂಡಿತು.