ಲೋಕದರ್ಶನವರದಿ
ಬ್ಯಾಡಗಿ: ಭಾರತೀಯ ಕ್ರೀಡಾ ಪ್ರಾಧಿಕಾರದ (ಸಾಯ್) ಕ್ರೀಡಾ ಹಾಸ್ಟೆಲ್ಗಳಲ್ಲಿ ಕಬಡ್ಡಿ ತರಬೇತಿ ಕೇಂದ್ರಗಳನ್ನು ಸ್ಥಗಿತಗೊಳಿಸಲಾಗಿದೆ ಇದರಿಂದ ನಮ್ಮೆಲ್ಲರ ಹೆಮ್ಮೆಯ ದೇಶಿಯ ಕ್ರೀಡೆ ಕಬಡ್ಡಿ ಹಿನ್ನೆಡೆಯಾಗಲಿದ್ದು ಕೇಂದ್ರದ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಸಂಸದ ಶಿವಕುಮಾರ ಉದಾಸಿಯವರನ್ನು ಭೇಟಿ ಮಾಡಿ ಹಾಸ್ಟೆಲ್ಗಳ ಮರುಸ್ಥಾಪನೆಗೆ ಒತ್ತಾಯಿಸುವುದಾಗಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಭರವಸೆ ನೀಡಿದರು.
ತಾಲೂಕಿನ ತಾಲೂಕಿನ ಶಿಡೇನೂರ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ ಸ್ವತಂತ್ರ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಪದವಿಪೂರ್ವ ಶಿಕ್ಷಣ ಇಲಾಖೆಯ ತಾಲೂಕ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತ ನಾಡಿದರು.
ಭಾರತೀಯ ಕ್ರೀಡಾ ಪ್ರಾಧಿಕಾರದ ಕ್ರೀಡಾ ಹಾಸ್ಟೆಲ್ ಪ್ರಯೋಜನ ಪಡೆದುಕೊಂಡ ಅದಷ್ಟೋ ಬಡ ಕುಟುಂಬದ ಹಿನ್ನೆಲೆ ಯುಳ್ಳ ಕ್ರೀಡಾಪಟುಗಳು ಇಂದು ತಮ್ಮ ಭವಿಷ್ಯವನ್ನು ರೂಪಿಸಿಕೊಂಡಿದ್ದಾರೆ, ಜಿಲ್ಲೆಯಲ್ಲಿಯೇ ಸುಮಾರು 141 ಆಟ ಗಾರರು ರಾಷ್ಟ್ರ ಮಟ್ಟದ ಸ್ಪಧರ್ೆಗಳಲ್ಲಿ ಪಾಲ್ಗೊಂಡಿದ್ದಲ್ಲದೇ ಸಕರ್ಾರಿ ಕೆಲಸವನ್ನು ಗಿಟ್ಟಿಸಿಕೊಂಡಿದ್ದಾರೆ ಆದರೆ ಇದ್ಯಾವು ದನ್ನೂ ಪರಿಗಣಿಸದಿರುವ ಭಾರತೀಯ ಕ್ರೀಡಾ ಪ್ರಾಧಿಕಾರ ಸಮೀಪದ ಧಾರವಾಡ ಮತ್ತು ಬೆಂಗಳೂರು ಕೇಂದ್ರಗಳೆರಡಲ್ಲೂ ಕಬಡ್ಡಿಯನ್ನು ಸ್ಥಗಿತಗೊಳಿದಿರುವುದು ವಿಪರ್ಯಾಸದ ಸಂಗತಿಯಾಗಿದ್ದು ಕೂಡಲೇ ಸಚಿವರು ಮತ್ತು ಸಂಸದರ ಮೇಲೆ ಒತ್ತಡ ತರುವುದಾಗಿ ತಿಳಿಸಿದರು.
ಕಬಡ್ಡಿಯಲ್ಲಿ ಡಾಕ್ಟರೇಟ್: ಜಿಲ್ಲೆಯ ಇಬ್ಬರು ಮಹಿಳಾ ಕ್ರೀಡಾಪಟುಗಳು ಕಬಡ್ಡಿ ಮೇಲೆ ಡಾಕ್ಟರೇಟ್ ಪದವಿಯನ್ನು ಪಡೆದು ಕೊಂಡಿರುವುದು ಹಾವೇರಿ ಜಿಲ್ಲೆಯ ಹೆಮ್ಮೆಯ ವಿಷಯ, ಅಂತೆಯೇ ಇಲ್ಲಿಂದಲೇ 80ಕ್ಕೂ ಹೆಚ್ಚು ಕ್ರೀಡಾಪಟುಗಳು ಸಾಯ್ ಹಾಸ್ಟೆಲ್ನಲ್ಲಿ ತರಬೇತಿ ಪಡೆದು ಪ್ರೋಕಬಡ್ಡಿಯಂತಹ ಕಠಿಣ ಸ್ಪಧರ್ೆಗಳಲ್ಲಿ ತರಬೇತುದಾರರಾಗಿ ಕೆಲಸ ನಿರ್ವಹಿಸಿ ಯಶಸ್ವಿ ಯಾಗಿದ್ದಾರೆ ಇದ್ಯಾವುದನ್ನೂ ಪರಿಗಣಿಸದಿರುವ ಭಾರತೀಯ ಕ್ರೀಡಾ ಪ್ರಾಧಿಕಾರ ಏಕಾಏಕಿ ಹಾಸ್ಟೆಲ್ನಲ್ಲಿ ಕಬಡ್ಡಿ ತರಬೇತಿ ಕೇಂದ್ರ ಸ್ಥಗಿತಗೊಳಿಸಿರುವುದು ಗ್ರಾಮೀಣ ಪ್ರತಿಭೆಗಳಿಗೆ ಬಹುದೊಡ್ಡ ಹೊಡೆತವನ್ನು ನೀಡಿದೆ ಎಂದರು.
ಅಲ್ಲಿ ಕೋಟಿಗೊಬ್ಬ ಇಲ್ಲಿ ಮನೆಗೊಬ್ಬ: ಹಾವೇರಿ ಶಾಸಕ ನೆಹರು ಓಲೇಕಾರ ಮಾತನಾಡಿ, ಕಬಡ್ಡಿ ಅಪ್ಪಟ ಗ್ರಾಮೀಣ ಕ್ರೀಡೆಯಾಗಿದ್ದು ಕಬಡ್ಡಿ ಆಡುವ ಕ್ರೀಡಾಪಟುಗಳು ಮನೆಗೊಬ್ಬರು ಸಿಗಲಿದ್ದಾರೆ ಆದರೆ ಕೇಂದ್ರ ಕ್ರೀಡಾ ಸಚಿವಾಲಯ ಸದರಿ ಕಬಡ್ಡಿ ಓಲಂಪಿಕ್ಗೆ ಸೇರ್ಪಡೆಯಾಗಿಲ್ಲ ಎಂಬ ನೆಪವನ್ನು ಮುಂದಿಟ್ಟುಕೊಂಡು ಕಳೆದ ಸುಮಾರು 10 ವರ್ಷಗಳಿಂದ ಇಲಾಖೆಗೆ ಕಬಡ್ಡಿ ತರಬೇರುದಾರರನ್ನು ನೇಮಕ ಮಾಡಿಕೊಂ ಡಿಲ್ಲ, ಆದರೆ ಒಲಂಪಿಕ್ ಸೇರ್ಪಡೆಯಾಗಿರುವ ಟೆನ್ನಿಸ್, ಬ್ಯಾಡ್ಮಿಂಟನ್, ಟ್ವೆಕೊಂಡೋ, ಜಿಮ್ನಾಷ್ಟಿಕ್ ಇನ್ನಿತರ ಕ್ರೀಡೆಗಳನ್ನು ಅಡುವವವರು ನಮ್ಮಲ್ಲಿ ಕೋಟಿಗೊಬ್ಬರು ಸಿಗುತ್ತಾರೆ ಇಂತಹ ಕ್ರೀಡೆಗಳನ್ನು ಉತ್ತೇಜಿಸಲು ಕೇಂದ್ರ ಸಕರ್ಾರ ಕೋಟಿಗಟ್ಟಲೇ ಹಣ ವ್ಯಯಿಸಲು ಹೊರಟಿರುವುದು ಹಾಸ್ಯಾಸ್ಪದ ಸಂಗತಿ ನಾನೂ ಸಹ ಈ ಕುರಿತು ಕೇಂದ್ರದ ಸಚಿವರು ಹಾಗೂ ಸಂಸದರನ್ನು ಎಚ್ಚರಿಸುವ ಮೂಲಕ ಗ್ರಾಮೀಣ ಪ್ರತಿಭೆ ಗಳಿಗೆ ಅನುಕೂಲ ಕಲ್ಪಿಸುವ ಭರವಸೆ ನೀಡಿದರು.
ವೇದಿಕೆಯಲ್ಲಿ ತಾಪಂ ಅಧ್ಯಕ್ಷೆ ಸವಿತಾ ಸುತ್ತಕೋಟಿ, ದೇವರಾಜ ಓಲೇಕಾರ, ಮಂಜುನಾಥ ಓಲೇಕಾರ, ಸುರೇಶ ಯತ್ನಳ್ಳಿ, ಚನ್ನವೀರಗೌಡ ಬುಡ್ಡನಗೌಡ್ರ, ಪ್ರಾಚಾರ್ಯ ರಾಮಪ್ಪ, ನಿವೃತ್ತ ಪ್ರಾಚಾರ್ಯ ಲಿಂಗಯ್ಯ ಹಿರೇಮಠ, ಉಪನ್ಯಾಸಕರಾದ ತಿಪ್ಪಣ್ಣ, ಬಿ.ಆರ್.ಕಡೇಮನಿ, ಎಸ್.ಎನ್.ಕಬ್ಬೂರ, ಎಲ್.ಎಸ್. ನಾಯಕ್, ಶಿವಾನಂದ ಬೆನ್ನೂರ, ತರಬೇತುದಾರಳಾದ ಮಂಜುಳ ಭಜಂತ್ರಿ (ಬಣಕಾರ) ಹಾಗೂ ಇನ್ನಿತರರು ಉಪಸ್ಥಿತರಿದ್ದರು