ಉಭಯ ಶ್ರೀಗಳಿಂದ ರಥೋತ್ಸವಕ್ಕೆ ಚಾಲನೆ
ಲೋಕದರ್ಶನ ವರದಿ
ಶಿಗ್ಗಾವಿ 28 :ಪಟ್ಟಣದ ಹೊಸಪೇಟಿ ಈಶ್ವರ ದೇವಸ್ಥಾನ ಮಹಾ ರಥೋತ್ಸವ ಕಾರ್ಯಕ್ರಮಕ್ಕೆ ವಿರಕ್ತಮಠದ ಸಂಗನಬಸವ ಶ್ರೀಗಳು ಹಾಗೂ ಗಂಜೀಗಟ್ಟಿಡಾ. ವೈಜನಾಥ ಶಿವಾಚಾರ್ಯ ಶ್ರೀಗಳು ಚಾಲನೆ ನೀಡಿದರು. ನಂತರ ಸಂಗನಬಸವ ಶ್ರೀಗಳು ಆರ್ಶಿವದಿಸಿ ಮಾತನಾಡಿದ ಇಂತಹ ರಥೋತ್ಸವ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಿರುವ ಕಾರಣ ಇನ್ನೂ ನಮ್ಮ ಸಂಸ್ಕೃತಿ ಜೀವಂತವಾಗಿದೆ ಅಲ್ಲದೇ ಏಕತೆಯ ಸಾಮರಸ್ಯವನ್ನು ಬೆಳೆಸುತ್ತಿದೆ ಮತ್ತು ಸಕಾಲಕ್ಕೆ ಮಳೆ, ಬೆಳೆ ಚೆನ್ನಾಗಿ ಬರುತ್ತಿದೆಎಂದರು.
ವೀರಭದ್ರೇಶ್ವರ ಪುರವಂತರ ಮೇಳ ಹಾಗೂ ಸುಮಂಗಲೆಯ ಕುಂಭ ಮೇಳದೊಂದಿಗೆ ವಿಜೃಂಭಣೆಯಿಂದ ರಥೋತ್ಸವ ನೆರವೇರಿತು. ಈ ಸಂದರ್ಭದಲ್ಲಿ ಸಮಿತಿ ಉಪಾಧ್ಯಕ್ಷ ಅಶೋಕ ಕುರ್ಸಾಪೂರ, ಕಾರ್ಯದರ್ಶಿ ಸದಾನಂದ ಹೊಸಮನಿ, ಮಹಾಂತೇಶ ಕಂಕಣವಾಡ, ಪುರಸಭೆಅಧ್ಯಕ್ಷ ಸಿದ್ದಾರ್ಥಗೌಡ ಪಾಟೀಲ, ಪುರಸಭೆ ಸದಸ್ಯರಾದ ಶ್ರೀಕಾಂತ ಬುಳ್ಳಕ್ಕನವರ, ದಯಾನಂದ ಅಕ್ಕಿ, ಮಂಜುನಾಥ ಬ್ಯಾಹಟ್ಟಿ, ಉಮೇಶ ಗೌಳಿ, ನಾಗರಾಜ ಸವದತ್ತಿ, ಸಿದ್ದು ಸ್ಥಾವರಮಠ, ಶಂಕರಗೌಡ್ರ ಪಾಟೀಲ, ಮಂಜುನಾಥಯಲಿಗಾರ, ಅಶೋಕ ಗಾಣಿಗೇರ,ಪ್ರತೀಕ ಕೊಳೆಕರ, ಸಂಜನಾರಾಯ್ಕರ, ರಾಯೇಶ್ವರರಾಯ್ಕರ, ನಾಗರಾಜರಾಯ್ಕರ, ಸೇರಿದಂತೆ ಪಟ್ಟಣದ ಸದ್ಬಕ್ತರು ಉಪಸ್ಥಿತರಿದ್ದರು.