-ಒಕ್ಕೂಟದ ನಿಧರ್ೆಶಕ ಅಪ್ಪಾಸಾಬ ಅವತಾಡೆ
ಅಥಣಿ 29: ನಂದಿನಿ ಹಾಲಿನ ಉತ್ಪನ್ನಗಳನ್ನು ಅಧಿಕೃತ ಮಾರಾಟಗಾರರು ಡಿ.24 ರಿಂದ ಜನೇವರಿ 2 ರವೆಗೆ ಶೇ.10 ರಿಯಾಯತಿ ದರದಲ್ಲಿ ನೀಡುತ್ತಿದ್ದಾರೆ. ಗ್ರಾಹಕರು ಅದರ ಸದುಪಯೋಗ ಪಡೆಯಬೇಕು.
ದೇಶದ ಬೆನ್ನೆಲು ಆಗಿರುವ ರೈತರ ಬಾಳು ಹಸನಾಗಬೇಕು ಮತ್ತು ಆಥರ್ಿಕವಾಗಿ ಸದೃಢ ಹೊಂದಬೇಕು ಎಂಬ ಉದ್ದೇಶದಿಂದ ಸರಕಾರ ಕೆ.ಎಂ.ಎಫ್ ಸಂಸ್ಥೆಯು ಈ ಯೋಜನೆಯನ್ನು ಜಾರಿಗೆ ತಂದಿದೆ ಎಂದು ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟದ ನಿಧರ್ೇಶಕ ಅಪ್ಪಾಸಾಬ ಅವತಾಡೆ ಹೇಳಿದರು.
ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟದ ನಂದಿನಿ ಮಳಿಗೆಯಲ್ಲಿ ನಂದಿನಿ ಸಿಹಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ರೈತರಿಂದ ಹಾಲು ಪಡೆದುಕೊಂಡು ಅನೇಕ ಹಾಲಿನ ಉತ್ಪನ್ನಗಳನ್ನು ಅತ್ಯಂತ ಕಡಿಮೆ ದರದಲ್ಲಿ ನಾಡಿನ ಜನತೆಗೆ ನೀಡಲಾಗುತ್ತಿದೆ. ಮತ್ತು ಪ್ರತಿದಿನ ರೈತರಿಂದ ಪಡೆದುಕೊಂಡ ಹಾಲನ್ನು ನಮ್ಮ ಸಂಸ್ಥೆಯಲ್ಲಿ ಸಂಸ್ಕರಿಸಿ ಯಾವುದೇ ರಾಸಾಯನಿಕ ಬಳಸದೇ ಪರಿಶುದ್ದ ಹಾಲಿನ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡಲಾಗುತ್ತಿದೆ. ನಂದಿನಿ ಮಳಿಗೆದಾರರು ಗ್ರಾಹಮಕರಿಗೆ ಉತ್ತಮ ಸೇವೆ ನೀಡುವ ಮೂಲಕ ಬರುವ ಲಾಭ ನೇರವಾಗಿ ಹೈನುಗಾರಿಕೆ ಮಾಡುವ ರೈತರಿಗೆ ದೊರೆಯಲಿದೆ ಎಂದು ತಿಳಿಸಿದರು.
ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟದ ಸಹಾಯಕ ವ್ಯವಸ್ಥಾಪಕ ಸಾಗರ ಪಾಟೀಲ ಮತ್ತು ಮಾರುಕಟ್ಟೆ ಅಧಿಕಾರಿ ಸಚೀನ ಜಿಲ್ಲೇದಾರ ಮಾತನಾಡುತ್ತಾ, ಗ್ರಾಹಕರಿಗೆ ಅನೂಕುಲವಾಗಲೆಂದು ಈ ಯೋಜನೆ ತರಲಾಗಿದ್ದು ಅಥಣಿ ತಾಲೂಕಿನ ಗ್ರಾಹಕರು ಇದರ ಸದುಪಯೋಗ ಪಡೆಯಬೇಕು ಎಂದು ಹೇಳಿದರು.
ಈ ವೇಳೆ ಉದ್ಯಮಿ ಮುರುಘೇಶ ಕುಮಠಳ್ಳಿ, ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಪ್ರಕಾಶಚಂದ್ರ ನರಟ್ಟಿ, ತಾಲೂಕಾ ವಿಸ್ತಣರ್ಾಧಿಕಾರಿ ಶಶಿಕಲಾ ಪಳಲಿ, ನಂದಿನಿ ಉತ್ಪನ್ನಗಳ ಮಾರಾಟಗಾರ ಶ್ರೀನಿವಾಸ ಪಟ್ಟಣ ಸೇರಿದಂತೆ ನಂದಿನಿ ಹಾಲು ಒಕ್ಕೂಟದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪಾಲುಗೊಂಡಿದ್ದರು.