ಮಾಯಕ್ಕಾದೇವಿ ಜಾತ್ರಾ ಮಹೋತ್ಸವಕ್ಕೆ ಚಾಲನೆ

ಲೋಕದರ್ಶನ ವರದಿ
ಶೇಡಬಾಳ 12: ಪ್ರತಿವರ್ಷದಂತೆ ಈ ವರ್ಷವು ಶೇಡಬಾಳ ಪಟ್ಟಣದ ಮಾಯಕ್ಕನಕೇರಿಯಲ್ಲಿ  ಮಾಯಕ್ಕಾದೇವಿ ಜಾತ್ರೆಯು ವಿಜೃಂಭಣೆಯಿಂದ ಶ್ರದ್ಧಾಭಕ್ತಿಯಿಂದ ಬುಧವಾರ ದಿ. 12 ರಂದು  ಜರುಗಿತು. ಗ್ರಾಮದ ಹಿರಿಯ ಮುಖಂಡರಾದ ತಾತ್ಯಾಸಾಬ ಪಾಟೀಲ(ಗೌಡರು), ವಿನೋದ ಪಾಟೀಲ, ಸುನೀಲ ಪಾಟೀಲ(ಗೌಡರು), ಅಣ್ಣಾಗೌಡ  ಪಾಟೀಲ ಮೊದಲಾದವರು ಮಾಯಕ್ಕ ದೇವಿಗೆ ಪೂಜೆ ಸಲ್ಲಿಸಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದರು. 
ಮುಂಜಾನೆ 9 ಗಂಟೆಗೆ ಗ್ರಾಮದ ಬೀರದೇವರ ಗುಡಿಯಿಂದ ಪಲ್ಲಕಿ ಉತ್ಸವ ಮೇರವಣಿಗೆ ಡೊಳ್ಳುವಾದನ ವಾದ್ಯ ವೈಭದೊಂದಿಗೆ ಮಾಯಕ್ಕನ ಗುಡಿಯ ವರೆಗೆ ಜರುಗಿತು. ಮೇರವಣಿಗೆಯಲ್ಲಿ  ಸುಮಂಗಲೆಯರು ಜಲಕುಂಭವನ್ನು ಹೊತ್ತು ಭಾಗವಹಿಸಿ ದೇವಿಗೆ ಜಲಾಭೀಷೇಕ ಮಾಡಿ ಉಡಿ ತುಂಬಿ ನೈವಧ್ಯ ಅರ್ಪಿಸಿದರು. ದೇವಿಯ ಪೂಜಾರಿ ಪೂಜಾಭೀಷೇಕ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿದರು. ಸುರೇಶ ಕುಸನಾಳೆ, ಮಹಾದೇವ ಕಟ್ಟಿಕರ, ಅಲ್ಲಪ್ಪಾ ವಾಗೂಲೆ ವರಿ ಓಲಗದ ಕಾರ್ಯಕ್ರಮ ನೆರವೇರಿಸಿದರು.  ಕಾರ್ಯಕ್ರಮದ ಅಂಗವಾಗಿ ಮಹಾಪ್ರಸಾದ, ಭಜನೆ, ಕೀರ್ತನೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. 
ಈ ಸಮಯದಲ್ಲಿ ಗ್ರಾಮದ ಹಿರಿಯ ಮುಖಂಡರಾದ ತಾತ್ಯಾಸಾಬ ಪಾಟೀಲ, ವಿನೋದ ಪಾಟೀಲ, ಸುನೀಲ ಪಾಟೀಲ, ಅಣ್ಣಾಗೌಡ  ಪಾಟೀಲ, ಪೃದ್ವಿನ ಪಾಟೀಲ, ಅಪ್ಪಾಸಾಬ ಮಾಳಿ, ಈರಪ್ಪಾ ನಂದಗಾವೆ ಪೂಜಾರಿ, ಮಹಾದೇವ ಕೆಂಪವಾಡೆ, ಅಶೋಕ ಕಣಗಲೆ, ಶಂಕರ ದಾಸರ, ಬಸಪ್ಪಾ ನಾಯಿಕ, ಶಂಕರ ಬಡಚಿ,ಹೊನ್ನಪ್ಪಾ ಗಾವಡೆ, ಬಾಳು ನರವಾಡೆ, ನಾಗು ಕಟ್ಟಿಕರ, ಕೃಷ್ಣಾ ಕಟ್ಟಿಕರ, ಸುರೇಶ ಪೂಜಾರಿ ಸೇರಿದಂತೆ ಎಲ್ಲ ದೇವಿ ಭಕ್ತರು, ರೈತ ವರ್ಗದವರು ಅಪಾರ ಸಂಖ್ಯೆಯಲ್ಲಿ ಇದ್ದರು.