ಮಾತೃವಂದನಾ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ

ಬಾಗಲಕೋಟೆ: ತಾಲೂಕಿನ ನವನಗರದ 20 ನೇ ಸೇಕ್ಟರ್ನಲ್ಲಿನ ಅಂಗನವಾಡಿ ಕೇಂದ್ರದಲ್ಲಿ ಮಾತೃವಂದನಾ ಸಪ್ತಾಹದ ಕಾರ್ಯಕ್ರಮಕ್ಕೆ ಶಿಶು ಅಭವೃದ್ಧಿ ಯೋಜನಾಧಿಕಾರಿಗಳಾದ ಹೇಮಾವತಿ ಎನ್ ಸೋಮವಾರ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು ಪ್ರಧಾನ ಮಂತ್ರಿ ಮಾತೃವಂಧನಾ ಯೋಜನೆಯು ಸಕರ್ಾರದ ಮಹತ್ವ ಪೂರ್ಣ ಯೋಜನೆಯಾಗಿದ್ದು ಗಭರ್ಿನಿಯರ ಆರೋಗ್ಯ ಮತ್ತು ಪೌಷ್ಠಿಕ ಮಟ್ಟ ಹೆಚ್ಚಿಸುವದು ಇದರ ಮುಖ್ಯ ಉದ್ದೇಶವಾಗಿದ್ದು ಅರ್ಹ ಫಲಾನುಭವಿಗಳು ಮೂರು ಕಂತುಗಲಲ್ಲಿ ಸಹಾಯಧನ ಮೊದಲನೇ ಹಂತದಲ್ಲಿ 1000 ರೂ ಎರಡನೇ ಹಂತದಲ್ಲಿ 2000 ರೂ ಮೂರನೆ ಹಂತದಲ್ಲಿ 5000 ರೂಗಲನ್ನು ಪಡೆದುಕೊಳ್ಳ ಬಹುದು. ಡಿಸೆಂಬರ್ 2 ರಿಂದ 8ರ ವರೆಗೆ ಈ ಸಪ್ತಾಹ ನಡೆಯಲಿದ್ದು, ಇದರ ಸದುಪಯೋಗವನ್ನು ಫಲಾನುಭವಿಗಳು ಪಡೆದುಕೊಳ್ಳಬೇಕು ಎಂದರು. 

 ಕಾರ್ಯಕ್ರಮದಲ್ಲಿ ಜೆ.ಬಿ ಬಿರಾದಾರ, ಆರ್.ಎಸ್. ಬೂದಿಹಾಳ, ನಾಜನಿಮ್ ಬೇಗಂ, ಎಸ್ ಬಿ. ಚನ್ನಿ ಉಪಸ್ಥಿತರಿದ್ದರು.