ಜುವೆಲ್ಸ್ ಆಫ್ ಇಂಡಿಯಾದಿಂದ ಆಭರಣ ಪ್ರದರ್ಶನ ಮತ್ತು ಚಿಲ್ಲರೆ ಮಾರಾಟ ಮೇಳಕ್ಕೆ ಚಾಲನೆ

ಬೆಂಗಳೂರು, ಜ 10: ಜುಮವೆಲ್ಸ್ ಆಫ್ ಇಂಡಿಯಾದಿಂದ ಮೂರು ದಿನಗಳ ಅತಿ ದೊಡ್ಡ ಆಭರಣ ಪ್ರದರ್ಶನ ಮತ್ತು ಚಿಲ್ಲರೆ ಮಾರಾಟ ಮೇಳ ರಾಮಮೂರ್ತಿ ನಗರದ ಲೋಟಸ್ ಕನ್ವೆನ್ಷನ್ ಸೆಂಟರ್ ನಲ್ಲಿ ಪ್ರಾರಂಭವಾಗಿದೆ.ಬೆಂಗಳೂರಿನ ಪ್ರಮುಖ 15 ಆಭರಣ ಮಾರಾಟಗಾರರು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದು, ಒಂದೇ ವೇದಿಕೆಯಲ್ಲಿ ಭಿನ್ನ, ವಿಭಿನ್ನ, ಆಧುನಿಕ, ಸಂಪ್ರದಾಯಿಕ, ದೇವಸ್ಥಾನಗಳ ಶೈಲಿಯ ಆಭರಣಗಳನ್ನು ನೋಡಲು, ಖರೀದಿಸಲು ಅತ್ಯುತ್ತಮ ವೇದಿಕೆ ಕಲ್ಪಿಸಲಾಗಿದೆ.  ಜುವೆಲ್ಸ್ ಆಫ್ ಇಂಡಿಯಾದ ರಾಯಭಾರಿಯಾಗಿರುವ ಪ್ರಣೀತ ಸುಭಾಷ್ ನೇತೃತ್ವದ ಮಾಡೆಲ್ ಗಳು ಇತ್ತೀಚಿನ ನವ ನವೀನ ವಿನ್ಯಾಸಗಳು, ಮಾರುಕಟ್ಟೆಯಲ್ಲಿ ಪ್ರಚಲಿತದಲ್ಲಿರುವ ಆಭರಣಗಳನ್ನು ತೊಟ್ಟು ಉದ್ಘಾಟನಾ ಸಮಾರಂಭಕ್ಕೆ ಮೆರಗು ತಂದರು.  ಕರ್ನಾಟಕ ಜುವೆಲರ್ಸ್ ಅಸೋಷಿಯೇಷನ್ ಅಧ್ಯಕ್ಷ ಹಾಗೂ ಶಾಸಕ ಡಾ. ಟಿ.ಎ. ಶರವಣ, ಚಿತ್ರನಟಿ ಹರ್ಷಿಕಾ ಪೊಣ್ಣಚ್ಚ ಮೇಳ ಉದ್ಘಾಟಿಸಿದರು.ಡಾ. ಟಿ.ಎ. ಶರವಣ ಮಾತನಾಡಿ, ಚಿನ್ನ ಖರೀದಿ ಮಾಡಿದರೆ ಭವಿಷ್ಯದಲ್ಲಿ ಇದು ನಮ್ಮ ಕೈ ಹಿಡಿಯಲಿದೆ. ಬಂಗಾರವನ್ನು ಆಸ್ತಿ ಎಂದು ಪರಿಗಣಿಸುವ ಕಾಲ ಇದಾಗಿದ್ದು, ಬರುವ ದಿನಗಳಲ್ಲಿ ಬಂಗಾರ ಬಲು ಭಾರವಾಗಲಿದೆ. ಈಗ ಕೂಡಿಟ್ಟಿರುವ ಹಣವನ್ನು ಚಿನ್ನದ ಮೇಲೆ ಹೂಡಿಕೆ ಮಾಡಿದರೆ ಅದು ಕಲ್ಪವೃಕ್ಷವಾಗುತ್ತದೆ. ಬಂಗಾರ ಖರೀದಿಸಿದವರ ಬದುಕು ಬಂಗಾರವಾಗುತ್ತದೆ ಎಂದರು.ಆಭರಣ ಪ್ರದರ್ಶನದ ಸಂಚಾಲಕ ಸಂದೀಪ್ ಬೇಕೆಲ್ ಮಾತನಾಡಿ, ಹೊಸ ವರ್ಷದಲ್ಲಿ ಇದು ಮೊದಲ ಆಭರಣ ಪ್ರದರ್ಶನವಾಗಿದ್ದು, ಸಂಕ್ರಾಂತಿಗೆ ಮುನ್ನ ನಡೆಯುತ್ತಿರುವುದು ವಿಶೇಷವಾಗಿದೆ. ಬೆಂಗಳೂರಿನ ಗ್ರಾಹಕರಿಗೆ ಚಿನ್ನ ಖರೀದಿಗೆ ಉತ್ತಮ ಅವಕಾಶವಾಗಿದೆ. ಎಲ್ಲೆಡೆ ಚಿನ್ನ ಖರೀದಿಗೆ ಉತ್ಸಾಹ ಕಂಡು ಬಂದಿದ್ದು, ಹೊಸ ವರ್ಷದಲ್ಲಿ ಚಿನ್ನವನ್ನು ಮನೆಗೆ ಕೊಂಡೊಯ್ಯಲು ಇದು ಸದಾವಕಾಶವಾಗಿದೆ ಎಂದರು.ಜುವೆಲ್ಸ್ ಆಫ್ ಇಂಡಿಯಾ ಭಾರತದ ಅತ್ಯಂತ ಪುರಾತನ, ಅತಿ ದೊಡ್ಡ ಮತ್ತು ಅತ್ಯುತ್ತಮ ಆಭರಣದ ಬ್ರ್ಯಾಂಡ್ ಆಗಿದೆ. ಈ ಪ್ರದರ್ಶನದಲ್ಲಿ ಆಭರಣ್, ಎಂ.ಪಿ. ಜುವೆಲ್ಸ್, ನಿಖ್ ಹಾರ್ ಜುವೆಲ್ಸ್ ಆಫ್ ಇಂಡಿಯಾ ಪ್ರವೈಟ್ ಲಿಮಿಟೆಡ್, ಶ್ರೀ ಗಣೇಶ್ ಡೈಮಂಡ್ಸ್ ಅಂಡ್ ಜುವೆಲರ್ಸ್, ಸಾಯಿ ಗೋಲ್ಡ್ ಪ್ಯಾಲೇಸ್, ಆರ್ಟ್ ಇಂಡಿಯಾ ಜುವೆಲ್ಸ್ ಅಂಡ್ ಕೊಕೊ ಇಂಟರ್ ನ್ಯಾಷನಲ್ ಸಂಸ್ಥೆಗಳು ಭಾಗಿಯಾಗಿವೆ.ಜುವೆಲ್ಸ್ ಆಫ್ ಇಂಡಿಯಾಗೆ 2016 ಮತ್ತು 17ರಲ್ಲಿ ಪ್ರತಿಷ್ಠಿತ ಟೈಮ್ಸ್ ರೀಟೈಲ್ ಐಕಾನ್, 2019ರಲ್ಲಿ ಚಿಲ್ಲರೆ ಆಭರಣ ಪ್ರದರ್ಶನ ವಲಯದಲ್ಲಿ ಟೈಮ್ಸ್ ಬ್ಯುಸಿನೆಸ್ ಅವಾರ್ಡ್ ದೊರೆತಿದೆ.ಪ್ರದರ್ಶನ ನಡೆಯುವ ಮೂರು ದಿನಗಳ ಕಾಲ ಲಕ್ಕಿ ಡಿಪ್ ಇದ್ದು, ಒಂದು ಲಕ್ಷ ರೂ ಮೌಲ್ಯದ ವಜ್ರದ ಓಲೆಯನ್ನು ಪ್ರತಿದಿನ ಉಡುಗೊರೆಯಾಗಿ ನೀಡಲಾಗುತ್ತಿದೆ. ಪ್ರದರ್ಶನಕ್ಕೆ ಆಗಮಿಸುವವರು ಲಕ್ಕಿ ಕೂಪನ್ ನಲ್ಲಿ ಹೆಸರು ಬರೆದು ಡಬ್ಬಿಯಲ್ಲಿ ಹಾಕಬೇಕಿದರೆ ಅದೃಷ್ಟಶಾಲಿಗಳಿಗೆ ಬಹುಮಾನ ದೊರೆಯಲಿದೆ.