ಇಟಗಿ ಉತ್ಸವ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ

ಲೋಕದರ್ಶನ ವರದಿ

ಕುಕನೂರು 21: ರಾಜ್ಯ ಸಕರ್ಾರ 'ಇಟಗಿ ಉತ್ಸವ' ಆಚರಿಸದೇ, ಖಾಸಗಿಯಾಗಿ 15ವರ್ಷಗಳ ಕಾಲ ನಿರಂತರ ಜಿಲ್ಲಾ ನಾಗರಿಕ ವೇದಿಕೆ ಮಾಡುತ್ತಾ ಬಂದಿದೆ. ಈ ಕಾರ್ಯ ಶ್ಲಾಘನೀಯ ಎಂದು ಸಾಹಿತಿ ಶಿವರಾಜ ಗುರಿಕಾರ ಹೇಳಿದರು. 

ತಾಲ್ಲೂಕಿನ ಇಟಗಿ ಗ್ರಾಮದದಲ್ಲಿ ಶನಿವಾರ ನಡೆದ 16ನೇ ಇಟಗಿ ಉತ್ಸವ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.  

ಇಟಗಿಯ ಮಹಾದೇವ ದೇವಾಲಯವನ್ನು ಕಲ್ಯಾಣ ಚಾಲುಕ್ಯರ ದೊರೆ 6ನೇ ವಿಕ್ರಮಾದಿತ್ಯನ ಮಹಾಮಂತ್ರಿಯಾಗಿದ್ದ ಇಟಗಿಯ ಮಹಾದೇವ ದಂಡನಾಯಕ ಮಹತ್ತರ ಯುದ್ಧ ಜಯಿಸಿದ ಪ್ರತೀಕವಾಗಿ ನಿಮರ್ಿಸಿದ್ದಾನೆ ಎಂದರು. ದೇಶದಲ್ಲೇ ಅತ್ಯದ್ಭುತ ಎನ್ನಲಾಗುವ ವಾಸ್ತುಶಿಲ್ಪ ಹೊಂದಿರುವುದರಿಂದ 'ದೇವಾಲಯಗಳ ಚಕ್ರವತರ್ಿ ಎಂದೂ ಈ ದೇವಸ್ಥಾನವನ್ನು ಕರೆಯುವುದುಂಟು. 900 ವರ್ಷದ ಇತಿಹಾಸವಿರುವ ಈ ದೇವಾಲಯದಲ್ಲಿ ಬಾದಾಮಿ ಚಾಲುಕ್ಯರ ಒರಟು ಮತ್ತು ಹೊಯ್ಸಳರ ಸೂಕ್ಷ್ಮ ಕೆತ್ತನೆಗಳು ಮೇಳೈಸಿವೆ ಎಂದೇ ಹೇಳಲಾಗುತ್ತದೆ. ಗರ್ಭಗುಡಿ, ಸುಕನಾಸಿ,  ನವರಂಗ ಮಂಟಪಗಳನ್ನು ಒಳಗೊಂಡಿರುವ ಈ ದೇವಾಲಯ ಪರಿಪೂರ್ಣ ದೇವಾಲಯ ಎಂದೇ ಬಿಂಬಿತವಾಗಿದೆ. ಈ ದೇವಾಲಯದ ಕುರಿತು ಗುಣಗಾನ ಮಾಡಿರುವ ಕಸೀನ್ಸ್ ಅವರು 'ಕನರ್ಾಟದಲ್ಲಿಯೇ ಇದೊಂದು ವಿಶಿಷ್ಟ ದೇವಾಲಯ' ಎಂದಿದ್ದಾರೆ. 

ನಾಗರಿಕ ವೇದಿಕೆಯ ರಾಜ್ಯಧ್ಯಕ್ಷ ಮಹೇಶ ಬಾಬು ಸುವರ್ೆ ಮಾತನಾಡಿ, ಈ ಇಟಗಿ ಉತ್ಸವ 5 ದೀನಗಳ ಕಾಲ ನೆಡೆಯತಿದ್ದು, ಕವಿ ಸಮ್ಮೇಳನ, ಮಕ್ಕಳ ಸಮ್ಮೇಳನ, ರೈತರ ಸಮ್ಮೇಳನ, ಜನಪದ ಜಾತ್ರೆ, ಸಾಂಸ್ಕೃತಿಕ ಪ್ರತಿಭೆಗಳ ಅನಾವರಣ, ಸಾಧಕರಿಗೆ ಸನ್ಮಾನ ಕಾರ್ಯಕ್ರಮಗಳು ಜರಗಲಿವೆ ಎಂದರು.   

ಹೈದ್ರಾಬಾದ್ ಕರ್ನಾಟಕ ಸಾಂಸ್ಕೃತಿಕ ಕಲಾ ಕೇಂದ್ರದ ವತಿಯಿಂದ ಸಮೂಹ ನೃತ್ಯ, ಕನರ್ಾಟಕ ಜಾಗೃತಿ ವೇದಿಕೆಯಿಂದ ಇಟಗಿ ಉತ್ಸವದ ಸ್ವಾಗತ ನೃತ್ಯ ಪ್ರದರ್ಶಸಿದರು. ಹೊಸಪೇಟಿಯ ಪ್ರತಿಭಾ ಕಲಾ ಕೇಂದ್ರ ಕಲಾ ತಂಡದಿಂದ ಭರತ ನಾಟ್ಯ ನೆರವೇರಿತು. ಸಂಗೀತ ಶಿಕ್ಷಕ ಕೊಟ್ರೇಶ, ಕಲಾವೀದರಾದ ನಂದೀನಿ, ಸಂಚಿತಾ, ಸುಮಾ, ದೃತಿ, ಚಂದನಾ, ನಮ್ರತಾ, ವರಣೀಕಾ ನೃತ್ಯ ಪ್ರದರ್ಶಸಿದರು. ಬೆಂಗಳೂರಿನ ರಾಷ್ಟ್ರೀಯ ಮಕ್ಕಳ ಪ್ರತೀಭಾ  ಕಲಾ ಕೇಂದ್ರ ತಂಡದಿಂದ ಭರತ ನಾಟ್ಯ ಪ್ರದರ್ಶನಗೊಂಡಿತು. 

ಶರಣಯ್ಯ ಇಟಗಿ, ಎಂ.ಬಿ ಅಳವುಂಡಿ, ಮಾಜಿ ಯೋಧ ಕಳಕಪ್ಪ, ಶರಣಪ್ಪ ದಾನಕೈ, ಹನುಮಪ್ಪ ಬಾರಕೇರ ಇದ್ದರು. ಕುಕನೂರು ತಾಲ್ಲೂಕಿನ ಇಟಗಿ ಗ್ರಾಮದಲ್ಲಿ ಶನಿವಾರ ಇಟಗಿ ಉತ್ಸವಕ್ಕೆ ಚಾಲನೆ ನೀಡಲಾಯಿತು.