ಧ್ವಜಾರೋಹಣದೊಂದಿಗೆ ಗವಿಸಿದ್ದೇಶ್ವರ ಜಾತ್ರೆಗೆ ಚಾಲನೆ

Drive to Gavisiddeshwar fair with flag hoisting

ಹೂವಿನಹಡಗಲಿ. 14: ಪಟ್ಟಣದ ಗವಿಸಿದ್ದೇಶ್ವರ ಮಠದ 30ನೇ ವರ್ಷದ ಜಾತ್ರಾ ಮಹೋತ್ಸವಕ್ಕೆ ಇಂದು ಮುಂಜಾನೆ ಷಟ್ ಸ್ಥಲ ಧ್ವಜಾರೋಹಣದೊಂದಿಗೆ ಜಾತ್ರೆಗೆ ಚಾಲನೆ ನೀಡಲಾಯಿತು.                   

ಕೊಟ್ರಮ್ಮ ತಂಬ್ರಳ್ಳಿ ಕೊಟ್ರ​‍್ಪ, ರತ್ನಮ್ಮ ಮುರುಗೇಶಪ್ಪ ವಾಲಿ ಶೆಟ್ಟರ್  ಧ್ವಜಾರೋಹಣ ನೆರವೇರಿಸಿದರು. ಸಾನ್ನಿಧ್ಯವನ್ನು  ವಹಿಸಿ ಮಾತನಾಡಿದ ಮಲ್ಲನಕೇರೆ ಮಠದ ಅಭಿನವ ಚನ್ನಬಸವ ಮಹಾಸ್ವಾಮಿಗಳು ಜಾತ್ರೆಯಲ್ಲಿ ಜಾತಿ, ವರ್ಗ  ಭೇದವಿಲ್ಲದೆ ಜನರು ಒಂದೆಡೆ ಸೇರಿ ಸಂಭ್ರಮಿಸುವ ಪರಿಯೇ ಅನನ್ಯ. ಅಧ್ಯಕ್ಷತೆ ಗವಿಸಿದ್ದೇಶ್ವರ ಮಠದ ಪೀಠಾಧಿಪತಿಗಳಾದ ಡಾ ಹಿರಿ ಶಾಂತವೀರ ಮಹಾಸ್ವಾಮಿಗಳು ವಹಿಸಿದ್ದರು.  

ಈ ಸಂದರ್ಭದಲ್ಲಿ  ವೀರಶೈವ ಲಿಂಗಾಯತ ಸಮಾಜದ ನಗರದ ಘಟಕದ ಅಧ್ಯಕ್ಷ ಮುಂಡವಾಡ ಉಮೇಶ, ಪುರಸಭೆ ಸದಸ್ಯರಾದ ಎಂ.ಜಿ.ವೀರೇಶ. ಶ್ರೀಮತಿ ಲೀಲಾ ಅಟವಾಳಗಿ, ಕೆ ಹನುಮಂತು ಸೇರಿದಂತೆ ಇತರರಿದ್ದರು. ಶರಣೆ ನಿಂಬಕ್ಕ ಅಮ್ಮನವರು ಇದ್ದರು.