ದುರ್ಗಾ ಮಾತಾ ದೌಡಕ್ಕೆ ಚಾಲನೆ

ಲೋಕದರ್ಶನ ವರದಿ

ರಾಮದುರ್ಗ 06: ಪಟ್ಟಣದ ನವರಾತ್ರಿ ಉತ್ಸವ ಕಮೀಟಿ, ಸ್ವಾತಂತ್ರ್ಯ ಸೇನಾನಿ ವೀರಸಾವರಕರ ಪ್ರತಿಷ್ಠಾದನ ನೇತೃತ್ವದಲ್ಲಿ 9 ದಿನಗಳವರೆಗೆ ನಡೆಯುತ್ತಿರುವ ದುರ್ಗಾಮಾತಾ ದೌಡದ ಪ್ರಯುಕ್ತ  ಪಟ್ಟಣದ ನೇಕಾರಪೇಠೆಯ ಬನಶಂಕರಿ ದೇವಸ್ಥಾನದಿಂದ ಪ್ರಾರಂಭಗೊಂಡ ಮೆರವಣಿಗೆಗೆ ಸ್ಥಳೀಯ ನ್ಯಾಯವಾದಿಗಳ ಸಂಘದ ಪದಾಧಿಕಾರಿಗಳು ಚಾಲನೆ ನೀಡಿದರು.

ನೇಕಾರ ಪೇಠೆಯಿಂದ ಪ್ರಾರಂಭಗೊಂಡ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕಿಲ್ಲಾಗಲ್ಲಿಯಲ್ಲಿರುವ ಅಂಭಾ ಭವಾನಿ ದೇವಸ್ಥಾನಕ್ಕೆ ಆಗಮಿಸಿ ಸಮಾವೇಶಗೊಂಡಿತು. ದೌಡದ ಮೆರವಣಿಗೆಯಲ್ಲಿ ವಯಸ್ಸಿನ ಮೀತಿ ಲೆಕ್ಕಿಸದೇ ನೂರಾರು ಮಹಿಳೆಯರು, ಚಿಕ್ಕ ಮಕ್ಕಳು, ಯುವಕರು, ಹಿರಿಯರು, ಸೇರಿದಂತೆ ಸಾವಿರಾರು ಜನತೆ ಪಾಲ್ಗೊಂಡಿದ್ದರು.

ಯುವ ಮುಖಂಡ ಮಲ್ಲಣ್ಣ ಯಾದವಾಡ, ನ್ಯಾಯವಾದಿಗಳ ಸಂಘದ ಮುಖಂಡರಾದ ಎಸ್.ಎಸ್. ಮಾತನವರ, ಎಸ್.ಎ. ಜಾಮದಾರ, ಆರ್.ಕೆ. ಪಾಟೀಲ, ವ್ಹಿ.ಬಿ. ಸಿದ್ದಾಟಗಿಮಠ, ಎಸ್.ಎಸ್. ದೊಡಮನಿ, ಆರ್. ಎಸ್ ಕೋಪರ್ಡಿ , ಎಂ.ಸಿ ಮುಳಗುಂದ, ಆರ್.ಜಿ. ಅಮಟೂರ ಸೇರಿದಂತೆ ಉತ್ಸವ ಕಮಿಟಿಯ ಯುವಕರು ಸೇರಿದಂತೆ ಇತರರಿದ್ದರು.