ಲೋಕದರ್ಶನವರದಿ
ರಾಣೇಬೆನ್ನೂರು: 12ನೇ ಶತಮಾನದ ಶ್ರೀ ಶರಣ ಅಂಬಿಗರ ಚೌಡಯ್ಯನವರ ಐಕ್ಯ ಮಂಟಪದ ಅಭಿವೃದ್ಧಿಗಾಗಿ ಸರಕಾರ ಹಣವನ್ನು ಬಿಡುಗಡೆ ಮಾಡಿದೆ. ಈ ಅಭಿವೃದ್ಧಿ ಕಾಮಗಾರಿ ತ್ವರಿತಗತಿಯಲ್ಲಿ ಪ್ರಾರಂಭಗೊಂಡು ಗುಣಮಟ್ಟದ ಕೆಲಸದ ಜೊತೆಗೆ ಶರಣ ಚೌಡಯ್ಯನವರ ಐಕ್ಯ ಮಂಟಪ ಹಾಗೂ ಗ್ರಾಮವೂ ಸಹ ಅಭಿವೃದ್ಧಿಯತ್ತ ಸಾಗಲಿದೆ ಎಂದು ಉಡುಪಿಯ ಮೋಘವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ ಕೋಟ್ಯಾನ ಹೇಳಿದರು.
ತಾಲೂಕಿನ ಚೌಡಯ್ಯದಾನಪುರ ಗ್ರಾಮದಲ್ಲಿ ಕನರ್ಾಟಕ ನೀರಾವರಿ ನಿಗಮದ ಇಲಾಖೆಯಿಂದ ಅಂದಾಜು 32 ಕೋಟಿ ರೂಗಳ ವೆಚ್ಚದ ಅಂಬಿಗರ ಚೌಡಯ್ಯ ಸುಕ್ಷೇತ್ರ ಅಭಿವೃದ್ಧಿ ವಿವಿಧ ಕಾಮಗಾರಿಗೆ ಭೂಮಿ ಪೂಜೆ ನೆರವವೇರಿಸಿ ಅವರು ಮಾತನಾಡಿದರು.
ಶರಣ ಅಂಬಿಗರ ಚೌಡಯ್ಯನವರು ಸಮಾಜದ ಅಂಕು ಡೊಂಕು ತಿದ್ದುವಲ್ಲಿ ತಮ್ಮ ಕಠೋರ ಹಾಗೂ ನಿಷ್ಠುರ ವಚನಗಳ ಮೂಲಕ ಅಪಾರವಾದ ಕೊಡುಗೆ ನೀಡಿದ್ದಾರೆ ಇಂತಹ ಶರಣನ ಐಕ್ಯಮಂಟಪದ ಅಭಿವೃದ್ಧಿಗಾಗಿ ಸರಕಾರ ಮುಂದಾಗಿರುವುದು ಶ್ಲ್ಯಾಘನೀಯ ಎಂದರು.
ಐಕ್ಯಮಂಟಪದ ಅಭಿವೃದ್ದಿಯ ಜೊತೆಗೆ ಗ್ರಾಮದ ಅಭಿವೃದ್ಧಿಯ ಸಲುವಾಗಿ ವಿವಿಧ ಕಾಮಗಾರಿಗಳನ್ನೂ ಸಹ ಕೈಗೊಳ್ಳಲಾಗುವುದು. ಐಕ್ಯ ಮಂಟಪದ ಅಭಿವೃದ್ಧಿಗೆ ಸಂಬಂಧಪಟ್ಟ ಇಂಜನೀಯರ್ಗಳು ಹಾಗೂ ಗುತ್ತಿಗೆದಾರರು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು ಜೊತೆಗೆ ಗ್ರಾಮಸ್ಥರೂ ಸಹ ಸಹಕರಿಸಬೇಕೆಂದು ಮನವಿ ಮಾಡಿದರು.
ಅಂಬಿಗರ ಚೌಡಯ್ಯ ಸುಕ್ಷೇತ್ರ ಅಭಿವೃದ್ಧಿ ಸಂಸ್ಥೆಯ ರಾಜ್ಯಾಧ್ಯಕ್ಷ ಸುಭಾಸ್ ಗಡಾದ ಮಾತನಾಡಿ, ಚೌಡಯ್ಯನವರ ಐಕ್ಯ ಮಂಟಪವು ಪ್ರವಾಹ ಬಂದಾಗ ತುಂಗಭದ್ರ ನದಿ ನೀರಿನಲ್ಲಿ ಸಂಪೂರ್ಣ ಜಲಾವೃತಗೊಳ್ಳುವುದರಿಂದ ಭಕ್ತರಲ್ಲಿ ಹಾಗೂ ಶರಣನ ತತ್ವಾನುಯಾಯಿಗಳಲ್ಲಿ ಬೇಸರವಾಗಿತ್ತು. ಇದೀಗ ಅಭಿವೃದ್ಧಿಯ ಕಾಮಗಾರಿಗಳು ಪ್ರಾರಂಭಗೊಳ್ಳುವುದರಿಂದ ಗ್ರಾಮಸ್ಥರಲ್ಲಿ ಮತ್ತು ಭಕ್ತರಲ್ಲಿ ಸಂತಸದ ವಾತಾವರಣ ನಿಮರ್ಾಣವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಎಂ.ಎಫ್.ಜುಂಜಣ್ಣನವರ, ಪ್ರಕಾಶ ತಲಾರಿ, ಅರವಿಂದ ಕೆ, ಕೃಷ್ಣಪ್ಪ ಅಂಬಿಗೇರ, ಇಂಜನೀಯರ್ ಪ್ರಕಾಶ, ಗುತ್ತಿಗೆದಾರ ಶೋಯಬ್, ಸೈಯದ್, ಗ್ರಾಪಂ ಉಪಾಧ್ಯಕ್ಷೆ ರತ್ನವ್ವ ಕರಿಗಾರ, ಸದಸ್ಯರಾದ ಲಕ್ಷ್ಮಣ ದೀಪಾವಳಿ, ವಿಜಯಲಕ್ಷ್ಮೀ ಮಲ್ಲಾಡದ, ಮುಖಂಡರಾದ ವೀರಭದ್ರಪ್ಪ ದೀಪಾವಳಿ, ಸಂಕಪ್ಪ ಅರಸಪ್ಪನವರ, ಮಹಲಿಂಪ್ಪ ಭತ್ತದ, ಚಿಕ್ಕಪ್ಪ ಬಸಾಪುರ, ಬೀರಪ್ಪ ಎರೇಶೀಮಿ, ದೇವರಾಜ ಆನಿಶೆಟ್ರ, ಚನ್ನಮಲ್ಲಪ್ಪ ಚಕ್ರಸಾಲಿ, ಮಾರುತಿ ಕಂಬಳಿ, ನಾಗಪ್ಪ ಭತ್ತದ, ವಿರೇಶ ಗುತ್ತಲ, ಚಂದ್ರಪ್ಪ ದಳವಾಯಿ, ಸಿದ್ದಪ್ಪ ನಾಗನೂರ, ಮಲ್ಲಿಕಾಜರ್ುನ ದೀಪಾವಳಿ, ಬಸವರಾಜ ಬಾಕರ್ಿ, ಗುಡ್ಡು ಭತ್ತದ ಸೇರಿದಂತೆ ಮತ್ತಿತರರು ಇದ್ದರು.